1. ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡಿಕೊಳ್ಳುವುದು.
A) ಕೃದಂತ
B) ಸಂಧಿ
C) ಸಮಾಸ
D) ನಾಮಪದ
ಉತ್ತರ: B
ವಿವರಣೆ: ಎರಡು ವರ್ಣಗಳು (ಅಕ್ಷರಗಳು) ಕಾಲವಿಳಂಬವಿಲ್ಲದಂತೆ ಸೇರುವುದೇ ಸಂಧಿಯೆನಿಸುವುದು.
2. ಕನ್ನಡ ಸಂಧಿಗಳಲ್ಲಿ _ ವಿಧಗಳಿವೆ.
A) 3
B) 5
C) 4
D) 2
ಉತ್ತರ: A
ವಿವರಣೆ: ಕನ್ನಡದ ಮೂರು ಸಂಧಿಗಳು. : 1)ಲೋಪ ಸಂಧಿ 2)ಆಗಮ ಸಂಧಿ 3)ಆದೇಶ ಸಂಧಿ
3. ಸ್ವರಕ್ಕೆ ಸ್ವರವು ಪರವಾಗಿ ಸಂಧಿಯಾದರೇ?
A) ಪ್ರಕೃತಿಭಾವ
B) ಸ್ವರಸಂಧಿ
C) ವ್ಯಂಜನಸಂಧಿ
D) ಆದೇಶಸಂಧಿ
ಉತ್ತರ: B
ವಿವರಣೆ: ಸ್ವರಕ್ಕೆ ಸ್ವರವು ಪರವಾಗಿ ಸಂಧಿಯಾದರೇ ಸ್ವರಸಂಧಿ.
4. ಬಿಡಿಸಿ ಬರೆದಾಗ ಮೊದಲು ಬರುವ ಪದವನ್ನು _ ಎನ್ನುವರು.
A) ಉತ್ತರಪದ
B) ಪೂರ್ವಪದ
C) ಸಂಧಿಪದ
D) ಸಮಸ್ತಪದ
ಉತ್ತರ: B
ವಿವರಣೆ: ಬಿಡಿಸಿ ಬರೆದಾಗ ಮೊದಲು ಬರುವ ಪದವನ್ನು ಪೂರ್ವಪದ ಎನ್ನುವರು.
5. ಆ ಐಶ್ವರ್ಯ ಯಾವುದಕ್ಕೆ ಉದಾಹರಣೆ.
A) ಲೋಪ ಸಂಧಿ
B) ಗುಣ ಸಂಧಿ
C) ಆಗಮ ಸಂಧಿ
D) ಪ್ರಕೃತಿಭಾವ
ಉತ್ತರ: D
ವಿವರಣೆ: ಆ ಎಂಬ ಶಬ್ದದ ಮುಂದೆ ಅ ಆ ಐ ಔ ಸ್ವರಗಳು ಬಂದರೆ ಸಂಧಿಕಾರ್ಯ ಮಾಡಬಾರದು (ಪ್ರಕೃತಿಭಾವ ಬರುವುದು).
6. ಇವು ಸಂಸ್ಕೃತ ಸಂಧಿಯ ಪ್ರಕಾರಗಳು?
A) ಸ್ವರ ಸಂಧಿ
B) ವ್ಯಂಜನಸಂಧಿ
C) ಸ್ವರಸಂಧಿ ಮತ್ತು ವ್ಯಂಜನ ಸಂಧಿ
D) ಮೇಲಿನ ಯಾವುದು ಅಲ್ಲ
ಉತ್ತರ: C
ವಿವರಣೆ: ಎರಡು ಸ್ವರಗಳು ಸಂಧಿಸಿದಾಗ ಆಗುವ ಬದಲಾವಣೆ. ವ್ಯಂಜನದೊಂದಿಗೆ ಸ್ವರ ಅಥವಾ ವ್ಯಂಜನ ಸಂಧಿಸಿದಾಗ ಆಗುವ ಬದಲಾವಣೆ. ವಿಸರ್ಗದೊಂದಿಗೆ (ಃ) ಸ್ವರ ಅಥವಾ ವ್ಯಂಜನ ಸಂಧಿಸಿದಾಗ ಆಗುವ ಬದಲಾವಣೆ.ಆದ್ದರಿಂದ, ಸ್ವರ ಸಂಧಿ ಮತ್ತು ವ್ಯಂಜನ ಸಂಧಿ ಇವೆರಡೂ ಸಂಸ್ಕೃತ ಸಂಧಿಯ ಪ್ರಮುಖ ಪ್ರಕಾರಗಳಾಗಿವೆ.
7. ಕನ್ನಡದ ಸ್ವರ ಸಂಧಿಗಳು
A) ಯಣ್ ಸಂಧಿ – ಅನುನಾಸಿಕ ಸಂಧಿ
B) ಸವರ್ಣದೀರ್ಘ ಸಂಧಿ – ಗುಣ ಸಂಧಿ
C) ಲೋಪ ಸಂಧಿ – ಆದೇಶ ಸಂಧಿ
D) ಲೋಪ ಸಂಧಿ – ಆಗಮ ಸಂಧಿ
ಉತ್ತರ: D
ವಿವರಣೆ: ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ ಲೋಪಸಂಧಿಯೆಂದು ಹೆಸರು.ಮಾತು + ಇಲ್ಲ = ಮಾತಿಲ್ಲ (ಉಕಾರ ಲೋಪ).
8. ಈ ಕೆಳಗಿನವುಗಳಲ್ಲಿ ಸವರ್ಣವಲ್ಲದ ಜೋಡಿ ಯಾವುದು?
A) ಅ,ಆ
B) ಐ,ಔ
C) ಉ,ಊ
D)ಇ, ಈ
ಉತ್ತರ: B
ವಿವರಣೆ: ಸವರ್ಣವಲ್ಲದ ಜೋಡಿ – ಐ,ಔ. ಸವರ್ಣದ ಜೋಡಿಗಳು ಅ-ಆ, ಉ-ಊ,ಇ -ಈ.
9. ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಲೋಪವಾದರೆ_ ಸಂಧಿ ಎನ್ನುವರು.
A) ಲೋಪ ಸಂಧಿ
B) ಗುಣ ಸಂಧಿ
C) ಆಗಮ ಸಂಧಿ
D) ಆದೇಶ ಸಂಧಿ
ಉತ್ತರ: A
ವಿವರಣೆ: ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಲೋಪವಾದರೆ ಲೋಪ ಸಂಧಿಸಂಧಿ ಎನ್ನುವರು. ಮಾತು + ಇಲ್ಲ = ಮಾತಿಲ್ಲ (ಉಕಾರ ಇಲ್ಲದಾಯಿತು).
10. ಊರುರು ಎಂಬುದು ——ಸಂಧಿ.
A) ಆಗಮ ಸಂಧಿ
B) ಲೋಪ ಸಂಧಿ
C) ಸವರ್ಣದೀರ್ಘ ಸಂಧಿ
D) ಗುಣ ಸಂಧಿ
ಉತ್ತರ: B
ವಿವರಣೆ: ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಲೋಪವಾದರೆ ಲೋಪ ಸಂಧಿಸಂಧಿ ಎನ್ನುವರು. ಮಾತು + ಇಲ್ಲ = ಮಾತಿಲ್ಲ (ಉಕಾರ ಇಲ್ಲದಾಯಿತು).
11. ಆಗಮ ಸಂಧಿಗೆ ಉದಾಹರಣೆಗಳು.
A) ವೇದಿಯಲ್ಲಿ – ಮಗುವಿಗೆ
B) ಬೆಟ್ಟದಾವರೆ – ಗಿರೀಶ
C) ಮಾತಂತು- ಬಂದಲ್ಲದೆ
D) ಇರುಳಳಿದು – ಸೂರ್ಯೋದಯ
ಉತ್ತರ:A
ವಿವರಣೆ: ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು. ಗಿರಿ+ಅನ್ನು=ಗಿರಿ+ಯ್+ಅನ್ನು=ಗಿರಿಯನ್ನು, ಗೋ+ಅನ್ನು=ಗೋವನ್ನು.
12. ಪತ್ರ+ಅನ್ನು = ಪತ್ರವನ್ನು ಇದು ಯಾವ ಸಂಧಿಗೆ ಉದಾಹರಣೆ.
A) ಲೋಪ ಸಂಧಿ
B) ಆಗಮ ಸಂಧಿ
C) ಆದೇಶ ಸಂಧಿ
D) ಗುಣ ಸಂಧಿ
ಉತ್ತರ: B
ವಿವರಣೆ: ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು. ಗಿರಿ+ಅನ್ನು=ಗಿರಿ+ಯ್+ಅನ್ನು=ಗಿರಿಯನ್ನು, ಗೋ+ಅನ್ನು=ಗೋವನ್ನು.
