1. ಸಾಮಾನ್ಯವಾಗಿ ಯಾವುದಾದರೂ ಒಂದು ವಸ್ತು,ಸ್ಥಳ, ವ್ಯಕ್ತಿ, ಗುಣ, ಸಂಖ್ಯೆ,ಭಾವ,ದಿಕ್ಕು,ಇತ್ಯಾದಿ ಹೆಸರುಗಳನ್ನು ಸೂಚಿಸುವ ವಾಚಕ ಪದಗಳು
A) ನಾಮಪದಗಳು
B) ಸಂಧಿಗಳು
C) ಸಮಾಸಗಳು
D) ಕ್ರಿಯಾಪದಗಳು
ಉತ್ತರ: A
ವಿವರಣೆ: ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ನಾಮಪದಗಳೆಂದು ಕರೆಯುತ್ತೇವೆ.
2. ನಾಮವಾಚಕಗಳ ವಿಧಗಳು
A) ವಸ್ತುವಾಚಕ,ಗುಣವಾಚಕ,ಸಂಖ್ಯಾವಾಚಕ
B) ಸಂಖ್ಯೇಯವಾಚಕ, ಪರಿಮಾಣವಾಚಕ, ದಿಗ್ವಾಚಕ
C) ಭಾವನಾಮ,ಸರ್ವನಾಮ
D) ಇಲ್ಲಿ ಹೇಳಿರುವ ಎಲ್ಲವೂ
ಉತ್ತರ: D
ವಿವರಣೆ:ನಾಮಪದದ ವಿಧಗಳು- ವಸ್ತುವಾಚಕ ಅಥವಾ ನಾಮವಾಚಕ, ಗುಣವಾಚಕ, ಸಂಖ್ಯಾವಾಚಕ, ಸಂಖ್ಯೇಯವಾಚಕ, ಭಾವನಾಮ, ಪರಿಮಾಣ ವಾಚಕ, ಪ್ರಕಾರವಾಚಕ ದಿಗ್ವಾಚಕ, ಸರ್ವನಾಮ.
3. ವಸ್ತುವಾಚಕಗಳ ವಿಧಗಳು
A) ರೂಢನಾಮ
B) ಅಂಕಿತನಾಮ
C) ಅನ್ವರ್ಥನಾಮ
D) ಇವೆಲ್ಲವೂ
ಉತ್ತರ: D
ವಿವರಣೆ:ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು ವಸ್ತುವಾಚಕಗಳೆನ್ನುವರು. ವಸ್ತುವಾಚಕನಾಮಪದವನ್ನು ಚೇತನ
(ಚೇತನವುಳ್ಳ), ಅಚೇತನ (ಚೇತನವಿಲ್ಲದ್ದು) ಎಂದು ವಿಭಾಗಿಸಲಾಗಿದೆ. ವಸ್ತುವಾಚಕ ನಾಮಪದದಲ್ಲಿ ಮುಖ್ಯವಾಗಿ ಮೂರು ವಿಧಗಳು.
ಅವುಗಳೆಂದರೆ, 1) ರೂಢನಾಮ 2) ಅಂಕಿತನಾಮ 3) ಅನ್ವರ್ಥನಾಮ.
4. ರೂಢಿಯಿಂದ ಬಂದ ಪದಗಳು
A) ರೂಢನಾಮಗಳು
B) ಅಂಕಿತನಾಮಗಳು
C) ಅನ್ವರ್ಥನಾಮಗಳು
D) ಸರ್ವನಾಮಗಳು
ಉತ್ತರ: A
ವಿವರಣೆ:ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ಅಥವಾ ಹೆಸರುಗಳನ್ನು ರೂಢನಾಮ ಎನ್ನುವರು.
ಉದಾ:- ಹಳ್ಳಿ, ಊರು.
5. ವ್ಯಾವಹಾರದ ಸಲುವಾಗಿ, ನಿರ್ದಿಷ್ಟವಾಗಿ ಗುರುತಿಸಲು ಇಟ್ಟ ಹೆಸರುಗಳು
A) ರೂಢನಾಮಗಳು
B) ಅಂಕಿತನಾಮಗಳು
C) ಅನ್ವರ್ಥನಾಮಗಳು
D) ಭಾವನಾಮಗಳು
ಉತ್ತರ: B
ವಿವರಣೆ:ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು.
ಉದಾ:- ಬ್ರಹ್ಮಪುತ್ರ, ಬೆಂಗಳೂರು
6. ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳು
A) ರೂಢನಾಮಗಳು
B) ಅಂಕಿತನಾಮಗಳು
C) ಅನ್ವರ್ಥನಾಮಗಳು
D) ಭಾವನಾಮಗಳು
ಉತ್ತರ: C
ವಿವರಣೆ:ರೂಪ, ಗುಣ, ಸ್ವಭಾವ, ವಿಶೇಷವಾದ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳೆಲ್ಲ ಅನ್ವರ್ಥನಾಮಗಳು.
ಉದಾ:- ಕವಿ, ಮೂಗ, ನೀತಿಜ್ಞ, ಕುಂಟ.
7. ವಸ್ತುಗಳ, ವ್ಯಕ್ತಿಗಳ ಗುಣ,ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳು
A) ಭಾವನಾಮಗಳು
B) ಸರ್ವನಾಮಗಳು
C) ಗುಣವಾಚಕಗಳು
D) ದಿಗ್ವೀಶೇಷಣಗಳು
ಉತ್ತರ: C
ವಿವರಣೆ: ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ಹೇಳುವ ವಿಶೇಷಣಗಳೇ ಗುಣವಾಚಕಗಳು. ವಿಶೇಷಣಗಳನ್ನು ಯಾವುದಕ್ಕೆ ಹೇಳಲಾಗುತ್ತದೋ ಅಂಥ
ಶಬ್ದಗಳನ್ನು ವಿಶೇಷ್ಯಗಳು ಎನ್ನುತ್ತಾರೆ. ಉದಾ:ಸಿಹಿ ಹಣ್ಣು ,ದೊಡ್ಡ ನದಿ.
