1. ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಲೋಪ ಮಾಡಿಕೊಂಡು ಒಂದೇ ಏನೆಂದು ಕರೆಯುತ್ತಾರೆ?
A) ಸಂಧಿ
B) ಸಮಾಸ
C) ವಿಭಕ್ತಿ
D) ಪ್ರತ್ಯಯ
ಉತ್ತರ: B
ವಿವರಣೆ: ಸಮಾಸ ಎಂದರೆ ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ, ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಲೋಪ ಮಾಡಿಕೊಂಡು ಒಂದೇ ಪದವಾಗುವುದು. ಉದಾ: ಅರಸನ + ಮನೆ = ಅರಮನೆ.
2. ಸಮಾಸದಲ್ಲಿ ಮೊದಲು ಬರುವ ಪದವನ್ನು ಏನೆಂದು ಕರೆಯುತ್ತಾರೆ?
A) ಉತ್ತರಪದ
B) ವಿಭಕ್ತಿ
C) ಪೂರ್ವಪದ
D) ಸಮಸ್ತಪದ
ಉತ್ತರ: C
ವಿವರಣೆ: ಸಮಾಸದಲ್ಲಿ ಸೇರುವ ಎರಡು ಪದಗಳಲ್ಲಿ ಮೊದಲನೆಯದನ್ನು ‘ಪೂರ್ವಪದ’ ಮತ್ತು ಎರಡನೆಯದನ್ನು ‘ಉತ್ತರಪದ’ ಎಂದು ಕರೆಯುತ್ತಾರೆ.
3. ಸಮಸ್ತಪದವನ್ನು ಬಿಡಿಸಿ ಬರೆಯುವುದಕ್ಕೆ ಏನೆಂದು ಹೆಸರು?
A) ಸಮಾಸ
B) ವಿಗ್ರಹವಾಕ್ಯ
C) ವಿಭಕ್ತಿ
D) ಪ್ರಕೃತಿ
ಉತ್ತರ: B
ವಿವರಣೆ:ಸಮಾಸದಿಂದ ಆದ ಪದವನ್ನು (ಸಮಸ್ತಪದ) ಮತ್ತೆ ಬಿಡಿಸಿ ಬರೆದರೆ ಅದನ್ನು ‘ವಿಗ್ರಹವಾಕ್ಯ’ ಎನ್ನುತ್ತಾರೆ. ಉದಾ: ಅರಮನೆ -> ಅರಸನ ಮನೆ.
4. ‘ಮಳೆಗಾಲ’ ಎಂಬ ಸಮಸ್ತಪದದ ವಿಗ್ರಹವಾಕ್ಯ ಯಾವುದು?
A) ಮಳೆಯ + ಕಾಲ
B) ಮಳೆ + ಕಾಲ
C) ಮಳೆಯಿಂದ + ಕಾಲ
D) ಮಳೆಗೆ + ಕಾಲ
ಉತ್ತರ: A
ವಿವರಣೆ:‘ಮಳೆಗಾಲ’ ಎಂಬ ಸಮಾಸ ಪದವನ್ನು ಬಿಡಿಸಿದಾಗ ‘ಮಳೆಯ + ಕಾಲ’ ಎಂಬ ವಿಗ್ರಹವಾಕ್ಯ ಸಿಗುತ್ತದೆ.
5. ಕನ್ನಡ ವ್ಯಾಕರಣದಲ್ಲಿ ಸಮಾಸಗಳು ಎಷ್ಟು ವಿಧಗಳಿವೆ?
A) 4
B) 6
C) 8
D) 10
ಉತ್ತರ: C
ವಿವರಣೆ: ಕನ್ನಡದಲ್ಲಿ ಸಮಾಸಗಳನ್ನು ಪ್ರಧಾನವಾಗಿ 8 ವಿಧಗಳಾಗಿ ವಿಂಗಡಿಸಲಾಗಿದೆ. ಅವು: 1. ತತ್ಪುರುಷ 2. ಕರ್ಮಧಾರಯ 3. ದ್ವಿಗು 4. ಅಂಶಿ 5. ದ್ವಂದ್ವ 6. ಬಹುವ್ರೀಹಿ 7. ಕ್ರಿಯಾ 8. ಗಮಕ ಸಮಾಸ.