13. ಮನೆ+ಅಲ್ಲಿ = ಮನೆಯಲ್ಲಿ ಇದು ಯಾವ ಸಂಧಿಗೆ ಉದಾಹರಣೆ
A) ಆದೇಶ ಸಂಧಿ
B) ಆಗಮ ಸಂಧಿ
C) ಲೋಪ ಸಂಧಿ
D) ಸವರ್ಣದೀರ್ಘ ಸಂಧಿ
ಉತ್ತರ: B
ವಿವರಣೆ: ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು. ಗಿರಿ+ಅನ್ನು=ಗಿರಿ+ಯ್+ಅನ್ನು=ಗಿರಿಯನ್ನು, ಗೋ+ಅನ್ನು=ಗೋವನ್ನು.
14. ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಬಂದರೆ __ ಸಂಧಿ ಎನ್ನುವರು.
A) ಲೋಪ ಸಂಧಿ
B) ಆಗಮ ಸಂಧಿ
C) ಆದೇಶ ಸಂಧಿ
D) ಸವರ್ಣದೀರ್ಘ ಸಂಧಿ
ಉತ್ತರ: B
ವಿವರಣೆ: ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು. ಗಿರಿ+ಅನ್ನು=ಗಿರಿ+ಯ್+ಅನ್ನು=ಗಿರಿಯನ್ನು, ಗೋ+ಅನ್ನು=ಗೋವನ್ನು.
15. ಪೂರ್ವಪದದಲ್ಲಿರುವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ ಆದೇಶವಾಗಿ ಬರುವ ಅಕ್ಷರ?
A) ಓ
B) ಏ
C) ಋ
D) ಅರ್
ಉತ್ತರ: B
ವಿವರಣೆ:ಪೂರ್ವಪದದಲ್ಲಿರುವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ ಆದೇಶವಾಗಿ ಬರುವ ಅಕ್ಷರ ಏ.
16. ಕ, ತ,ಪ ವ್ಯಂಜನಾಕ್ಷರಗಳ ಬದಲಾಗಿ ಗ,ದ,ಬ ವ್ಯಂಜನಾಕ್ಷರಗಳು ಆದೇಶವಾಗಿ ಬರುವುದಕ್ಕೆ _ ಸಂಧಿ ಎನ್ನುವರು.
A) ಲೋಪ ಸಂಧಿ
B) ಗುಣ ಸಂಧಿ
C) ಆಗಮ ಸಂಧಿ
D) ಆದೇಶ ಸಂಧಿ
ಉತ್ತರ: D
ವಿವರಣೆ: ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, ಜ, ಟ, ತ, ಪ ಆಗಿದ್ದರೆ ಗ, ಜ, ಡ, ದ, ಬ ಆಗಿ ಪರಿವರ್ತನೆ ಕಾಣುವುವು. ಮಳೆ + ಕಾಲ = ಮಳೆಗಾಲ.
17. ಸವರ್ಣಸ್ವರಗಳು ಪರಸ್ಪರ ಪರವಾಗಿ ದೀರ್ಘಸ್ವರ ಆದೇಶವಾಗುವ ಸಂಧಿ?
A) ಗುಣಸಂಧಿ
B) ಸವರ್ಣ ದೀರ್ಘಸಂಧಿ
C) ವೃದ್ಧಿಸಂಧಿ
D) ಯಣ್ ಸಂಧಿ
ಉತ್ತರ: B
ವಿವರಣೆ: ಸವರ್ಣ ಸ್ವರಗಳು ಒಂದನ್ನೊಂದು ಕೂಡಿದಾಗ, ಅದೇ ಜಾತಿಯ ದೀರ್ಘಸ್ವರವು ಸಂಧಿಯ ರೂಪದಲ್ಲಿ ಬರುವುದು. ಇದನ್ನೇ ಸವರ್ಣದೀರ್ಘಸಂಧಿ ಎನ್ನುವರು. ಮಹ + ಆನಂದ + ಮಹಾನಂದ (ಅ + ಆ = ಆ)
18. ಈ ಕೆಳಗಿನವುಗಳಲ್ಲಿ ಸವರ್ಣದೀರ್ಘಸಂಧಿಗೆ ಉದಾಹರಣೆಯಲ್ಲದ ಪದ ಯಾವುದು?
A) ಗಿರೀಶ
B) ಮಹೇಶ
C) ರವೀಂದ್ರ
D) ದೇವಾಲಯ
ಉತ್ತರ: B
ವಿವರಣೆ: ಸವರ್ಣ ಸ್ವರಗಳು ಒಂದನ್ನೊಂದು ಕೂಡಿದಾಗ, ಅದೇ ಜಾತಿಯ ದೀರ್ಘಸ್ವರವು ಸಂಧಿಯ ರೂಪದಲ್ಲಿ ಬರುವುದು. ಇದನ್ನೇ ಸವರ್ಣದೀರ್ಘಸಂಧಿ ಎನ್ನುವರು. ಗಿರಿ + ಈಶ = ಗಿರೀಶ (ಇ + ಈ = ಈ).ಅ-ಆ ಕಾರಗಳಿಗೆ ಇ-ಈ ಕಾರಗಳು ಸೇರಿದಾಗ ‘ಏ’, ಉ-ಊ ಕಾರಗಳು ಸೇರಿದಾಗ “ಓ”, ಋ ಕಾರ ಪರವಾದರೆ ‘ಅರ್’ ಸಂಧಿ ರೂಪದಲ್ಲಿ ಬರುತ್ತದೆ. ಇದನ್ನೇ ಗುಣ ಸಂಧಿ ಎನ್ನಲಾಗುವುದು. ಮಹ + ಈಶ = ಮಹೇಶ (ಅ + ಈ = ಏ)
19. ಲೋಪಸಂಧಿಗೆ ಉದಾಹರಣೆ.
A) ಕೈಯನ್ನು
B) ಮಹಾತ್ಮ
C) ಮಳೆಗಾಲ
D) ಊರೂರು
ಉತ್ತರ: D
ವಿವರಣೆ: ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ ಲೋಪಸಂಧಿಯೆಂದು ಹೆಸರು. ಊರೂ+ ಊರೂ = ಊರೂರು
20. ಮೇಲೆ+ಇಟ್ಟು ಕೂಡಿಸಿ ಬರೆದಾಗ.
A) ಮೇಲಿಟ್ಟು
B) ಮೇಲೆಇಟ್ಟು
C) ಮೇಲೆಹಿಟ್ಟು
D) ಮೇಲಿಟು
ಉತ್ತರ: A
ವಿವರಣೆ: ಮೇಲೆ+ಇಟ್ಟು = ಮೇಲಿಟ್ಟು .
21. ನಾನು+ಒಬ್ಬ ಕೂಡಿಸಿ ಬರೆದಾಗ
A) ನಾನುಒಬ್ಬ
B) ನಾನುಬ್ಬ
C) ನಾನೊಬ್ಬ
D) ನಾನೋಬ್ಬ
ಉತ್ತರ: C
ವಿವರಣೆ: ನಾನು + ಒಬ್ಬ = ನಾನೊಬ್ಬ
22. ಗಿರೀಶ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
A) ಗುಣ ಸಂಧಿ
B) ಯಣ್ ಸಂಧಿ
C) ಸವರ್ಣದೀರ್ಘ ಸಂಧಿ
D) ವೃದ್ಧಿ ಸಂಧಿ
ಉತ್ತರ: C
ವಿವರಣೆ: ಸವರ್ಣ ಸ್ವರಗಳು ಒಂದನ್ನೊಂದು ಕೂಡಿದಾಗ, ಅದೇ ಜಾತಿಯ ದೀರ್ಘಸ್ವರವು ಸಂಧಿಯ ರೂಪದಲ್ಲಿ ಬರುವುದು. ಇದನ್ನೇ ಸವರ್ಣದೀರ್ಘಸಂಧಿ ಎನ್ನುವರು. ಗಿರಿ + ಈಶ = ಗಿರೀಶ (ಇ + ಈ = ಈ)
23. ಇದು ಗುಣಸಂಧಿಗೆ ಉದಾಹರಣೆಯಾದ ಪದ?
A) ಕವೀಶ
B) ಸೂರ್ಯೋದಯ
C) ವನೌಷಧ
D) ಮಾತ್ರಂಶ
ಉತ್ತರ: B
ವಿವರಣೆ: ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು. ಸೂರ್ಯ + ಉದಯ = ಸೂರ್ಯೋದಯ (ಅ + ಉ = ಓ)
24. ʼವಧೂಪೇತʼ ಈ ಪದವನ್ನು ಬಿಡಿಸಿ ಬರೆದಾಗ?