8. ಸಂಖ್ಯೆಯನ್ನು ಹೇಳುವ ಶಬ್ದಗಳು
A) ಸಂಖ್ಯೇಯವಾಚಕಗಳು
B) ಸಂಖ್ಯಾವಾಚಕಗಳು
C) ಸಂಙ್ಞಾವಾಚಕಗಳು
D) ಸರ್ವನಾಮಗಳು
ಉತ್ತರ: B
ವಿವರಣೆ: ಸಂಖ್ಯೆಯನ್ನು ಸೂಚಿಸುವ ಪದಗಳೇ ಸಂಖ್ಯಾವಾಚಕಗಳು. ಉದಾ : ಒಂದು, ಎರಡು, ಹತ್ತು.
9. ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳು
A) ಸಂಖ್ಯೇಯವಾಚಕಗಳು
B) ಸಂಖ್ಯಾವಾಚಕಗಳು
C) ಸಂಙ್ಞಾವಾಚಕಗಳು
D) ಸರ್ವನಾಮಗಳು
ಉತ್ತರ: A
ವಿವರಣೆ:ಸಂಖ್ಯೆಯಿಂದ ಕೂಡಿದ ಶಬ್ದಗಳೆಲ್ಲವೂ ಸಂಖ್ಯೇಯವಾಚಕಗಳು. ಉದಾ : ಎರಡು ಇಬ್ಬರು, ಎರಡನೆಯ, ಇಮ್ಮಡಿ.
10. ವಸ್ತು ಮತ್ತು ಕ್ರಿಯೆಯ ಭಾವಗಳನ್ನು ತಿಳಿಸುವ ಪದಗಳು
A) ಗುಣವಾಚಕಗಳು
B) ಭಾವನಾಮಗಳು
C) ಸರ್ವನಾಮಗಳು
D) ಪರಿಮಾಣ ವಾಚಕಗಳು
ಉತ್ತರ: B
ವಿವರಣೆ: ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು. ಉದಾ : ಹಿರಿದರ ಭಾವ – ಹಿರಿಮೆ.
11. ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳು
A) ಪರಿಮಾಣ ವಾಚಕಗಳು
B) ಭಾವನಾಮಗಳು
C) ಗುಣವಾಚಕಗಳು
D) ದಿಗ್ವಾಚಕಗಳು
ಉತ್ತರ: A
ವಿವರಣೆ: ವಸ್ತುಗಳ ಸಾಮಾನ್ಯ ಅಳತೆ, ಪರಮಾಣ, ಗಾತ್ರ-ತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಳೆನ್ನುವರು.ಉದಾ: `ಅಷ್ಟು, ಇಷ್ಟು, ಹಲವು, ಕೆಲವು, ಅನಿತು.
12. ದಿಕ್ಕುಗಳನ್ನು ಸೂಚಿಸುವ ಪದಗಳು
A) ಗುಣವಾಚಕಗಳು
B) ದಿಗ್ವಾಚಕಗಳು
C) ಸಂಖ್ಯಾವಾಚಕಗಳು
D) ಪರಿಮಾಣ ವಾಚಕಗಳು
ಉತ್ತರ: B
ವಿವರಣೆ: ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು.
ಉದಾ:- ಮೂಡಣ, ಪಡುವಣ, ತೆಂಕಣ, ಬಡಗಣ, ಮೂಡಲು, ಪಡುವಲು, ತೆಂಕಲು, ಬಡಗಲು, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ,
ನೈರುತ್ಯ, ವಾಯುವ್ಯ, ಈಶಾನ್ಯ, ಆಚೆ, ಈಚೆ ಇತ್ಯಾದಿ.
13. ನಾಮಪದದ ಬದಲಿಗೆ ಬಳಸುವ ವಾಚಕಗಳು
A) ನಾನು ವಾಚಕಗಳು
B) ಅಂಕಿತನಾಮಗಳು
C) ರೂಢನಾಮಗಳು
D) ಸರ್ವನಾಮಗಳು
ಉತ್ತರ: D
ವಿವರಣೆ: ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು. ಉದಾ:- ಅವನು, ಅವಳು, ಅದು, ಅವು, ನೀನು, ನೀವು, ನಾನು, ಯಾವನು, ಇದು, ಏನು ಇತ್ಯಾದಿ.
14. ‘ನದಿ’ ಎಂಬ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
A) ರೂಢನಾಮ
B) ಅಂಕಿತನಾಮ
C) ಅನ್ವರ್ಥನಾಮ
D) ಸರ್ವನಾಮ
ಉತ್ತರ: A
ವಿವರಣೆ: ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ಅಥವಾ ಹೆಸರುಗಳನ್ನು ರೂಢನಾಮ ಎನ್ನುವರು.
ಉದಾ:- ಹಳ್ಳಿ, ಊರು
15. ‘ಸಹದೇವ’ ಎನ್ನುವ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
A) ರೂಢನಾಮ
B) ಅಂಕಿತನಾಮ
C) ಅನ್ವರ್ಥನಾಮ
D) ಸರ್ವನಾಮ
ಉತ್ತರ: B
ವಿವರಣೆ: ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು. ಉದಾ:-ಕಾವೇರಿ.
16. ವ್ಯಾಪಾರಿ’ ಎಂಬ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
A) ಸರ್ವನಾಮ
B) ಭಾವನಾಮ
C) ಗುಣವಾಚಕ
D) ಅನ್ವರ್ಥನಾಮ
ಉತ್ತರ: D
ವಿವರಣೆ: ರೂಪ, ಗುಣ, ಸ್ವಭಾವ, ವಿಶೇಷವಾದ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳೆಲ್ಲ ಅನ್ವರ್ಥನಾಮಗಳು.ಉದಾ:- ಶಿಕ್ಷಕ, ವ್ಯಾಪಾರಿ, ಯೋಗಿ.