6. ತತ್ಪುರುಷ ಸಮಾಸದ ಮುಖ್ಯ ಲಕ್ಷಣ ಯಾವುದು?
A) ಪೂರ್ವಪದದ ಅರ್ಥ ಪ್ರಧಾನ
B) ಎರಡೂ ಪದಗಳ ಅರ್ಥ ಪ್ರಧಾನ
C) ಉತ್ತರಪದದ ಅರ್ಥ ಪ್ರಧಾನ
D) ಅನ್ಯಪದದ ಅರ್ಥ ಪ್ರಧಾನ
ಉತ್ತರ: C
ವಿವರಣೆ: ತತ್ಪುರುಷ ಸಮಾಸದಲ್ಲಿ ಎರಡು ನಾಮಪದಗಳು ಸೇರಿ, ಉತ್ತರಪದದ ಅರ್ಥವೇ ಪ್ರಧಾನವಾಗಿ ಉಳಿಯುತ್ತದೆ. ಉದಾ: ‘ಅರಮನೆ’ಯಲ್ಲಿ ‘ಮನೆ’ಯ ಅರ್ಥ ಪ್ರಧಾನ.
7. ‘ದೇವಮಂದಿರ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ದೇವರ + ಮಂದಿರ
B) ದೇವರಿಗೆ +ಮಂದಿರ
C) ದೇವರಿಂದ + ಮಂದಿರ
D) ದೇವರೊಡನೆ + ಮಂದಿರ
ಉತ್ತರ: A
ವಿವರಣೆ:ಇದು ಷಷ್ಠೀ ತತ್ಪುರುಷ ಸಮಾಸ. ದೇವರ + ಮಂದಿರ = ದೇವಮಂದಿರ. ಇಲ್ಲಿ ಉತ್ತರಪದ ‘ಮಂದಿರ’ದ ಅರ್ಥ ಪ್ರಧಾನ.
8. ‘ತಲೆನೋವು’ ಎಂಬ ಸಮಾಸವು ಯಾವ ವಿಭಕ್ತಿಯ ತತ್ಪುರುಷ ಸಮಾಸದ ಉದಾಹರಣೆ?
A) ತೃತೀಯಾ
B) ಚತುರ್ಥೀ
C) ಪಂಚಮೀ
D) ಸಪ್ತಮೀ
ಉತ್ತರ: D
ವಿವರಣೆ:‘ತಲೆನೋವು’ ಎಂಬ ಪದದ ವಿಗ್ರಹವಾಕ್ಯ ‘ತಲೆಯಲ್ಲಿ ನೋವು’. ಇಲ್ಲಿ ‘ತಲೆಯಲ್ಲಿ’ ಎಂಬುದು ಸಪ್ತಮೀ ವಿಭಕ್ತಿಯನ್ನು ಸೂಚಿಸುತ್ತದೆ. ಆದ್ದರಿಂದ ಇದು ಸಪ್ತಮೀ ತತ್ಪುರುಷ ಸಮಾಸ.
9. ‘ಕೆಂದಾವರೆ’ ಈ ಸಮಾಸಪದದ ಪ್ರಕಾರ ಯಾವುದು?
A) ತತ್ಪುರುಷ
B) ಕರ್ಮಧಾರಯ
C) ದ್ವಿಗು
D) ದ್ವಂದ್ವ
ಉತ್ತರ: B
ವಿವರಣೆ: ‘ಕೆಂಪಾದ ತಾವರೆ’ ಎಂಬ ವಿಗ್ರಹವಾಕ್ಯದಲ್ಲಿ ‘ಕೆಂಪಾದ’ ಎಂಬುದು ವಿಶೇಷಣ ಮತ್ತು ‘ತಾವರೆ’ ವಿಶೇಷ್ಯ.
