Prev 1 2 3 4 5 Next
21. ‘ಅಂಕಿತನಾಮ’ ಪದಕ್ಕೆ ಉದಾಹರಣೆ.
A. ಶಾಲೆ
B. ರಾಮನಾಥ
C. ಶಿಕ್ಷಕ
D. ತಾವು
ANSWER:B
SOLUTION: ನಮಗೆ ಅಗತ್ಯವೆಂದು ಕಂಡುಬಂದ, ಇಷ್ಟವೆನಿಸಿದ ವಸ್ತುವಿಷಯಗಳೆಲ್ಲದಕ್ಕೂ ಒಂದೊಂದು ಹೆಸರಿಟ್ಟು ಗುರುತಿಸುತ್ತೇವೆ. ಮುಂದೆ, ಅದೇ ಹೆಸರಿನ ಮೂಲಕ ಆ ವ್ಯಕ್ತಿಯನ್ನೇ ಘಟಕವನ್ನೋ ಪರಿಚಯಿಸತೊಡಗುತ್ತೇವೆ. ರಾಮಣ್ಣ, ರೆಹಮಾನ್, ಕಪಿ, ನಾಯಿ, ಸೀಬೆ,ಮಾವು, ತೇಗ, ಹೊನ್ನೆ, ಗುಲಾಬಿ, ಹಿಮಾಲಯ, ಗಂಗಾನದಿ, ಹನುಮಂತನ ಗುಡ್ಡ-ಹೀಗೆ ಒಂದೊಂದನ್ನೇ ಪ್ರತ್ಯೇಕವಾಗಿ ಗುರುತಿಸಲು ಇಟ್ಟ ಹೆಸರು ಅಂಕಿತನಾಮವೆನಿಸುತ್ತದೆ.
22. ‘ಪರ್ವತ’ ಈ ಪದದ ವಸ್ತುವಾಚಕದ ವಿಧ.
A. ಸರ್ವನಾಮ
B. ಅಂಕಿತನಾಮ
C. ರೂಢನಾಮ
D. ಅನ್ವರ್ಥನಾಮ
ANSWER:C
SOLUTION: ರೂಡನಾಮ – ರೂಢಿಯಿಂದ ಬಂದ ಸಾಮಾನ್ಯವಾಚಕಗಳು(ಹೆಸರನ್ನು ಸೂಚಿಸುವ ಶಬ್ದಗಳು) ರೂಢನಾಮಗಳು.
23. ‘ಅನ್ವರ್ಥನಾಮ’ ಪದಕ್ಕೆ ಉದಾಹರಣೆ
A. ಶಾಲೆ
B. ರಾಮನಾಥ
C. ಶಿಕ್ಷಕ
D. ತಾವು
ANSWER:C
SOLUTION: ಅರ್ಥಕ್ಕೆ ಅನುಸಾರವಾಗಿ ಅಥವಾ ವಸ್ತುವಿನ ಲಕ್ಷಣಕ್ಕನುಸಾರವಾಗಿ ಕರೆಯಲ್ಪಡುವ ಹೆಸರುಗಳಿಗೆ ಅನ್ವರ್ಥಕ ನಾಮ ಎಂದು ಕರೆಯುವರು. ಉದಾಹರಣೆಗೆ ವೈದ್ಯ, ಶಿಕ್ಷಕ, ಕುಂಟ, ಇತ್ಯಾದಿಗಳು.
24. ಅನ್ವರ್ಥಕ ನಾಮ ಪದಕ್ಕೆ ಉದಾಹರಣೆ.
A. ಪಟ್ಟಣ
B. ವಿಜ್ಞಾನಿ
C. ಪರ್ವತ
D. ಹುಡುಗ
ANSWER:B
SOLUTION: ಅರ್ಥಕ್ಕೆ ಅನುಸಾರವಾಗಿ ಅಥವಾ ವಸ್ತುವಿನ ಲಕ್ಷಣಕ್ಕನುಸಾರವಾಗಿ ಕರೆಯಲ್ಪಡುವ ಹೆಸರುಗಳಿಗೆ ಅನ್ವರ್ಥಕ ನಾಮ ಎಂದು ಕರೆಯುವರು. ಉದಾಹರಣೆಗೆ ವೈದ್ಯ, ಶಿಕ್ಷಕ, ಕುಂಟ, ಇತ್ಯಾದಿಗಳು.
25. ‘ವಿದ್ವಾಂಸ’ – ಪದವು ಈ ನಾಮ ಪದಕ್ಕೆ ಸೇರಿದೆ.