17. ಪರ್ವತ : ರೂಢನಾಮ : : ಧರ್ಮರಾಯ : ————
A) ಅನ್ವರ್ಥನಾಮ
B) ಸರ್ವನಾಮ
C) ಅಂಕಿತನಾಮ
D) ಭಾವನಾಮ
ಉತ್ತರ: C
ವಿವರಣೆ: ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು. ಉದಾ: ಕಾವೇರಿ, ಮನೀಶ್.
18. ರಾಹುಲ : ಅಂಕಿತನಾಮ : : ಊರು : ———–
A) ಸರ್ವನಾಮ
B) ಭಾವನಾಮ
C) ಪ್ರಶ್ನಾರ್ಥಕ ಸರ್ವನಾಮ
D) ರೂಢನಾಮ
ಉತ್ತರ: D
ವಿವರಣೆ: ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ಅಥವಾ ಹೆಸರುಗಳನ್ನು ರೂಢನಾಮ ಎನ್ನುವರು. ಉದಾ:- ಹಳ್ಳಿ, ಊರು.
19. ‘ಅನ್ವರ್ಥನಾಮ’ ಪದಕ್ಕೆ ಉದಾಹರಣೆ
A) ಮನುಷ್ಯ
B) ಲಕ್ಷ್ಮಣ
C) ಶಿಕ್ಷಕ
D) ದೇಶ
ಉತ್ತರ: C
ವಿವರಣೆ:ರೂಪ, ಗುಣ, ಸ್ವಭಾವ, ವಿಶೇಷವಾದ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳೆಲ್ಲ ಅನ್ವರ್ಥನಾಮಗಳು.ಉದಾ:- ಶಿಕ್ಷಕ, ವ್ಯಾಪಾರಿ, ಯೋಗಿ.
20. ‘ರೂಢನಾಮ’ ಪದಕ್ಕೆ ಉದಾಹರಣೆ.
A) ಮನುಷ್ಯ
B) ಕಮಲಾಕ್ಷ
C) ವಿಜ್ಞಾನಿ
D) ಹೆಳವ
ಉತ್ತರ: A
ವಿವರಣೆ: ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ಅಥವಾ ಹೆಸರುಗಳನ್ನು ರೂಢನಾಮ ಎನ್ನುವರು. ಉದಾ:-ಮಕ್ಕಳು, ಹೆಣ್ಣು
21. ಸರ್ವನಾಮಗಳು ವಿಧ
A) ಪುರುಷಾರ್ಥಕ ಸರ್ವನಾಮ
B) ಪ್ರಶ್ನಾರ್ಥಕ ಸರ್ವನಾಮ
C) ಆತ್ಮಾರ್ಥಕ ಸರ್ವನಾಮ
D) ಇಲ್ಲಿನ ಎಲ್ಲವೂ
ಉತ್ತರ: D
ವಿವರಣೆ:ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಕಾರ್ಯವನ್ನು ನಿರ್ವಹಿಸುವ ಪದಗಳೇ ಸರ್ವನಾಮಗಳು. ಈ ಸರ್ವನಾಮಗಳನ್ನು 1) ಪುರುಷಾರ್ಥಕ 2) ಪ್ರಶ್ನಾರ್ಥಕ 3) ಆತ್ಮಾರ್ಥಕ ಸರ್ವನಾಮ ಗಳೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
22. ಆತ್ಮಾರ್ಥಕ ಸರ್ವನಾಮ ಪದಕ್ಕೆ ಉದಾಹರಣೆ
A) ಯಾರು
B) ತಾನು
C) ಅವನು
D) ಏನು
ಉತ್ತರ: B
ವಿವರಣೆ:ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವ ಸೂಚಕವಾಗಿ ಆತ್ಮಪ್ರಶಂಸೆಯಿಂದ ಬಳಸುವ ಸರ್ವನಾಮಗಳನ್ನು ‘ಆತ್ಮಾರ್ಥಕ
ಸರ್ವನಾಮ’ ಎನ್ನುತ್ತಾರೆ. ಇವು ಸಾಮಾನ್ಯವಾಗಿ ಪ್ರಥಮ ಹಾಗೂ ಮಧ್ಯಮ ಪುರುಷದ ಅರ್ಥವನ್ನೇ ನೀಡುತ್ತವೆ.ಉದಾ : ತಾನು, ತಾವು, ತನ್ನ,
ತಮ್ಮ.
23. ತಾವು : ಆತ್ಮರ್ಥಕ ಸರ್ವನಾಮ : : ಯಾವುದು : ————
A) ವಿದ್ಯಾರ್ಥಕ ಸರ್ವನಾಮ
B) ಸಂಭವನಾರ್ಥಕ ಸರ್ವನಾಮ
C) ಪ್ರಶ್ನಾರ್ಥಕ ಸರ್ವನಾಮ
D) ಸಂಖ್ಯಾವಾಚಕ ಸರ್ವನಾಮ
ಉತ್ತರ: C
ವಿವರಣೆ:ಪ್ರಶ್ನೆಯಿಂದ ಕೂಡಿದ ಎಲ್ಲ ಸರ್ವನಾಮಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನಲಾಗುತ್ತದೆ. ಉದಾ:- ಯಾವುವು? ಏಕೆ? ಏನು? ಯಾವುದು?
ಯಾರು? ಏತರದು? ಆವುದು?
24. ಪುರುಷಾರ್ಥಕ ಸರ್ವನಾಮಗಳ ವಿಧ
A) ಉತ್ತಮ ಪುರುಷ ಸರ್ವನಾಮ
B) ಮಧ್ಯಮ ಪುರುಷ ಸರ್ವನಾಮ
C) ಪ್ರಥಮ ಪುರುಷ ಸರ್ವನಾಮ
D) ಇಲ್ಲಿ ಹೇಳಿರುವ ಎಲ್ಲವೂ
ಉತ್ತರ: D
ವಿವರಣೆ:ಮೂರು ವಿಭಾಗ ಮಾಡಿದೆ. 1. ಉತ್ತಮ ಪುರುಷ : ನಾನು ನಾವು 2. ಮಧ್ಯಮ ಪುರುಷ : ನೀನು ನೀವು 3.ಪ್ರಥಮ ಪುರುಷ/ಅನ್ಯ ಪರುಷ : ಅವನು –
ಇವನು ಅವಳು – ಇವಳು.