10. ‘ಸಂಜೆಗೆಂಪು’ ಈ ಸಮಾಸಪದದ ವಿಗ್ರಹವಾಕ್ಯ ಯಾವುದು?
A) ಸಂಜೆಯು + ಕೆಂಪು
B) ಸಂಜೆಯ + ಕೆಂಪು
C) ಸಂಜೆ + ಕೆಂಪು
D) ಸಂಜೆಯಿಂದ + ಕೆಂಪು
ಉತ್ತರ: B
ವಿವರಣೆ: ‘ಸಂಜೆಯ ಕೆಂಪು’ ಎಂಬ ವಿಗ್ರಹವಾಕ್ಯದಲ್ಲಿ ಷಷ್ಠೀ ವಿಭಕ್ತಿ ಲೋಪವಾಗಿ ‘ಸಂಜೆಗೆಂಪು’ ಎಂಬ ಸಮಾಸಪದ ರೂಪುಗೊಂಡಿದೆ. ಇದು ಉತ್ತರಪದದ ಅರ್ಥ ಪ್ರಧಾನವಾಗಿರುವುದರಿಂದ ಇದು ತತ್ಪುರುಷ ಸಮಾಸ.
11. ಕರ್ಮಧಾರಯ ಸಮಾಸದ ಮುಖ್ಯ ಲಕ್ಷಣ ಯಾವುದು?
A) ಪೂರ್ವಪದ ಸಂಖ್ಯಾವಾಚಕ
B) ವಿಶೇಷಣ-ವಿಶೇಷ್ಯ ಭಾವ
C) ಪೂರ್ವಪದದ ಅರ್ಥ ಪ್ರಧಾನ
D) ಅನ್ಯಪದದ ಅರ್ಥ ಪ್ರಧಾನ
ಉತ್ತರ: B
ವಿವರಣೆ: ಕರ್ಮಧಾರಯ ಸಮಾಸದಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಲಿಂಗ, ವಚನ, ವಿಭಕ್ತಿಗಳಲ್ಲಿ ಸಮಾನವಾಗಿದ್ದು, ಪೂರ್ವಪದವು ಉತ್ತರಪದದ ವಿಶೇಷಣವಾಗಿರುತ್ತದೆ. ಉದಾ: ದೊಡ್ಡಹುಡುಗ.
12. ‘ಹೆಜ್ಜೇನು’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಹಿರಿದು + ಜೇನು
B) ಹಿರಿದು ಮತ್ತು ಜೇನು
C) ಹಿರಿದರ ಜೇನು
D) ಹಿರಿದಿಗೆ ಜೇನು
ಉತ್ತರ: A
ವಿವರಣೆ: ಇದು ವಿಶೇಷಣಪೂರ್ವಪದ ಕರ್ಮಧಾರಯ ಸಮಾಸ. ಹಿರಿದು + ಜೇನು = ಹೆಜ್ಜೇನು. ಇಲ್ಲಿ ‘ಹಿರಿದು’ ಎಂಬ ಪದವು ‘ಜೇನು’ಗೆ ವಿಶೇಷಣವಾಗಿದೆ.
13. ‘ಕೆಂದಾವರೆ’ ಈ ಸಮಾಸಪದದ ಪ್ರಕಾರ ಯಾವುದು?
A) ತತ್ಪುರುಷ
B) ಕರ್ಮಧಾರಯ
C) ದ್ವಿಗು
D) ದ್ವಂದ್ವ
ಉತ್ತರ: B
ವಿವರಣೆ: ‘ಕೆಂಪಾದ + ತಾವರೆ’ ಎಂಬ ವಿಗ್ರಹವಾಕ್ಯದಲ್ಲಿ ‘ಕೆಂಪಾದ’ ಎಂಬುದು ವಿಶೇಷಣ ಮತ್ತು ‘ತಾವರೆ’ ವಿಶೇಷ್ಯ. ವಿಶೇಷಣ-ವಿಶೇಷ್ಯ ಭಾವದಿಂದ ಕೂಡಿದೆ. ಆದ್ದರಿಂದ ಇದು ಕರ್ಮಧಾರಯ ಸಮಾಸ.