A. ರೂಢನಾಮ
B. ಅನ್ವರ್ಥಕ ನಾಮ
C. ಅಂಕಿತನಾಮ
D. ಭಾವನಾಮ
ANSWER: B
SOLUTION: ಅರ್ಥಕ್ಕೆ ಅನುಸಾರವಾಗಿ ಅಥವಾ ವಸ್ತುವಿನ ಲಕ್ಷಣಕ್ಕನುಸಾರವಾಗಿ ಕರೆಯಲ್ಪಡುವ ಹೆಸರುಗಳಿಗೆ ಅನ್ವರ್ಥಕ ನಾಮ ಎಂದು ಕರೆಯುವರು. ಉದಾಹರಣೆಗೆ ವೈದ್ಯ, ಶಿಕ್ಷಕ, ಕುಂಟ, ಇತ್ಯಾದಿಗಳು.
26. ‘ಪೂಜಾರಿ’ ಪದವು ಈ ನಾಮ ಪದಕ್ಕೆ ಉದಾಹರಣೆಯಾಗಿದೆ.
A. ಅಂಕಿತನಾಮ
B. ರೂಢನಾಮ
C. ಅನ್ವರ್ಥನಾಮ
D. ನಾವು
ANSWER: C
SOLUTION:ಅರ್ಥಕ್ಕೆ ಅನುಸಾರವಾಗಿ ಅಥವಾ ವಸ್ತುವಿನ ಲಕ್ಷಣಕ್ಕನುಸಾರವಾಗಿ ಕರೆಯಲ್ಪಡುವ ಹೆಸರುಗಳಿಗೆ ಅನ್ವರ್ಥಕ ನಾಮ ಎಂದು ಕರೆಯುವರು. ಉದಾಹರಣೆಗೆ ವೈದ್ಯ, ಶಿಕ್ಷಕ, ಕುಂಟ, ಇತ್ಯಾದಿಗಳು.
27. ರೂಢನಾಮ ಪದಕ್ಕೆ ಉದಾಹರಣೆ ಇದಾಗಿದೆ.
A. ಉಡುಪಿ
B. ಮರ
C. ಹೋಳಿಗೆ
D. ಸರ್ವನಾಮ
ANSWER: B
SOLUTION: ರೂಡನಾಮ – ರೂಢಿಯಿಂದ ಬಂದ ಸಾಮಾನ್ಯವಾಚಕಗಳು(ಹೆಸರನ್ನು ಸೂಚಿಸುವ ಶಬ್ದಗಳು) ರೂಢನಾಮಗಳು.
28. ಜಾತ್ರೆ – ಪದವು ಈ ನಾಮ ಪದಕ್ಕೆ ಉದಾಹರಣೆಯಾಗಿದೆ.
A. ರೂಢನಾಮ
B. ಅಂಕಿತನಾಮ
C. ಅನ್ವರ್ಥಕ ನಾಮ
D. ನಾವು
ANSWER:A
SOLUTION: ರೂಡನಾಮ – ರೂಢಿಯಿಂದ ಬಂದ ಸಾಮಾನ್ಯವಾಚಕಗಳು(ಹೆಸರನ್ನು ಸೂಚಿಸುವ ಶಬ್ದಗಳು) ರೂಢನಾಮಗಳು.
29.‘ಹಿರಿದು’ ಪದವು ಈ ನಾಮ ಪದಕ್ಕೆ ಉದಾಹರಣೆಯಾಗಿದೆ.
A. ಅಂಕಿತನಾಮ
B. ಅನ್ವರ್ಥಕ ನಾಮ
C. ಗುಣವಾಚಕ
D. ಸಂಖ್ಯಾ ವಾಚಕ
ANSWER: C
SOLUTION: ವಿಶೇಷಣವು ನಾಮಪದ ಅಥವಾ ಸರ್ವನಾಮವನ್ನು ಮಾರ್ಪಡಿಸುವ ಪದವಾಗಿದೆ. ಗುಣವಾಚಕಗಳು ನಾಮಪದದ ಗುಣಗಳನ್ನು ಅಥವಾ ಅಸ್ತಿತ್ವದ ಸ್ಥಿತಿಯನ್ನು ವಿವರಿಸಬಹುದು ಮತ್ತು ನಾಮಪದಗಳ ಪ್ರಮಾಣವನ್ನು ಸಹ ವಿವರಿಸಬಹುದು. ಉದಾಹರಣೆಗೆ, “ಸುಂದರ”, “ನಯವಾದ” ಮತ್ತು “ಭಾರೀ” ಎಲ್ಲಾ ವಿಶೇಷಣಗಳಾಗಿವೆ.