25. ಒಳ್ಳೆಯ : ಗುಣವಾಚಕ : : ಕೆಂಪು : ———–
A) ಭಾವನಾಮ
B) ಆತ್ಮಾರ್ಥಕ ಸರ್ವನಾಮ
C) ದಿಗ್ವಾಚಕ ಪದ
D) ರೂಢನಾಮ
ಉತ್ತರ: A
ವಿವರಣೆ:ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು. ಬಿಳಿದರ ಭಾವ – ಬಿಳುಪು.
61. ಮನೆ ಮಂಚಮ್ಮ : ಅಂಕಿತನಾಮ : : ಕುಂಟ : ———-
A) ರೂಢನಾಮ
B) ಅನ್ವರ್ಥನಾಮ
C) ಭಾವನಾಮ
D)ಸರ್ವನಾಮ
ಉತ್ತರ: B
ವಿವರಣೆ:ರೂಪ, ಗುಣ, ಸ್ವಭಾವ, ವಿಶೇಷವಾದ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳೆಲ್ಲ ಅನ್ವರ್ಥನಾಮಗಳು
ಉದಾ:- ಕವಿ, ಮೂಗ, ನೀತಿಜ್ಞ, ಕುಂಟ, ಹೆಳವ
62. ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು – ಈ ವಾಕ್ಯದಲ್ಲಿ ನ ರೂಢನಾಮ ಪದ
A) ಲಂಡನ್
B) ಪಟ್ಟಣ
C) ಸ್ವತಂತ್ರ
D) ಒಂದು
ಉತ್ತರ: B
ವಿವರಣೆ: ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ಅಥವಾ ಹೆಸರುಗಳನ್ನು ರೂಢನಾಮ ಎನ್ನುವರು. ಉದಾ:-ಉದಾ:- ಹಳ್ಳಿ, ಊರು, ನಗರ, ಪಟ್ಟಣ, ನದಿ, ಪರ್ವತ.
63. ಆತನು ಎದ್ದು ನಿಲ್ಲಲು ಪ್ರಯತ್ನಿಸಿದನು -ಈ ವಾಕ್ಯದಲ್ಲಿ ಸರ್ವನಾಮ ಪದ
A) ಎದ್ದು
B) ನಿಲ್ಲಲು
C) ಪ್ರಯತ್ನ
D) ಆತನು
ಉತ್ತರ: D
ವಿವರಣೆ: ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು ಉದಾ:- ಅವನು, ಅವಳು, ಅದು, ಅವು, ನೀನು, ನೀವು, ನಾನು, ಯಾವನು, ಇದು, ಏನು ಇತ್ಯಾದಿ.
64. ನೀನು, ನೀವು : ಮಧ್ಯಮ ಪುರುಷ ಸರ್ವನಾಮಗಳು : : ನಾನು ನಾವು : ————
A) ಉತ್ತಮ ಪುರುಷ ಸರ್ವನಾಮಗಳು
B) ಪ್ರಥಮ ಪುರುಷ ಸರ್ವನಾಮಗಳು
C) ದಿಗ್ವಾಚಕಗಳು
D) ಪರಿಮಾಣ ವಾಚಕಗಳು
ಉತ್ತರ: A
ವಿವರಣೆ: ಉತ್ತಮ ಪುರುಷ : ನಾನು ನಾವು
65.ವಿದ್ವಾಂಸ : ಅನ್ವರ್ಥಕ ಸರ್ವನಾಮ : : ದೇಶ : ———-
A) ರೂಢನಾಮ
B) ಅಂಕಿತನಾಮ
C) ಸರ್ವನಾಮ
D) ಭಾವನಾಮ
ಉತ್ತರ: A
ವಿವರಣೆ: ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ಅಥವಾ ಹೆಸರುಗಳನ್ನು ರೂಢನಾಮ ಎನ್ನುವರು. ಉದಾ:-ಉದಾ:- ಹಳ್ಳಿ, ಊರು, ನಗರ, ಪಟ್ಟಣ, ನದಿ, ಪರ್ವತ.
66. ನೀವು : ಪುರುಷವಾಚಕ ಸರ್ವನಾಮ : : ತಮ್ಮಲ್ಲಿ : ————
A) ಆತ್ಮರ್ಥಕ ಸರ್ವನಾಮ
B) ರೂಢನಾಮ
C) ಪ್ರಶ್ನಾರ್ಥಕ ಸರ್ವನಾಮ
D) ಅಂಕಿತನಾಮ
ಉತ್ತರ: A
ವಿವರಣೆ: ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವ ಸೂಚಕವಾಗಿ ಆತ್ಮಪ್ರಶಂಸೆಯಿಂದ ಬಳಸುವ ಸರ್ವನಾಮಗಳನ್ನು ‘ಆತ್ಮಾರ್ಥಕ
ಸರ್ವನಾಮ’ . ಉದಾ : ತಾನು, ತಾವು, ತನ್ನ, ತಮ್ಮ.
67. ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ
A) ತಾವು
B) ತಮ್ಮ
C) ತಮಗಾಗಿ
D) ಈ ಎಲ್ಲವೂ
ಉತ್ತರ: D
ವಿವರಣೆ:ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವ ಸೂಚಕವಾಗಿ ಆತ್ಮಪ್ರಶಂಸೆಯಿಂದ ಬಳಸುವ ಸರ್ವನಾಮಗಳನ್ನು ‘ಆತ್ಮಾರ್ಥಕ
ಸರ್ವನಾಮ’ . ಉದಾ : ತಾನು, ತಾವು, ತನ್ನ, ತಮ್ಮ.