A) ವಧು + ಉಪೇತ
B) ವಧೂ + ಪೇತ
C) ವಧೂ + ಉಪೇತ
D) ವಧು+ಉಪೇತ
ಉತ್ತರ: C
ವಿವರಣೆ: ವಧೂಪೇತʼ =ವಧೂ + ಉಪೇತ
25. ಪೂಳ್ದೆಡೆ : ಲೋಪ ಸಂಧಿ : : ಭೇದವಿಲ್ಲ : __
A) ವೃದ್ಧಿ ಸಂಧಿ
B) ಆಗಮ ಸಂಧಿ
C) ಯಣ್ ಸಂಧಿ
D) ಗುಣಸಂಧಿ
ಉತ್ತರ: B
ವಿವರಣೆ: ಭೇದವಿಲ್ಲ= ಭೇದ +ಇಲ್ಲ. ಮೊದಲ ‘ಪದವು ಉ, ಊ, ಋ, ಋ, ಒ, ಓ, ಔ ವರ್ಣಗಳಿಂದ ಕೊನೆಗೊಂಡಿದ್ದು, ಮುಂದಣ ಪದದ ಪ್ರಾರಂಭದಲ್ಲಿ ಯಾವುದಾದರೂ ಬೇರೊಂದು ಸ್ವರ ಬಂದು ಸೇರಿದ್ದಾಗ ‘ವ್’ ಎಂಬ ಹೊಸ ವರ್ಣ ಆ ಜಾಗದಲ್ಲಿ ಕಾಣಿಸಿಕೊಳ್ಳುವುದು. ಇದನ್ನೇ ವಕಾರಾಗಮ ಸಂಧಿ ಎನ್ನಲಾಗುವುದು.
26. ಪೀಠೋಪಕರಣ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
A) ಸವರ್ಣದೀರ್ಘ ಸಂಧಿ
B) ಗುಣ ಸಂಧಿ
C) ಆದೇಶ ಸಂಧಿ
D) ವೃದ್ಧಿ ಸಂಧಿ
ಉತ್ತರ: B
ವಿವರಣೆ: ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು. ಪೀಠೋಪಕರಣ = ಪೀಠ + ಉಪಕರಣ
27. ಪೂರ್ವಪದದಲ್ಲಿವರು ಅ,ಆ ಕಾರಗಳಿಗೆ ಓ,ಔ ಕಾರವು ಪರವಾದರೆ ——– ಅಕ್ಷರ ಆದೇಶವಾಗಿ ಬರುವದು?
A) ಒ
B) ಓ
C) ಔ
D) ಐ ಮತ್ತು ಔ
ಉತ್ತರ: C
ವಿವರಣೆ: ಪೂರ್ವಪದದಲ್ಲಿವರು ಅ,ಆ ಕಾರಗಳಿಗೆ ಓ,ಔ ಕಾರವು ಪರವಾದರೆ ಔಅಕ್ಷರ ಆದೇಶವಾಗಿ ಬರುವದು.
ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು..
28. ಈ ಕೆಳಗಿನವುಗಳಲ್ಲಿ ವೃದ್ಧಿ ಸಂಧಿಗೆ ಉದಾಹರಣೆಯಲ್ಲದ ಪದ ಯಾವುದು?
A) ಏಕೈಕ
B) ಜನೌಷಧ
C) ಜನೈಕ್ಯ
D) ಅತ್ಯಂತ
ಉತ್ತರ: D
ವಿವರಣೆ: ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು. ಏಕ + ಏಕ = ಏಕ್ + ಐಕ (ಅ + ಏ + ಐ).
29. ಕರ್ತೃ + ಅರ್ಥ =
A) ಕರ್ತ್ರರ್ಥ
B) ಕರ್ತೃರ್ಥ
C) ಕರ್ತ್ರಾರ್ಥ
D) ಕರ್ತರ್ಥ
ಉತ್ತರ: A
ವಿವರಣೆ: ಕರ್ತೃ + ಅರ್ಥ = ಕರ್ತ್ರರ್ಥ . ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.
30. ‘ಪಯಶ್ಯಯನ, ಶರಚ್ಚಂದ್ರ’ ಪದಗಳು ಈ ಸಂಧಿಗೆ ಉದಾಹರಣೆಯಾಗಿವೆ;
A) ಶ್ಚುತ್ವ ಸಂಧಿ
B) ವೃದ್ಧಿ ಸಂಧಿ
C) ಗುಣ ಸಂಧಿ
D)ಆದೇಶ ಸಂಧಿ
ಉತ್ತರ: A
ವಿವರಣೆ: ಸಕಾರತವರ್ಗಾಕ್ಷರಗಳಿಗೆ ಶಕಾರ ಚವರ್ಗಾಕ್ಷರಗಳು ಪರವಾದಾಗ (ಎದುರಿಗೆ ಬಂದಾಗ) ಸಕಾರಕ್ಕೆ ಶಕಾರವೂ, ತವರ್ಗಕ್ಕೆ ಚವರ್ಗವೂ ಆದೇಶಗಳಾಗಿ ಬರುತ್ತವೆ. ಪಯಸ್ + ಶಯನ = ಪಯಶ್ + ಶಯನ = ಪಯಶ್ಶಯನ (ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ). ಶರತ್ + ಚಂದ್ರ = ಶರಚ್ + ಚಂದ್ರ = ಶರಚ್ಚಂದ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)
31. ಧೃತಿಗೆಟ್ಟು : ಆದೇಶ ಸಂಧಿ : : ದ್ರವ್ಯಾರ್ಥಿ : __
A) ವೃದ್ಧಿ ಸಂಧಿ
B)ಯಣ್ ಸಂಧಿ
C) ಸವರ್ಣದೀರ್ಘ ಸಂಧಿ
D) ಆಗಮ ಸಂಧಿ
ಉತ್ತರ: C
ವಿವರಣೆ:ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು. ದ್ರವ್ಯಾರ್ಥಿ = ದ್ರವ್ಯ + ಅರ್ಥ
32.’ಸನ್ಮಾನ, ಉನ್ಮಾದ’ ಪದಗಳು ಈ ಸಂಧಿಗೆ ಉದಾಹರಣೆಯಾಗಿವೆ;
A) ಗುಣ ಸಂಧಿ
B) ಲೋಪ ಸಂಧಿ
C) ಸವರ್ಣದೀರ್ಘ ಸಂಧಿ
D) ಅನುನಾಸಿಕ ಸಂಧಿ
ಉತ್ತರ: D
ವಿವರಣೆ:ವರ್ಗದ = ಪ್ರಥಮ ವರ್ಣಗಳಾದ ಕ್, ಚ್, ಟ್, ತ್, ವ್ಯಂಜನಗಳಿಗೆ ಕ್ರಮವಾಗಿ ಙ, ಞ, ಣ್, ನ್, ವ್ಯಂಜನಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ ಆಗುವುವು. ಸತ್ + ಮಾನ = ಸನ್ + ಮಾನ = ಸನ್ಮಾನ (ಇಲ್ಲಿ ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶವಾಗಿದೆ).
33. ಏಕೈಕ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
A) ವೃದ್ಧಿ ಸಂಧಿ
B) ಆಗಮ ಸಂಧಿ
C) ಆದೇಶ ಸಂಧಿ
D) ಗುಣ ಸಂಧಿ
ಉತ್ತರ: A
ವಿವರಣೆ: ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು. ಏಕ + ಏಕ = ಏಕ್ + ಐಕ (ಅ + ಏ + ಐ).
34. ಗುಣಸಂಧಿಗೆ ಉದಾಹರಣೆಯಾದ ಪದ :
A) ಅತಂತ್ಯ
B) ದಿಗಂತ
C) ಜ್ಞಾನೇಶ್ವರ
D) ಸನ್ಮಾನ
ಉತ್ತರ: C
ವಿವರಣೆ:ಅ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು. ಜ್ಞಾನೇಶ್ವರ =ಜ್ಞಾನ + ಈಶ್ವರ
35. ವಾಚನಾಲಯ, ಸಂಗ್ರಹಾಲಯ, ನಿಜಾಶ್ರಮ, ವಲ್ಕಲಾವೃತ, ದ್ರವ್ಯಾರ್ಥಿ’ ಪದಗಳು ಈ ಸಂಧಿಗೆ ಉದಾಹರಣೆಯಾಗಿವೆ;
A) ಗುಣ ಸಂಧಿ
B) ಲೋಪ ಸಂಧಿ
C) ಅನುನಾಸಿಕ ಸಂಧಿ
D) ಸವರ್ಣದೀರ್ಘ ಸಂಧಿ
ಉತ್ತರ: D
ವಿವರಣೆ:ಸವರ್ಣ ಸ್ವರಗಳು ಒಂದನ್ನೊಂದು ಕೂಡಿದಾಗ, ಅದೇ ಜಾತಿಯ ದೀರ್ಘಸ್ವರವು ಸಂಧಿಯ ರೂಪದಲ್ಲಿ ಬರುವುದು. ಇದನ್ನೇ ಸವರ್ಣದೀರ್ಘಸಂಧಿ ಎನ್ನುವರು. ವಾಚನಾಲಯ = ವಾಚನ + ಆಲಯ.