14. ‘ತಾವರೆಗಣ್ಣು’ ಎಂಬ ಸಮಾಸವು ಕರ್ಮಧಾರಯದ ಯಾವ ಭೇದಕ್ಕೆ ಉದಾಹರಣೆ?
A) ವಿಶೇಷಣೋತ್ತರಪದ
B) ಉಪಮಾನಪೂರ್ವಪದ
C) ಅವಧಾರಣಾಪೂರ್ವಪದ
D) ಸಂಭಾವನಾಪೂರ್ವಪದ
ಉತ್ತರ: B
ವಿವರಣೆ: ‘ತಾವರೆಗಣ್ಣು’ ಎಂಬ ಪದದಲ್ಲಿ ‘ತಾವರೆ’ ಎಂಬುದು ಉಪಮಾನ (ಹೋಲಿಕೆ) ಮತ್ತು ‘ಕಣ್ಣು’ ಉಪಮೇಯ. ಅಂದರೆ, ತಾವರೆಯಂತೆ ಇರುವ ಕಣ್ಣು. ಆದ್ದರಿಂದ ಇದು ಉಪಮಾನಪೂರ್ವಪದ ಕರ್ಮಧಾರಯ ಸಮಾಸ.
15. ‘ಬೆಟ್ಟದಾವರೆ’ – ______ ಸಮಾಸ.
A) ತತ್ಪುರುಷ
B) ಕರ್ಮಧಾರಯ
C) ದ್ವಂದ್ವ
D) ಬಹುವ್ರೀಹಿ
ಉತ್ತರ: A
ವಿವರಣೆ: ‘ಬೆಟ್ಟದ + ತಾವರೆ’ ಎಂಬ ವಿಗ್ರಹ. ಉತ್ತರಪದದ ಅರ್ಥ ಪ್ರಧಾನ. ಷಷ್ಠೀ ತತ್ಪುರುಷ.
16. ‘ಕಾರ್ಮೋಡ’ – _____ ಸಮಾಸ.
A) ತತ್ಪುರುಷ
B) ಕರ್ಮಧಾರಯ
C) ದ್ವಿಗು
D) ದ್ವಂದ್ವ
ಉತ್ತರ: B
ವಿವರಣೆ: ‘ಕರಿದು + ಮೋಡ’ ಎಂಬ ವಿಗ್ರಹ. ವಿಶೇಷಣ-ವಿಶೇಷ್ಯ ಭಾವ. ಕರ್ಮಧಾರಯ ಸಮಾಸ.
17. ದ್ವಿಗು ಸಮಾಸದ ಮುಖ್ಯ ಲಕ್ಷಣ ಯಾವುದು?
A) ಪೂರ್ವಪದ ವಿಶೇಷಣ
B) ಪೂರ್ವಪದ ಸಂಖ್ಯಾವಾಚಕ
C) ಉತ್ತರಪದ ಸಂಖ್ಯಾವಾಚಕ
D) ಎರಡೂ ಪದಗಳ ಅರ್ಥ ಪ್ರಧಾನ
ಉತ್ತರ: B
ವಿವರಣೆ: ದ್ವಿಗು ಸಮಾಸದಲ್ಲಿ ಪೂರ್ವಪದವು ಸಂಖ್ಯಾವಾಚಕವಾಗಿರುತ್ತದೆ. ಉದಾ: ಮೂರು + ಮಡಿ = ಮುಮ್ಮಡಿ.