68. ಗುಣವಾಚಕ ಪದಕ್ಕೆ ಉದಾಹರಣೆಗಳು
A) ಚಿಕ್ಕ – ದೊಡ್ಡ
B) ಸಣ್ಣ – ದಪ್ಪ
C) ಹಳತು – ಹೊಸತು
D) ಎಲ್ಲವೂ
ಉತ್ತರ: D
ವಿವರಣೆ: ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ಹೇಳುವ ವಿಶೇಷಣಗಳೇ ಗುಣವಾಚಕಗಳು. ವಿಶೇಷಣಗಳನ್ನು ಯಾವುದಕ್ಕೆ ಹೇಳಲಾಗುತ್ತದೋ ಅಂಥ ಶಬ್ದಗಳನ್ನು ವಿಶೇಷ್ಯಗಳು ಎನ್ನುತ್ತಾರೆ.
69. ಭಾವ ನಾಮಕ್ಕೆ ಉದಾಹರಣೆ
A) ಬಿಳುಪು
B) ಮಾಟ
C) ನೋಟ
D) ಎಲ್ಲವೂ
ಉತ್ತರ: D
ವಿವರಣೆ: ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು.
70. ಸರ್ವನಾಮ ಪದಗಳು
A) ಅವನು – ಇವನು
B) ಅವಳು – ಇವಳು
C) ಅದು – ಇದು
D) ಈ ಎಲ್ಲವೂ
ಉತ್ತರ: D
ವಿವರಣೆ: ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು ಉದಾ:- ಅವನು, ಅವಳು, ಅದು, ಅವು, ನೀನು, ನೀವು, ನಾನು, ಯಾವನು, ಇದು, ಏನು ಇತ್ಯಾದಿ.
71. ಶಬರಿ : ಅಂಕಿತನಾಮ : : ಕುರುಡ : ———-
A) ಭಾವನಾಮ
B) ರೂಢನಾಮ
C) ಅನ್ವರ್ಥನಾಮ
D) ಸರ್ವನಾಮ
ಉತ್ತರ: C
ವಿವರಣೆ: ರೂಪ, ಗುಣ, ಸ್ವಭಾವ, ವಿಶೇಷವಾದ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳೆಲ್ಲ ಅನ್ವರ್ಥನಾಮಗಳು
ಉದಾ:- ಕವಿ, ಮೂಗ.
72. ಶಾಲೆ : ರೂಢನಾಮ : : ದ್ರೋಣ : —–
A) ಅಂಕಿತನಾಮ
B) ಸರ್ವನಾಮ
C) ಅನ್ವರ್ಥನಾಮ
D) ಭಾವನಾಮ
ಉತ್ತರ: A
ವಿವರಣೆ:
73. ದಿಗ್ವಾಚಕ ಪದಕ್ಕೆ ಉದಾಹರಣೆ
A) ಈಶಾನ್ಯ ಈ
B) ಆಗ್ನೇಯ
C) ಮೂಡಣ
D) ಎಲ್ಲವೂ
ಉತ್ತರ: D
ವಿವರಣೆ: ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು. ಉದಾ:- ಮೂಡಣ, ಪಡುವಣ, ತೆಂಕಣ, ಬಡಗಣ, ಮೂಡಲು, ಪಡುವಲು, ತೆಂಕಲು, ಬಡಗಲು, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ, ಆಚೆ, ಈಚೆ ಇತ್ಯಾದಿ.
74. ಪ್ರಥಮ ಪುರುಷ ಸರ್ವನಾಮ ಉದಾಹರಣೆ
A) ಅವರು
B) ಇವರು
C) ಅದು
D) ಇವೆಲ್ಲವುಗಳು
ಉತ್ತರ: D
ವಿವರಣೆ: ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು. ಪ್ರಥಮ ಪುರುಷ/ಅನ್ಯ ಪರುಷ : ಅವನು – ಇವನು ಅವಳು – ಇವಳು.
75. ಉತ್ತಮ ಪುರುಷ ಸರ್ವನಾಮ ಏಕವಚನಕ್ಕೆ ಉದಾಹರಣೆ
A) ನೀನು
B) ಅವನು
C) ಅದು
D) ನಾನು
ಉತ್ತರ: D
ವಿವರಣೆ: ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು.ಉತ್ತಮ ಪುರುಷ : ನಾನು ನಾವು.
76. ತರಗತಿಯ ಕಪ್ಪುಹಲಗೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುತ್ತದೆ ವಾಕ್ಯದಲ್ಲಿ ಭಾವನಾಮ :
A) ಕಪ್ಪು
B) ಹಲಗೆ
C) ಭವಿಷ್ಯ
D) ತರಗತಿ
ಉತ್ತರ: A
ವಿವರಣೆ: ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು. ಬಿಳಿದರ ಭಾವ – ಬಿಳುಪು.
77. ಭಾವನಾಮಕ್ಕೆ ಉದಾಹರಣೆ
A) ಹಿರಿಮೆ
B) ಅಷ್ಟು
C) ಇಂತಹ
D) ತೆಂಕಣ
ಉತ್ತರ: A
ವಿವರಣೆ: ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು. ಹಿರಿದರ ಭಾವ – ಹಿರಿಮೆ
78. ಇತ್ತೀಚಿನ ದಿನಗಳಲ್ಲಿ ಹಲವು ರೋಗಗಳು ಮನುಷ್ಯನನ್ನು ಕಾಡುತ್ತಿವೆ ವಾಕ್ಯದಲ್ಲಿರುವ ಪರಿಮಾಣವಾಚಕ ಪದ
A) ದಿನ
B) ಹಲವು
C) ರೋಗ
D) ಕಾಡು
ಉತ್ತರ: B
ವಿವರಣೆ: ವಸ್ತುಗಳ ಸಾಮಾನ್ಯ ಅಳತೆ, ಪರಮಾಣ, ಗಾತ್ರ-ತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಳೆನ್ನುವರು.ಹಲವು, ಕೆಲವು. (ಹಲವು ನದಿಗಳು, ಕೆಲವು ಹಣ್ಣುಗಳು).