36. ವೃದ್ಧಿಸಂಧಿಗೆ ಉದಾಹರಣೆ ಇದು;
A) ದಿಗಂತ
B) ಶರಶ್ಚಂದ್ರ
C) ಅಬ್ಧಿ
D) ಅಷ್ಟೈಶ್ವರ್ಯ
ಉತ್ತರ: D
ವಿವರಣೆ:ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು.ಅಷ್ಟ + ಐಶ್ವರ್ಯ = ಅಷ್ಟ್ + ಐಶ್ವರ್ಯ = ಅಷ್ಟೈಶ್ವರ್ಯ (ಅ + ಐ = ಐ)
37. ‘ಮಹರ್ಷಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
A) ಗುಣ ಸಂಧಿ
B) ಆಗಮ ಸಂಧಿ
C) ಲೋಪ ಸಂಧಿ
D) ಆದೇಶ ಸಂಧಿ
ಉತ್ತರ: A
ವಿವರಣೆ:ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು.ಮಹಾ + ಋಷಿ = ಮಹರ್ಷಿ (ಆ + ಋ = ಆರ್).
38. ಶ್ಚುತ್ವಸಂಧಿಗೆ ಉದಾಹರಣೆಯಾದ ಪದ :
A) ಅಷ್ಟೆಶ್ವರ್ಯ
B) ಜ್ಞಾನೇಶ್ವರ
C) ಬೃಹಚ್ಛತ್ರ
D) ಕೋಟ್ಯಧೀಶ್ವರ
ಉತ್ತರ: C
ವಿವರಣೆ: ಸಕಾರತವರ್ಗಾಕ್ಷರಗಳಿಗೆ ಶಕಾರ ಚವರ್ಗಾಕ್ಷರಗಳು ಪರವಾದಾಗ (ಎದುರಿಗೆ ಬಂದಾಗ) ಸಕಾರಕ್ಕೆ ಶಕಾರವೂ, ತವರ್ಗಕ್ಕೆ ಚವರ್ಗವೂ ಆದೇಶಗಳಾಗಿ ಬರುತ್ತವೆ. ಬೃಹತ್ + ಛತ್ರ = ಬೃಹಚ್ + ಛತ್ರ = ಬೃಹಚ್ಛತ್ರ
(ತಕಾರಕ್ಕೆ ಛಕಾರ ಪರವಾಗಿ, ತಕಾರಕ್ಕೆ ಚಕಾರಾದೇಶ)
39. ವಾಙ್ಮಯ : ಅನುನಾಸಿಕ ಸಂಧಿ : : ಜನೈಕ್ಯ :__
A) ಜಶ್ತ್ವ ಸಂಧಿ
B) ವೃದ್ಧಿ ಸಂಧಿ
C) ಗುಣಸಂಧಿ
D) ಆದೇಶ ಸಂಧಿ
ಉತ್ತರ: B
ವಿವರಣೆ: ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು. ಜನ + ಐಕ್ಯ = ಜನೈಕ್ಯ (ಅಕಾರಾಕ್ಕೆ ಐಕಾರ ಪರವಾಗಿ ಐಕಾರಾದೇಶ)
40. ಆಗಮ ಸಂಧಿಗೆ ಉದಾಹರಣೆ.
A) ಮಳೆಗಾಲ
B) ಕೈಯನ್ನು
C) ದೇವೇಂದ್ರ
D) ಮಹಾತ್ಮ
ಉತ್ತರ: B
ವಿವರಣೆ: ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು. ಕೈಯನ್ನು = ಕೈ+ ಅನ್ನು.
41. ವೃದ್ಧಿ ಸಂಧಿಗೆ ಉದಾಹರಣೆ
A) ಅಷ್ಟೈಶ್ವರ್ಯ
B) ಮಹೇಶ
C) ಸಂಗ್ರಹಾಲಯ
D) ಮಗುವಿಗೆ
ಉತ್ತರ: D
ವಿವರಣೆ: ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು.ಅಷ್ಟ + ಐಶ್ವರ್ಯ = ಅಷ್ಟ್ + ಐಶ್ವರ್ಯ = ಅಷ್ಟೈಶ್ವರ್ಯ (ಅ + ಐ = ಐ).
42. ಗುಣ ಸಂಧಿಗೆ ಉದಾಹರಣೆ
A) ಮಹರ್ಷಿ
B) ಜಾತ್ಯತೀತ
C) ಮಳೆಯಿಂದ
D) ಸಂಪನ್ನರಾದ
ಉತ್ತರ: A
ವಿವರಣೆ: ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು. ಮಹಾ + ಋಷಿ = ಮಹರ್ಷಿ (ಆಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
43. ಜಶ್ತ್ವ ಸಂಧಿಗೆ ಉದಾಹರಣೆಯಿದು;
A) ಪಯಶ್ಶಯನ
B) ಷಡಾನನ
C) ಸನ್ಮಾನ
D) ವನೌಷಧ
ಉತ್ತರ: B
ವಿವರಣೆ: ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು. ಷಟ್+ಆನನ=ಷಡಾನನ(ಟಕಾರಕ್ಕೆ ಡಕಾರಾದೇಶ).
44. ‘ಪ್ರಾಣಾಹುತಿ’ ಈ ಸಂಧಿಗೆ ಉದಾಹರಣೆ
A) ಯಣ್ ಸಂಧಿ
B) ಆದೇಶ ಸಂಧಿ
C) ಸವರ್ಣದೀರ್ಘ ಸಂಧಿ
D) ಆಗಮ ಸಂಧಿ
ಉತ್ತರ: C
ವಿವರಣೆ:ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು. ಪ್ರಾಣಾಹುತಿ = ಪ್ರಾಣ+ ಆಹುತಿ (ಅ+ಆ=ಆ).
45. ದಿಗಂತ, ಅಬ್ಧಿ’ ಈ ಪದಗಳಲ್ಲಿರುವ ಸಂಧಿ:
A) ಯಣ್ ಸಂಧಿ
B) ಗುಣ ಸಂಧಿ
C) ವೃದ್ಧಿ ಸಂಧಿ
D) ಜಶ್ತ್ವ ಸಂಧಿ
ಉತ್ತರ: D
ವಿವರಣೆ: ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು.ಅಪ್+ಧಿ =ಅಬ್ಧಿ(ಪಕಾರಕ್ಕೆ ಬಕಾರಾದೇಶ) ,ದಿಕ್ + ಅಂತ = ದಿಗ್ + ಅಂತ = ದಿಗಂತ (ಪೂರ್ವದ ಕಕಾರಕ್ಕೆ ಗಕಾರಾದೇಶ).
46. ‘ಹೊಸಗಾಲ’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ.
A) ಲೋಪ ಸಂಧಿ
B) ಆದೇಶ ಸಂಧಿ
C) ಆಗಮ ಸಂಧಿ
D) ಗುಣ ಸಂಧಿ
ಉತ್ತರ: B
ವಿವರಣೆ: ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, ಜ, ಟ, ತ, ಪ ಆಗಿದ್ದರೆ ಗ, ಜ, ಡ, ದ, ಬ ಆಗಿ ಪರಿವರ್ತನೆ ಕಾಣುವುವು. ಮಳೆ + ಕಾಲ = ಮಳೆಗಾಲ (ಕ ಕಾರಕ್ಕೆ ಗಕಾರಾದೇಶ).
47. ಮರವನ್ನು’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
A) ಆದೇಶ ಸಂಧಿ
B) ಆಗಮ ಸಂಧಿ
C) ಲೋಪ ಸಂಧಿ
D) ಗುಣ ಸಂಧಿ
ಉತ್ತರ: B
ವಿವರಣೆ: ಮೊದಲ ‘ಪದವು ಉ, ಊ, ಋ, ಋ, ಒ, ಓ, ಔ ವರ್ಣಗಳಿಂದ ಕೊನೆಗೊಂಡಿದ್ದು, ಮುಂದಣ ಪದದ ಪ್ರಾರಂಭದಲ್ಲಿ ಯಾವುದಾದರೂ ಬೇರೊಂದು ಸ್ವರ ಬಂದು ಸೇರಿದ್ದಾಗ ‘ವ್’ ಎಂಬ ಹೊಸ ವರ್ಣ ಆ ಜಾಗದಲ್ಲಿ ಕಾಣಿಸಿಕೊಳ್ಳುವುದು. ಇದನ್ನೇ ವಕಾರಾಗಮ ಸಂಧಿ ಎನ್ನಲಾಗುವುದು.ಮರವನ್ನು=ಮರ+ಅನ್ನು .