79. ತೆಂಕಣ, ಮಯೂರ, ಚಂದ್ರ, ಆಕಾಶ, ಇವುಗಳಲ್ಲಿ ದಿಗ್ವಾಚಕ ಪದ
A) ಮಯೂರ
B) ತೆಂಕಣ
C) ಚಂದ್ರ
D) ಆಕಾಶ
ಉತ್ತರ: B
ವಿವರಣೆ: ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು. ಉದಾ:- ಮೂಡಣ, ಪಡುವಣ, ತೆಂಕಣ, ಬಡಗಣ, ಮೂಡಲು, ಪಡುವಲು, ತೆಂಕಲು, ಬಡಗಲು, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ, ಆಚೆ, ಈಚೆ ಇತ್ಯಾದಿ.
80. ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು? – ವಾಕ್ಯದಲ್ಲಿ ಪರಿಮಾಣವಾಚಕ ಪದ
A) ಅಷ್ಟು
B) ದೊಡ್ಡ
C) ಮರವನ್ನು
D) ಕಡಿದರು
ಉತ್ತರ: A
ವಿವರಣೆ: ವಸ್ತುಗಳ ಸಾಮಾನ್ಯ ಅಳತೆ, ಪರಮಾಣ, ಗಾತ್ರ-ತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಳೆನ್ನುವರು.ಉದಾ: `ಅಷ್ಟು, ಇಷ್ಟು, ಹಲವು, ಕೆಲವು, ಅನಿತು.
81. ಸೂರ್ಯನು ಪಡುವಣ ದಿಕ್ಕಿನಲ್ಲಿ ಮೂಡಿದನು ವಾಕ್ಯದಲ್ಲಿ ದಿಗ್ವಾಚಕ ಪದ
A) ಪಡುವಣ
B) ದಿಕ್ಕು
C) ಸೂರ್ಯ
D) ಮೂಡು
ಉತ್ತರ: A
ವಿವರಣೆ: ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು. ಉದಾ:- ಮೂಡಣ, ಪಡುವಣ, ತೆಂಕಣ, ಬಡಗಣ, ಮೂಡಲು, ಪಡುವಲು, ತೆಂಕಲು, ಬಡಗಲು, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ, ಆಚೆ, ಈಚೆ ಇತ್ಯಾದಿ.
82. ಅನ್ವರ್ಥನಾಮಪದಕ್ಕೆ ಉದಾಹರಣೆ
A) ಶಿಕ್ಷಕ
B) ವಿದ್ಯಾರ್ಥಿ
C) ಪೂಜಾರಿ
D) ಎಲ್ಲವೂ
ಉತ್ತರ: D
ವಿವರಣೆ: ರೂಪ, ಗುಣ, ಸ್ವಭಾವ, ವಿಶೇಷವಾದ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳೆಲ್ಲ ಅನ್ವರ್ಥನಾಮಗಳು
ಉದಾ:- ಕವಿ, ಮೂಗ, ನೀತಿಜ್ಞ, ಕುಂಟ, ಹೆಳವ, ಗಿಡ್ಡ, ಬೆಪ್ಪ, ಕ್ರೂರಿ, ಪೆದ್ದ, ಬುದ್ಧಿವಂತ, ಧೀರ, ಹೇಡಿ, ಸಾಧು, ಜಿಪುಣ, ಅಷ್ಟಾವಕ್ರ, ಶಿಕ್ಷಕ, ವ್ಯಾಪಾರಿ, ಯೋಗಿ, ರೋಗಿ, ಸನ್ಯಾಸಿ, ವೈದ್ಯ, ಶಿಕ್ಷಕಿ, ಪಂಡಿತ, ಮೂಕ, ವಿದ್ವಾಂಸ, ಪೂಜಾರಿ, ಕುರುಡ, ಜಾಣ, ಕಿವುಡ, ದಡ್ಡ, ವಿಜ್ಞಾನಿ, ದಾನಿ, ಅಭಿಮಾನಿ ಮುಂತಾದವು.
83. ‘ಒಂದು’ ಯಾವ ರೀತಿಯ ನಾಮಪದ?
A) ಗುಣವಾಚಕ
B) ಸಂಖ್ಯಾವಾಚಕ
C) ವಸ್ತುವಾಚಕ
D) ಭಾವನಾಮ
ಉತ್ತರ: B
ವಿವರಣೆ:ಒಂದು ಎಂಬುದು ಸಂಖ್ಯೆಯನ್ನು ಸೂಚಿಸುವ ಪದವಾಗಿದೆ. ಆದ್ದರಿಂದ ಇದು ಸಂಖ್ಯಾವಾಚಕ ನಾಮಪದ.
84. ‘ಒಬ್ಬ’ ಯಾವ ರೀತಿಯ ನಾಮಪದ?
A) ಸಂಖ್ಯಾವಾಚಕ
B) ಸಂಖ್ಯೇಯವಾಚಕ
C) ವಸ್ತುವಾಚಕ
D) ಗುಣವಾಚಕ
ಉತ್ತರ: B
ವಿವರಣೆ: ಸಂಖ್ಯೆಯಿಂದ ಕೂಡಿದ ಶಬ್ದಗಳು ಸಂಖ್ಯೇಯವಾಚಕಗಳು. ‘ಒಂದು’ ಸಂಖ್ಯಾವಾಚಕ, ಆದರೆ ‘ಒಬ್ಬ’ (ಒಬ್ಬ ವ್ಯಕ್ತಿ) ಸಂಖ್ಯೇಯವಾಚಕ.
85. ‘ನೋಟ’ ಯಾವ ರೀತಿಯ ನಾಮಪದ?
A) ಗುಣವಾಚಕ
B) ಭಾವನಾಮ
C) ವಸ್ತುವಾಚಕ
D) ಸಂಖ್ಯಾವಾಚಕ
ಉತ್ತರ: B
ವಿವರಣೆ: ‘ನೋಡುವುದರ ಭಾವ’ವನ್ನು ‘ನೋಟ’ ಎನ್ನಲಾಗುತ್ತದೆ. ಕ್ರಿಯೆಯ ಭಾವವನ್ನು ತಿಳಿಸುವ ಪದಗಳು ಭಾವನಾಮಗಳು.
86. ‘ಅಷ್ಟು’ ಯಾವ ರೀತಿಯ ನಾಮಪದ?
A) ಪರಿಮಾಣವಾಚಕ
B) ಸಂಖ್ಯಾವಾಚಕ
C) ಗುಣವಾಚಕ
D) ವಸ್ತುವಾಚಕ
ಉತ್ತರ: A
ವಿವರಣೆ: ‘ಅಷ್ಟು’ ಎಂಬ ಪದವು ನಿರ್ದಿಷ್ಟ ಸಂಖ್ಯೆ ಅಥವಾ ಅಳತೆಯನ್ನು ಹೇಳದೆ, ಪರಿಮಾಣ ಅಥವಾ ಗಾತ್ರವನ್ನು ಸೂಚಿಸುತ್ತದೆ. ಆದ್ದರಿಂದ ಇದು
ಪರಿಮಾಣವಾಚಕ ನಾಮಪದ.
87. ‘ಇಂಥ’ ಯಾವ ರೀತಿಯ ನಾಮಪದ?
A) ಪ್ರಕಾರವಾಚಕ
B) ದಿಗ್ವಾಚಕ
C) ಸರ್ವನಾಮ
D) ಗುಣವಾಚಕ
ಉತ್ತರ: A
ವಿವರಣೆ:ವಸ್ತುಗಳ ಸ್ಥಿತಿ ಅಥವಾ ರೀತಿಯನ್ನು ತಿಳಿಸುವ ‘ಇಂಥ’, ‘ಅಂಥ’ ಮುಂತಾದ ಪದಗಳು ಪ್ರಕಾರವಾಚಕಗಳು.
88. ‘ಪೂರ್ವ’ ಯಾವ ರೀತಿಯ ನಾಮಪದ?
A) ದಿಗ್ವಾಚಕ
B) ಪ್ರಕಾರವಾಚಕ
C) ಸರ್ವನಾಮ
D) ಪರಿಮಾಣವಾಚಕ
ಉತ್ತರ: A
ವಿವರಣೆ: ದಿಕ್ಕುಗಳನ್ನು ಸೂಚಿಸುವ ‘ಪೂರ್ವ’, ‘ಪಶ್ಚಿಮ’ ಮುಂತಾದ ಪದಗಳು ದಿಗ್ವಾಚಕ ನಾಮಪದಗಳು.
89. ‘ಅವನು’ ಯಾವ ರೀತಿಯ ನಾಮಪದ?
A) ಸರ್ವನಾಮ
B) ವಸ್ತುವಾಚಕ
C) ಗುಣವಾಚಕ
D) ಭಾವನಾಮ
ಉತ್ತರ: A
ವಿವರಣೆ: ನಾಮಪದದ ಸ್ಥಾನದಲ್ಲಿ ಬಂದು ಅದರ ಕಾರ್ಯವನ್ನು ನಿರ್ವಹಿಸುವ ‘ಅವನು’, ‘ಅವಳು’ ಮುಂತಾದ ಪದಗಳು ಸರ್ವನಾಮಗಳು.
90. ‘ರಾಮ’ ಯಾವ ರೀತಿಯ ವಸ್ತುವಾಚಕ ನಾಮಪದ?
A) ರೂಢನಾಮ
B) ಅಂಕಿತನಾಮ
C) ಅನ್ವರ್ಥನಾಮ
D) ಭಾವನಾಮ
ಉತ್ತರ: B
ವಿವರಣೆ:ರಾಮ ಎಂಬುದು ಒಬ್ಬ ನಿರ್ದಿಷ್ಟ ವ್ಯಕ್ತಿಯ ಹೆಸರು. ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳು ಅಂಕಿತನಾಮಗಳು.
91. ‘ಹುಡುಗ’ ಯಾವ ರೀತಿಯ ವಸ್ತುವಾಚಕ ನಾಮಪದ?
A) ರೂಢನಾಮ
B) ಅಂಕಿತನಾಮ
C) ಅನ್ವರ್ಥನಾಮ
D) ಸರ್ವನಾಮ
ಉತ್ತರ: A
ವಿವರಣೆ:ಹುಡುಗ ಎಂಬುದು ರೂಢಿಯಿಂದ ಬಂದ ಸಾಮಾನ್ಯ ಹೆಸರು. ಇದು ಯಾವುದೇ ನಿರ್ದಿಷ್ಟ ಹುಡುಗನನ್ನು ಸೂಚಿಸದೆ, ಸಾಮಾನ್ಯವಾಗಿ ಎಲ್ಲಾ
ಹುಡುಗರನ್ನು ಸೂಚಿಸುತ್ತದೆ. ಆದ್ದರಿಂದ ಇದು ರೂಢನಾಮ.
92. ‘ಕುಂಟ’ ಯಾವ ರೀತಿಯ ವಸ್ತುವಾಚಕ ನಾಮಪದ?
A) ರೂಢನಾಮ
B) ಅಂಕಿತನಾಮ
C) ಅನ್ವರ್ಥನಾಮ
D) ಗುಣವಾಚಕ
ಉತ್ತರ: C
ವಿವರಣೆ: ರೂಪ, ಗುಣ, ಸ್ವಭಾವ ಅಥವಾ ವಿಶೇಷ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳು ಅನ್ವರ್ಥನಾಮಗಳು. ‘ಕುಂಟ’ ಎಂಬುದು ಒಬ್ಬ
ವ್ಯಕ್ತಿಯ ಲಕ್ಷಣವನ್ನು ಅನ್ವರ್ಥವಾಗಿ (ಅರ್ಥದೊಂದಿಗೆ ಹೊಂದಿಕೆಯಾಗುವಂತೆ) ತಿಳಿಸುತ್ತದೆ.