48. ಮಳೆಯಿಂದ’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ.
A) ಆದೇಶ ಸಂಧಿ
B) ಲೋಪ ಸಂಧಿ
C) ಗುಣ ಸಂಧಿ
D) ಆಗಮ ಸಂಧಿ
ಉತ್ತರ: D
ವಿವರಣೆ: ಮೊದಲ ಪದದ ಕೊನೆಯಲ್ಲಿ ಅ, ಇ, ಈ, ಎ, ಏ, ಐ ಸ್ವರಗಳು ಅದರ ಮುಂದಣ ಪದದ ಮೊದಲಲ್ಲಿ ಬೇರೊಂದು ಸ್ವರ ಬಂದಾಗ, ಈ ಎರಡೂ ಸ್ವರಗಳ ಬದಲು ‘ಯ’ ವರ್ಣವು ಹೊಸದಾಗಿ ಆಗಮಿಸುವುದು. ಇದನ್ನೇ ಯಕಾರಾಗಮ ಸಂಧಿ ಎನ್ನುವರು. ಮಳೆ+ಇಂದ = ಮಳೆಯಿಂದ .
49. ವಾಙ್ಮಯ’ ಪದದಲ್ಲಿ ಆಗಿರುವ ಸಂಧಿ;
A) ಸವರ್ಣದೀರ್ಘ ಸಂಧಿ
B) ಅನುನಾಸಿಕ ಸಂಧಿ
C) ಜಶ್ತ್ವ ಸಂಧಿ
D) ಶ್ಚುತ್ವ ಸಂಧಿ
ಉತ್ತರ: B
ವಿವರಣೆ: ವರ್ಗದ = ಪ್ರಥಮ ವರ್ಣಗಳಾದ ಕ್, ಚ್, ಟ್, ತ್, ವ್ಯಂಜನಗಳಿಗೆ ಕ್ರಮವಾಗಿ ಙ, ಞ, ಣ್, ನ್, ವ್ಯಂಜನಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ ಆಗುವುವು. ವಾಕ್ + ಮಯ = ವಾಙ್ + ಮಯ = ವಾಙ್ಮಯ
(ಇಲ್ಲಿ ಕಕಾರಕ್ಕೆ ಮಕಾರ ಪರವಾಗಿ ಕಕಾರಕ್ಕೆ ಙಕಾರಾದೇಶವಾಗಿದೆ).
50. ‘ಸನ್ಮಾನ’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ :
A) ಗುಣ ಸಂಧಿ
B) ಅನುನಾಸಿಕ ಸಂಧಿ
C) ಯಣ್ ಸಂಧಿ
D) ವೃದ್ಧಿ ಸಂಧಿ
ಉತ್ತರ: B
ವಿವರಣೆ: ವರ್ಗದ = ಪ್ರಥಮ ವರ್ಣಗಳಾದ ಕ್, ಚ್, ಟ್, ತ್, ವ್ಯಂಜನಗಳಿಗೆ ಕ್ರಮವಾಗಿ ಙ, ಞ, ಣ್, ನ್, ವ್ಯಂಜನಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ ಆಗುವುವು. (೩) ಸತ್ + ಮಾನ = ಸನ್ + ಮಾನ = ಸನ್ಮಾನ
(ಇಲ್ಲಿ ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶವಾಗಿದೆ).
51. ಗತ್ಯಂತರ’ ಇದು ಈ ಸಂಧಿ ಪದ
A) ಗುಣ ಸಂಧಿ
B) ಸವರ್ಣದೀರ್ಘ ಸಂಧಿ
C) ಯಣ್ ಸಂಧಿ
D) ಆಗಮ ಸಂಧಿ
ಉತ್ತರ: C
ವಿವರಣೆ: ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.ಗತಿ + ಅಂತರ = ಗತ್ಯಂತರ (ಇಕಾರಕ್ಕೆ ಯ್ ಕಾರಾದೇಶ).
52. ಬ್ರಹ್ಮರ್ಷಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
A) ಲೋಪ ಸಂಧಿ
B) ಆದೇಶ ಸಂಧಿ
C) ಗುಣ ಸಂಧಿ
D) ಆಗಮ ಸಂಧಿ
ಉತ್ತರ: C
ವಿವರಣೆ: ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು. ಬ್ರಹ್ಮ+ ಋಷಿ = ಬ್ರಹ್ಮರ್ಷಿ (ಆ + ಋ = ಆರ್).
53. ಮಹಾತ್ಮ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
A) ಸವರ್ಣದೀರ್ಘ ಸಂಧಿ
B) ವೃದ್ಧಿ ಸಂಧಿ
C) ಗುಣ ಸಂಧಿ
D) ಆದೇಶ ಸಂಧಿ
ಉತ್ತರ: A
ವಿವರಣೆ:ಸವರ್ಣ ಸ್ವರಗಳು ಒಂದನ್ನೊಂದು ಕೂಡಿದಾಗ, ಅದೇ ಜಾತಿಯ ದೀರ್ಘಸ್ವರವು ಸಂಧಿಯ ರೂಪದಲ್ಲಿ ಬರುವುದು. ಇದನ್ನೇ ಸವರ್ಣದೀರ್ಘಸಂಧಿ ಎನ್ನುವರು. ಮಹಾತ್ಮ = ಮಹ+ಆತ್ಮ.
54. ‘ಧೃತಿಗೆಟ್ಟು’ ಇದು ಈ ಸಂಧಿಗೆ ಉದಾಹರಣೆ:
A) ಜಶ್ತ್ವ ಸಂಧಿ
B) ಆದೇಶ ಸಂಧಿ
C) ಗುಣ ಸಂಧಿ
D) ಆಗಮ ಸಂಧಿ
ಉತ್ತರ: B
ವಿವರಣೆ:ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, ಜ, ಟ, ತ, ಪ ಆಗಿದ್ದರೆ ಗ, ಜ, ಡ, ದ, ಬ ಆಗಿ ಪರಿವರ್ತನೆ ಕಾಣುವುವು. ಧೃತಿ+ಕೆಟ್ಟು = ಧೃತಿಗೆಟ್ಟು(ಕ ->ಗ)
55. ‘ಕೋಟಿ+ಅಧೀಶ’ ಈ ಪದಗಳನ್ನು ಕೂಡಿಸಿ ಬರೆದಾಗ
A) ಕೋಟ್ಯಾಧೀಶ
B) ಕೋಟ್ಯಧೀಶ
C) ಕೋಟೀಶ
D) ಕೋಟಿಧೀಶ
ಉತ್ತರ: B
ವಿವರಣೆ:ಕೋಟಿ + ಅಧೀಷ = ಕೋಟ್ಯಧೀಶ (ಇಕಾರಕ್ಕೆ ಯ್ ಕಾರಾದೇಶ) – ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.
56. ಜಶ್ವಸಂಧಿಗೆ ಉದಾಹರಣೆ ಇದು;
A) ಅಜಂತ
B) ಶರಶ್ಚಂದ್ರ
C) ತನ್ಮಯ
D) ಅಷ್ಟೈಶ್ವರ್ಯ
ಉತ್ತರ: A
ವಿವರಣೆ:ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು. ಅಚ್ + ಅಂತ = ಅಜ್ + ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ)
57. ತಲೆಗೂದಲು ಬೆಳ್ಳಗಾದ ಮುದುಕಿ – ಈ ವಾಕ್ಯದಲ್ಲಿನ ತಲೆಗೂದಲು ಪದವು ಈ ಸಂಧಿಗೆ ಉದಾಹರಣೆ.
A) ಆಗಮ ಸಂಧಿ
B) ಲೋಪ ಸಂಧಿ
C) ಆದೇಶ ಸಂಧಿ
D) ಗುಣ ಸಂಧಿ
ಉತ್ತರ: C
ವಿವರಣೆ:ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, ಜ, ಟ, ತ, ಪ ಆಗಿದ್ದರೆ ಗ, ಜ, ಡ, ದ, ಬ ಆಗಿ ಪರಿವರ್ತನೆ ಕಾಣುವುವು. ತಲೆ + ಕೂದಲು – ತಲೆಗೂದಲು
58. ಅನುನಾಸಿಕ ಸಂಧಿಗೆ ಉದಾಹರಣೆಯಾದ ಪದ.