93. ‘ಸಿಹಿ ಹಣ್ಣು’ ಪದದಲ್ಲಿ ‘ಸಿಹಿ’ ಯಾವ ರೀತಿಯ ನಾಮಪದ?
A) ವಿಶೇಷ್ಯ
B) ವಿಶೇಷಣ
C) ಸರ್ವನಾಮ
D) ಭಾವನಾಮ
ಉತ್ತರ: B
ವಿವರಣೆ:‘ಸಿಹಿ’ ಎಂಬ ಪದವು ‘ಹಣ್ಣು’ ಎಂಬ ನಾಮಪದದ ಗುಣವನ್ನು ವಿವರಿಸುತ್ತದೆ. ವಸ್ತುವಿನ ಗುಣವನ್ನು ಹೇಳುವ ಪದವನ್ನು ವಿಶೇಷಣ
ಎನ್ನುತ್ತಾರೆ.
94. ‘ಸಿಹಿ ಹಣ್ಣು’ ಪದದಲ್ಲಿ ‘ಹಣ್ಣು’ ಯಾವ ರೀತಿಯ ನಾಮಪದ?
A) ವಿಶೇಷ್ಯ
B) ವಿಶೇಷಣ
C) ಸರ್ವನಾಮ
D) ಭಾವನಾಮ
ಉತ್ತರ: A
ವಿವರಣೆ:ವಿಶೇಷಣವನ್ನು (ಸಿಹಿ) ಹೇಳಲಾಗುವ ಪದವನ್ನು (ಹಣ್ಣು) ವಿಶೇಷ್ಯ ಎನ್ನುತ್ತಾರೆ.
95. ‘ಇಬ್ಬರು’ ಯಾವ ರೀತಿಯ ನಾಮಪದ?
A) ಸಂಖ್ಯಾವಾಚಕ
B) ಸಂಖ್ಯೇಯವಾಚಕ
C) ಪರಿಮಾಣವಾಚಕ
D) ಗುಣವಾಚಕ
ಉತ್ತರ: B
ವಿವರಣೆ:ಸಂಖ್ಯೆಯಿಂದ ಕೂಡಿದ (‘ಎರಡು’ ಸಂಖ್ಯೆ) ಶಬ್ದ ‘ಇಬ್ಬರು’ ಸಂಖ್ಯೇಯವಾಚಕ ನಾಮಪದ.
96. ‘ಬಿಳುಪು’ ಯಾವ ರೀತಿಯ ನಾಮಪದ?
A) ಗುಣವಾಚಕ
B) ಭಾವನಾಮ
C) ವಸ್ತುವಾಚಕ
D) ಸಂಖ್ಯಾವಾಚಕ
ಉತ್ತರ: B
ವಿವರಣೆ: ‘ಬಿಳಿದರ ಭಾವ’ವನ್ನು ‘ಬಿಳುಪು’ ಎನ್ನಲಾಗುತ್ತದೆ. ಗುಣದ ಭಾವವನ್ನು ತಿಳಿಸುವ ಪದವಾದ್ದರಿಂದ ಇದು ಭಾವನಾಮ.
97. ‘ಹಿರಿಮೆ’ ಯಾವ ರೀತಿಯ ನಾಮಪದ?
A) ಗುಣವಾಚಕ
B) ಭಾವನಾಮ
C) ವಸ್ತುವಾಚಕ
D) ಸಂಖ್ಯಾವಾಚಕ
ಉತ್ತರ: B
ವಿವರಣೆ: ‘ಹಿರಿದರ ಭಾವ’ವನ್ನು ‘ಹಿರಿಮೆ’ ಎನ್ನಲಾಗುತ್ತದೆ. ಆದ್ದರಿಂದ ಇದು ಭಾವನಾಮ.
98. ‘ಕೆಲವು’ ಯಾವ ರೀತಿಯ ನಾಮಪದ?
A) ಪರಿಮಾಣವಾಚಕ
B) ಸಂಖ್ಯಾವಾಚಕ
C) ಸಂಖ್ಯೇಯವಾಚಕ
D) ಗುಣವಾಚಕ
ಉತ್ತರ: A
ವಿವರಣೆ: ‘ಕೆಲವು’ ಎಂಬ ಪದವು ನಿರ್ದಿಷ್ಟ ಸಂಖ್ಯೆಯನ್ನು ಹೇಳದೆ, ಪರಿಮಾಣವನ್ನು ಸೂಚಿಸುತ್ತದೆ. ಆದ್ದರಿಂದ ಇದು ಪರಿಮಾಣವಾಚಕ.
99. ‘ಅಂಥವನು’ ಯಾವ ರೀತಿಯ ನಾಮಪದ?
A) ಪ್ರಕಾರವಾಚಕ
B) ದಿಗ್ವಾಚಕ
C) ಸರ್ವನಾಮ
D) ಗುಣವಾಚಕ
ಉತ್ತರ: A
ವಿವರಣೆ: ವಸ್ತುಗಳ ಸ್ಥಿತಿ ಅಥವಾ ರೀತಿಯನ್ನು ತಿಳಿಸುವ ‘ಅಂಥವನು’ ಪ್ರಕಾರವಾಚಕ ನಾಮಪದ.
100.’ಬಡಗಣ’ ಯಾವ ರೀತಿಯ ನಾಮಪದ?
A) ದಿಗ್ವಾಚಕ
B) ಪ್ರಕಾರವಾಚಕ
C) ಸರ್ವನಾಮ
D) ಪರಿಮಾಣವಾಚಕ
ಉತ್ತರ: A
ವಿವರಣೆ:ದಿಕ್ಕನ್ನು ಸೂಚಿಸುವ ‘ಬಡಗಣ’ (ಉತ್ತರ) ದಿಗ್ವಾಚಕ ನಾಮಪದ.