A) ನಿಮ್ಮಡಿಗಳಲ್ಲಿ
B) ತನ್ಮಯ
C) ಮೈದೊಳೆ
D) ಓಣಿಯಲ್ಲಿ
ಉತ್ತರ: B
ವಿವರಣೆ:ವರ್ಗದ = ಪ್ರಥಮ ವರ್ಣಗಳಾದ ಕ್, ಚ್, ಟ್, ತ್, ವ್ಯಂಜನಗಳಿಗೆ ಕ್ರಮವಾಗಿ ಙ, ಞ, ಣ್, ನ್, ವ್ಯಂಜನಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ ಆಗುವುವು. ಸತ್ + ಮಾನ = ಸನ್ + ಮಾನ = ಸನ್ಮಾನ
(ಇಲ್ಲಿ ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶವಾಗಿದೆ)
59. ಜಶ್ತ್ವ ಸಂಧಿಗೆ ಉದಾಹರಣೆಯಾದ ಪದ
A) ತಿಂಗಳಿನೂರು
B) ವಾಗ್ದೇವಿ
C) ಉನ್ಮಾದ
D) ಕೋಟ್ಯಧೀಶ್ವರ
ಉತ್ತರ: B
ವಿವರಣೆ:ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು. ವಾಕ್+ದೇವಿ=ವಾಗ್ದೇವಿ(ಕಕಾರಕ್ಕೆ ಗಕಾರಾದೇಶ).
60. ಸನ್ಮಂಗಳ ಪದವನ್ನು ಬಿಡಿಸಿ ಬರೆದಾಗ
A) ಸನ್ + ಅಮಂಗಳ
B) ಸಮ + ಅಂಗಳ
C) ಸತ್ + ಮಂಗಳ A
D) ಸನ್ + ಮಂಗಳ
ಉತ್ತರ: C
ವಿವರಣೆ:ವರ್ಗದ = ಪ್ರಥಮ ವರ್ಣಗಳಾದ ಕ್, ಚ್, ಟ್, ತ್, ವ್ಯಂಜನಗಳಿಗೆ ಕ್ರಮವಾಗಿ ಙ, ಞ, ಣ್, ನ್, ವ್ಯಂಜನಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ ಆಗುವುವು. ಸತ್ + ಮಂಗಳ – ಸನ್ಮಂಗಳ .
61. ಶರಚ್ಚಂದ್ರ ಪದದಲ್ಲಿ ಏರ್ಪಟ್ಟ ಸಂಧಿ
A) ಜಶ್ತ್ವ ಸಂಧಿ
B) ಗುಣಸಂಧಿ
C) ಶ್ಚುತ್ವ ಸಂಧಿ
D) ಲೋಪ ಸಂಧಿ
ಉತ್ತರ: C
ವಿವರಣೆ: ಶ್ಚು ಎಂದರೆ ಶಕಾರ ಚವರ್ಗಾಕ್ಷರಗಳು. (ಶ್=ಶಕಾರ, ಚು=ಚ ಛ ಜ ಝ ಞ) ಈ ಆರು ಅಕ್ಷರಗಳೇ ಶ್ಚು ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ. ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು. ಶರತ್ + ಚಂದ್ರ = ಶರಚ್ + ಚಂದ್ರ = ಶರಚ್ಚಂದ್ರ (ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ).
62. ಸವರ್ಣದೀರ್ಘ ಸಂಧಿಗೆ ಉದಾಹರಣೆಗಳು
A) ನಿಜಾಶ್ರಮ , ದ್ರವ್ಯಾರ್ಥಿ
B) ಇಂಚರ , ಹೊಸಗನ್ನಡ
C) ಮಗುವಿಗೆ , ಓಣಿಯಲ್ಲಿ
D) ಜ್ಞಾನೇಶ್ವರ , ಮಹರ್ಷಿ
ಉತ್ತರ: A
ವಿವರಣೆ: ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ದೇವ + ಅಸುರ = ದೇವಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ).
63. ಕೆಳಗಿನವುಗಳಲ್ಲಿ ಸವರ್ಣ ಅಕ್ಷರಗಳು
A) ಅ ಆ
B) ಏ ಐ
C) ಎ ಏ
D) ಒ ಓ
ಉತ್ತರ: A
ವಿವರಣೆ: ಸವರ್ಣ ಅಕ್ಷರಗಳು – ಅ ಆ.
64. ದೇವೇಂದ್ರ ಪದವು ಸಂಧಿಗೆ ಉದಾಹರಣೆಯಾಗಿದೆ
A) ಜಶ್ತ್ವಸಂಧಿ ಸಂಧಿ
B) ಗುಣ ಸಂಧಿ
C) ಸವರ್ಣದೀರ್ಘ
D) ಲೋಪ ಸಂಧಿ
ಉತ್ತರ: B
ವಿವರಣೆ: ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು. ದೇವ + ಇಂದ್ರ = ದೇವೇಂದ್ರ (ಅ + ಇ = ಏ)
65. ಸವರ್ಣದೀರ್ಘ ಸಂಧಿಯ ಪದ.
A) ಇಂಚರ
B) ಜ್ಞಾನೇಶ್ವರ
C) ವಾಚನಾಲಯ
D) ಓಣಿಯಲ್ಲಿ
ಉತ್ತರ: C
ವಿವರಣೆ:ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ವಾಚನ + ಆಲಯ= ವಾಚನಾಲಯ(ಆಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ).
66. ಜಗಜ್ಯೋತಿ : ಶ್ಚುತ್ವ ಸಂಧಿ : : ಅಜಂತ :__
A) ವೃದ್ಧಿ ಸಂಧಿ
B) ಆದೇಶ ಸಂಧಿ
C) ಜಶ್ತ್ವ ಸಂಧಿ
D) ಲೋಪ ಸಂಧಿ
ಉತ್ತರ: C
ವಿವರಣೆ: ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು. ಅಚ್ + ಅಂತ = ಅಜ್ + ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ).
67. ಶ್ಚುತ್ವ ಸಂಧಿಗೆ ಉದಾಹರಣೆಯಾದ ಪದ
A) ಬೆಟ್ಟದಾವರೆ
B) ಪಯಶ್ಶಯನ
C) ನಿಮ್ಮರಸ
D) ಮಳೆಯಿಂದ
ಉತ್ತರ: B
ವಿವರಣೆ:ಶ್ಚು ಎಂದರೆ ಶಕಾರ ಚವರ್ಗಾಕ್ಷರಗಳು. (ಶ್=ಶಕಾರ, ಚು=ಚ ಛ ಜ ಝ ಞ) ಈ ಆರು ಅಕ್ಷರಗಳೇ ಶ್ಚು ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ. ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು. ಪಯಸ್ + ಶಯನ = ಪಯಶ್ + ಶಯನ = ಪಯಶ್ಶಯನ
(ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ).
68. “ಲಕ್ಷ್ಮೀಶ” ಪದ ಈ ಸಂಧಿಗೆ ಉದಾಹರಣೆ.
A) ಸವರ್ಣದೀರ್ಘಸಂಧಿ
B) ಗುಣಸಂಧಿ
C) ವೃದ್ಧಿಸಂಧಿ
D) ಯಣ್ ಸಂಧಿ
ಉತ್ತರ: A
ವಿವರಣೆ: ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ಲಕ್ಷೀ + ಈಶ = ಲಕ್ಷೀಶ (ಈಕಾರಕ್ಕೆ ಈಕಾರಪರವಾಗಿ ಈಕಾರಾದೇಶ).
69. ಮೈ + ತೊಳೆ ಪದ ಈ ಸಂಧಿಗೆ ಉದಾಹರಣೆ.
A) ಸವರ್ಣದೀರ್ಘಸಂಧಿ
B) ಗುಣಸಂಧಿ
C) ಆದೇಶಸಂಧಿ
D) ಯಣ್ ಸಂಧಿ
ಉತ್ತರ: C
ವಿವರಣೆ: ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, ಜ, ಟ, ತ, ಪ ಆಗಿದ್ದರೆ ಗ, ಜ, ಡ, ದ, ಬ ಆಗಿ ಪರಿವರ್ತನೆ ಕಾಣುವುವು. ಮೈ + ತೊಳೆ = ಮೈದೊಳೆ (ತಕಾರಕ್ಕೆ ದಕಾರಾದೇಶ).
70. ಮಹಾ + ಈಶ = ಮಹೇಶ ಈ ಸಂಧಿಗೆ ಉದಾಹರಣೆ.
A) ವೃದ್ಧಿ ಸಂಧಿ
B) ಆದೇಶ ಸಂಧಿ
C) ಗುಣಸಂಧಿ
D) ಲೋಪ ಸಂಧಿ
ಉತ್ತರ: C
ವಿವರಣೆ: ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು.ಮಹಾ + ಈಶ = ಮಹೇಶ (ಆಕಾರಕ್ಕೆ ಈಕಾರ ಪರವಾಗಿ ಏಕಾರಾದೇಶ).
71. ದೇವರ್ಷಿ ಈ ಸಂಧಿಗೆ ಉದಾಹರಣೆ.
A) ವೃದ್ಧಿ ಸಂಧಿ
B) ಗುಣಸಂಧಿ
C) ಜಶ್ತ್ವ ಸಂಧಿ
D) ಲೋಪ ಸಂಧಿ
ಉತ್ತರ: B
ವಿವರಣೆ:
72. “ಮಹೌನ್ನತ್ಯ ” ಪದ ಈ ಸಂಧಿಗೆ ಉದಾಹರಣೆ.
A) ವೃದ್ಧಿ ಸಂಧಿ
B) ಗುಣಸಂಧಿ
C) ವೃದ್ಧಿಸಂಧಿ
D) ಯಣ್ ಸಂಧಿ
ಉತ್ತರ: A
ವಿವರಣೆ:
73. ಪ್ರತ್ಯುತ್ತರ ” ಪದ ಈ ಸಂಧಿಗೆ ಉದಾಹರಣೆ.
A) ಯಣ್ ಸಂಧಿ
B) ಆದೇಶ ಸಂಧಿ
C) ಜಶ್ತ್ವ ಸಂಧಿ
D) ಲೋಪ ಸಂಧಿ
ಉತ್ತರ: C
ವಿವರಣೆ:
74. ಮನಶ್ + ಶುದ್ಧಿ = ಮನಶ್ಶುದ್ಧಿ – ಪದ ಈ ಸಂಧಿಗೆ ಉದಾಹರಣೆ.
A) ವೃದ್ಧಿ ಸಂಧಿ
B) ಶ್ಚುತ್ವ ಸಂಧಿ
C) ಗುಣಸಂಧಿ
D) ಲೋಪ ಸಂಧಿ
ಉತ್ತರ: B
ವಿವರಣೆ:
75. ಶ್ಚುತ್ವ ಸಂಧಿಯ ಪದ
A) ಇಂಚರ
B) ಜ್ಞಾನೇಶ್ವರ
C) ಜಗಜ್ಜ್ಯೋತಿ
D) ಓಣಿಯಲ್ಲಿ
ಉತ್ತರ: C
ವಿವರಣೆ: ‘ಸ್’ ಅಥವಾ ‘ತ’ ವರ್ಗದ ಅಕ್ಷರಗಳಿಗೆ ‘ಶ’ ಅಥವಾ ‘ಚ’ ವರ್ಗದ ಅಕ್ಷರಗಳು ಸೇರಿದಾಗ, ‘ಸ್’ ಸ್ಥಾನದಲ್ಲಿ ‘ಶ’ ಮತ್ತು ‘ತ’ ವರ್ಗದ ಅಕ್ಷರಗಳ ಸ್ಥಾನದಲ್ಲಿ ‘ಚ’ ವರ್ಗದ ಅಕ್ಷರಗಳು ಆದೇಶವಾಗಿ ಬರುವ ಸಂಧಿಯಾಗಿದೆ.ಇದನ್ನು ಶ್ಚುತ್ವ ಸಂಧಿ ಎನ್ನುವರು.
76. ಯಣ್ ಸಂಧಿಯ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ
A) ಜಾತ್ಯಾತೀತ
B) ಜ್ಞಾನೇಶ್ವರ
C) ಜಗಜ್ಜ್ಯೋತಿ
D) ಓಣಿಯಲ್ಲಿ
ಉತ್ತರ: A
ವಿವರಣೆ: ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.
77. ಸದಾನಂದ ಪದವು ಯಾವ ಯಾವಯಾವಸಂಧಿಗೆ ಉದಾಹರಣೆಯಾಗಿದೆ
A) ಜಶ್ತ್ವಸಂಧಿ
B) ಗುಣ ಸಂಧಿ
C) ಸವರ್ಣದೀರ್ಘಸಂಧಿ
D) ಲೋಪ ಸಂಧಿ
ಉತ್ತರ: A
ವಿವರಣೆ: ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು.
78. ಬೆಟ್ಟದಾವರೆ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ
A) ಜಶ್ತ್ವಸಂಧಿ
B) ಆದೇಶ ಸಂಧಿ
C) ಸವರ್ಣದೀರ್ಘಸಂಧಿ
D) ಲೋಪ ಸಂಧಿ
ಉತ್ತರ: B
ವಿವರಣೆ: ಎರಡು ಪದಗಳು ಸೇರುವಾಗ ಒಂದು ವ್ಯಂಜನವು ಲೋಪಗೊಂಡು ಅದರ ಸ್ಥಾನದಲ್ಲಿ ಇನ್ನೊಂದು ವ್ಯಂಜನ ಬರುವುದು. ಆದೇಶ ಸಂಧಿಯಲ್ಲಿ ಕ, ತ, ಪ ವ್ಯಂಜನಗಳಿಗೆ ಗ, ದ, ಬ ವ್ಯಂಜನಗಳು ಆದೇಶವಾಗುತ್ತವೆ.
79. ಬಲ್ಲೆನೆಂದು ಪದವು ಸಂಧಿಗೆ ಉದಾಹರಣೆಯಾಗಿದೆ
A) ಜಶ್ತ್ವಸಂಧಿ
B) ಆದೇಶ ಸಂಧಿ
C) ಸವರ್ಣದೀರ್ಘ ಸಂಧಿ
D) ಲೋಪ ಸಂಧಿ
ಉತ್ತರ: D
ವಿವರಣೆ: ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಲೋಪವಾದರೆ ಲೋಪ ಸಂಧಿಸಂಧಿ ಎನ್ನುವರು.
80. ಅವನೂರು ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ
A) ಜಶ್ತ್ವಸಂಧಿ
B) ಆದೇಶ ಸಂಧಿ
C) ಸವರ್ಣದೀರ್ಘ ಸಂಧಿ
D) ಲೋಪ ಸಂಧಿ
ಉತ್ತರ: D
ವಿವರಣೆ: ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಲೋಪವಾದರೆ ಲೋಪ ಸಂಧಿಸಂಧಿ ಎನ್ನುವರು.
81. ಅಷ್ಟೈಶ್ವರ್ಯ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ
A) ಜಶ್ತ್ವಸಂಧಿ
B) ಆದೇಶ ಸಂಧಿ
C) ವೃದ್ಧಿ ಸಂಧಿ
D) ಲೋಪ ಸಂಧಿ
ಉತ್ತರ: C
ವಿವರಣೆ:
82. ಕವಿ + ಇಂದ್ರ
A) ಕವೀಂದ್ರ
B) ಕವೇಂದ್ರ
C) ಕೈವಿಂದ್ರ
D) ಯಾವುದು ಅಲ್ಲ
ಉತ್ತರ: A
ವಿವರಣೆ: (ಕವಿ + ಇಂದ್ರ = ಕವೀಂದ್ರ (ಇಕಾರಕ್ಕೆ ಇಕಾರ ಪರವಾಗಿ ಈಕಾರಾದೇಶ) – ಸವರ್ಣದೀರ್ಘ) .
83. ಮಹಾ + ಈಶ್ವರ
A) ಮಹಿಶ್ಚರ
B) ಮಹೇಶ್ವರ
C) ಮಹಾಶ್ವರ
D) ಯಾವುದು ಅಲ್ಲ
ಉತ್ತರ: B
ವಿವರಣೆ: (ಮಹಾ + ಈಶ್ವರ = ಮಹೇಶ್ವರ (ಆಕಾರಕ್ಕೆ ಈಕಾರ ಪರವಾಗಿ ಏಕಾರಾದೇಶ) – ಗುಣಸಂಧಿ
84. ಲೋಕ + ಏಕವೀರ
A) ಲೋಕೈಕವೀರ
B) ಲೋಕವೀರ
C) ಲೋಕೈಕಾವೀರ
D) ಯಾವುದು ಅಲ್ಲ
ಉತ್ತರ: A
ವಿವರಣೆ: (ಲೋಕ + ಏಕವೀರ = ಲೋಕೈಕವೀರ (ಅಕಾರಕ್ಕೆ ಏಕಾರ ಪರವಾಗಿ ಐಕಾರಾದೇಶ) – ವೃದ್ಧಿ.
85. ಜಾತ್ಯಾತೀತ ಬಿಡಿಸಿ ಬರೆಯಿರಿ.
A) ಜಾತಿ + ಆತೀತ
B) ಜಾತಿ + ಅತೀತ
C) ಜಾತ + ತ್ಯಾತೀತ
D) ಯಾವುದು ಅಲ್ಲ
ಉತ್ತರ: B
ವಿವರಣೆ: ಂಜಾತಿ + ಅತೀತ = ಜಾತ್ಯಾತೀತ (ಇಕಾರಕ್ಕೆ ಯ್ ಕಾರಾದೇಶ) ಯಣ್ ಸಂಧಿ.
86. ಪತಿ + ಅರ್ಥ
A) ಪತ್ಯರ್ ಥ
B) ಪತರ್ಥ
C) ಪತ್ಯರ್ಥ
D) ಯಾವುದು ಅಲ್ಲ
ಉತ್ತರ: C
ವಿವರಣೆ: ಪತಿ + ಅರ್ಥ = ಪತ್ಯರ್ಥ – (ಇಕಾರಕ್ಕೆ ಯ್ ಕಾರಾದೇಶ) ಯಣ್ ಸಂಧಿ.
87. ಪಿತ್ರರ್ಥ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ
A) ಜಶ್ತ್ವಸಂಧಿ
B) ಆದೇಶ ಸಂಧಿ
C) ಯಣ್ ಸಂಧಿ
D) ಲೋಪ ಸಂಧಿ
ಉತ್ತರ: C
ವಿವರಣೆ: ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.
88. ವಿದ್ಯೈಶ್ವರ್ಯ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ
A) ಜಶ್ತ್ವಸಂಧಿ
B) ಆದೇಶ ಸಂಧಿ
C) ವೃದ್ಧಿಸಂಧಿ
D) ಲೋಪ ಸಂಧಿ
ಉತ್ತರ: C
ವಿವರಣೆ: ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು.
89. ಮಹಾ + ಔದಾರ್ಯ = ಮಹೌದಾರ್ಯ ಈ ಸಂಧಿಗೆ ಉದಾಹರಣೆ.
A) ವೃದ್ಧಿ ಸಂಧಿ
B) ವೃದ್ಧಿಸಂಧಿ
C) ಗುಣಸಂಧಿ
D) ಲೋಪ ಸಂಧಿಯನಂ
ಉತ್ತರ: B
ವಿವರಣೆ: ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು.
90. ಷಣ್ + ಮುಖ = ಷಣ್ಮುಖ ಈ ಸಂಧಿಗೆ ಉದಾಹರಣೆ.
A) ವೃದ್ಧಿ ಸಂಧಿ
B) ವೃದ್ಧಿಸಂಧಿ
C) ಅನುನಾಸಿಕ ಸಂಧಿ
D) ಲೋಪ ಸಂಧಿ
ಉತ್ತರ: C
ವಿವರಣೆ: ಎರಡು ಪದಗಳು ಸೇರುವಾಗ ಮೊದಲ ಪದದ ಕೊನೆಯಲ್ಲಿರುವ ವರ್ಗರ ಅಕ್ಷರದ ಬದಲಿಗೆ ಕೊನೆಯ (ಅನುನಾಸಿಕ) ಅಕ್ಷರ ಬಂದು ಸಂಧಿ ಆಗುವುದು.ಷಣ್ + ಮುಖ = ಷಣ್ಮುಖ.
91. ಸುರಾಸುರ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ.
A) ಜಶ್ತ್ವಸಂಧಿ
B) ಆದೇಶ ಸಂಧಿ
C) ಸವರ್ಣದೀರ್ಘ ಸಂಧಿ
D) ಲೋಪ ಸಂಧಿ
ಉತ್ತರ: C
ವಿವರಣೆ: ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
92. ಬೆಟ್ಟದಾವರೆ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ.
A) ಜಶ್ತ್ವಸಂಧಿ
B) ಆದೇಶ ಸಂಧಿ
C) ಸವರ್ಣದೀರ್ಘ ಸಂಧಿ
D) ಲೋಪ ಸಂಧಿ
ಉತ್ತರ: B
ವಿವರಣೆ: ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, ಜ, ಟ, ತ, ಪ ಆಗಿದ್ದರೆ ಗ, ಜ, ಡ, ದ, ಬ ಆಗಿ ಪರಿವರ್ತನೆ ಕಾಣುವುವು.ಬೆಟ್ಟ+ ತಾವರೆ = ಬೆಟ್ಟದಾವರೆ.
93. ಕಣ್ + ಪನಿ = ಕಂಬನಿ
A) ಜಶ್ತ್ವಸಂಧಿ
B) ಆದೇಶ ಸಂಧಿ
C) ಸವರ್ಣದೀರ್ಘ ಸಂಧಿ
D) ಲೋಪ ಸಂಧಿ
ಉತ್ತರ: B
ವಿವರಣೆ: ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, ಜ, ಟ, ತ, ಪ ಆಗಿದ್ದರೆ ಗ, ಜ, ಡ, ದ, ಬ ಆಗಿ ಪರಿವರ್ತನೆ ಕಾಣುವುವು. ಕಣ್ + ಪನಿ = ಕಂಬನಿ.
94. ಸತ್ + ಕಾರ್ಯ = ಸತ್ಕಾರ್ಯ
A) ಜಶ್ತ್ವಸಂಧಿ
B) ಆದೇಶ ಸಂಧಿ
C) ಸವರ್ಣದೀರ್ಘ ಸಂಧಿ
D) ಲೋಪ ಸಂಧಿ
ಉತ್ತರ: A
ವಿವರಣೆ: ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು.
95. ಗುರು + ಆಜ್ಞೆ = ಗುರ್ವಾಜ್ಞೆ
A) ಜಶ್ತ್ವಸಂಧಿ
B) ಆದೇಶ ಸಂಧಿ
C) ಯಣ್ ಸಂಧಿ
D) ಲೋಪ ಸಂಧಿ
ಉತ್ತರ: C
ವಿವರಣೆ: ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು. ಗುರು + ಆಜ್ಞೆ = ಗುರ್ವಾಜ್ಞೆ(ಉಕಾರಕ್ಕೆ ವ್ ಕಾರಾದೇಶ).
96. ಅಧಿ + ಆತ್ಮ = ಅಧ್ಯಾತ್ಮ
A) ಯಣ್ ಸಂಧಿ
B) ಲೋಪ ಸಂಧಿ
C) ಗುಣ ಸಂಧಿ
D) ಯಣ್ ಸಂಧಿ
ಉತ್ತರ: D
ವಿವರಣೆ: ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು. ಅಧಿ + ಆತ್ಮ = ಅಧ್ಯಾತ್ಮ(ಇಕಾರಕ್ಕೆ ಯ್ ಕಾರಾದೇಶ).
97. ವಿದ್ಯೈಶ್ವರ್ಯ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ.
A) ವೃದ್ಧಿಸಂಧಿ
B) ಲೋಪ ಸಂಧಿ
C) ಗುಣ ಸಂಧಿ
D) ಯಣ್ ಸಂಧಿ
ಉತ್ತರ: A
ವಿವರಣೆ: ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು. ವಿದ್ಯಾ + ಐಶ್ವರ್ಯ = ವಿದ್ಯೈಶ್ವರ್ಯ (ಆಕಾರಕ್ಕೆ ಐಕಾರ ಪರವಾಗಿ ಐಕಾರಾದೇಶ).
98. ದೇವರ್ಷಿ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ.
A) ವೃದ್ಧಿಸಂಧಿ
B) ಲೋಪ ಸಂಧಿ
C) ಗುಣ ಸಂಧಿ
D) ಯಣ್ ಸಂಧಿ
ಉತ್ತರ: C
ವಿವರಣೆ: ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು. ದೇವ + ಋಷಿ = ದೇವರ್ಷಿ (ಅಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
99. ಹುಲ್ಲುಗಾವಲು ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ.
A) ವೃದ್ಧಿಸಂಧಿ
B) ಲೋಪ ಸಂಧಿ
C) ಆದೇಶಸಂಧಿ
D) ಯಣ್ ಸಂಧಿ
ಉತ್ತರ: C
ವಿವರಣೆ:ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, ಜ, ಟ, ತ, ಪ ಆಗಿದ್ದರೆ ಗ, ಜ, ಡ, ದ, ಬ ಆಗಿ ಪರಿವರ್ತನೆ ಕಾಣುವುವು.
100. ಚಂದ್ರೋದಯ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ.
A) ವೃದ್ಧಿಸಂಧಿ
B) ಲೋಪ ಸಂಧಿ
C) ಗುಣ ಸಂಧಿ
D) ಯಣ್ ಸಂಧಿ
ಉತ್ತರ: C
ವಿವರಣೆ: ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು. ಚಂದ್ರ + ಉದಯ = ಚಂದ್ರೋದಯ (ಅಕಾರಕ್ಕೆ ಉಕಾರ ಪರವಾಗಿ ಓಕಾರಾದೇಶ).