18. ‘ಇಮ್ಮಡಿ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಎರಡು + ಮಡಿ
B) ಎರಡನೆಯ + ಮಡಿ
C) ಎರಡುನೆ + ಮಡಿ
D) ಎರಡಿಗೆ + ಮಡಿ
ಉತ್ತರ: A
ವಿವರಣೆ: ಇಮ್ಮಡಿ ಎಂಬುದು ದ್ವಿಗು ಸಮಾಸ. ಎರಡು + ಮಡಿ = ಇಮ್ಮಡಿ.
19. ‘ಸಪ್ತಸ್ವರಗಳು’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಸಪ್ತಗಳಾದ + ಸ್ವರಗಳು
B) ಸಪ್ತದ +ಸ್ವರಗಳು
C) ಸಪ್ತ + ಸ್ವರಗಳು
D) ಸಪ್ತಕ್ಕೆ + ಸ್ವರಗಳು
ಉತ್ತರ: A
ವಿವರಣೆ: ಇದು ಸಂಸ್ಕೃತ ಶಬ್ದಗಳಿಂದ ಆದ ದ್ವಿಗು ಸಮಾಸ. ಸಪ್ತಗಳಾದ + ಸ್ವರಗಳು = ಸಪ್ತಸ್ವರ.
20. ‘ಒಗ್ಗಟ್ಟು’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಒಂದು + ಕಟ್ಟು
B) ಒಂದಕ್ಕೆ + ಕಟ್ಟು
C) ಒಂದು ಮತ್ತು ಕಟ್ಟು
D) ಒಂದಿಗೆ + ಕಟ್ಟು
ಉತ್ತರ: A
ವಿವರಣೆ: ಇದು ದ್ವಿಗು ಸಮಾಸ. ಒಂದು + ಕಟ್ಟು = ಒಗ್ಗಟ್ಟು. ಇಲ್ಲಿ ‘ಕ’ ಕಾರಕ್ಕೆ ‘ಗ’ ಕಾರ ಆದೇಶವಾಗಿದೆ.
21. ‘ಹೆಬ್ಬಾಗಿಲು’ _____ ಸಮಾಸ.
A) ತತ್ಪುರುಷ
B) ಕರ್ಮಧಾರಯ
C) ದ್ವಿಗು
D) ದ್ವಂದ್ವ
ಉತ್ತರ: B
ವಿವರಣೆ: ಹಿರಿದಾದ +ಬಾಗಿಲು= ವಿಶೇಷಣ-ವಿಶೇಷ್ಯ ಭಾವ. ಕರ್ಮಧಾರಯ ಸಮಾಸ.
22. ಅಂಶಿ ಸಮಾಸದ ಮುಖ್ಯ ಲಕ್ಷಣ ಯಾವುದು?
A) ಪೂರ್ವಪದದ ಅರ್ಥ ಪ್ರಧಾನ
B) ಉತ್ತರಪದದ ಅರ್ಥ ಪ್ರಧಾನ
C) ಎರಡೂ ಪದಗಳ ಅರ್ಥ ಪ್ರಧಾನ
D) ಅಂಶಾಂಶಿ ಭಾವ
ಉತ್ತರ: D
ವಿವರಣೆ: ಅಂಶಿ ಸಮಾಸದಲ್ಲಿ ಪೂರ್ವ ಮತ್ತು ಉತ್ತರ ಪದಗಳು ಅಂಶ ಮತ್ತು ಅಂಶಿ ಭಾವದಿಂದ ಕೂಡಿರುತ್ತವೆ. ಪೂರ್ವಪದದ ಅರ್ಥವೇ ಪ್ರಧಾನವಾಗಿರುತ್ತದೆ. ಉದಾ: ಕೈಯ + ಅಡಿ = ಅಂಗೈ.
23. ‘ಮುಂಗೈ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಕೈಯ + ಮುಂದು
B) ಮುಂದಿನ + ಕೈ
C) ಕೈ ಮತ್ತು + ಮುಂದು
D) ಮುಂದಿಗೆ + ಕೈ
ಉತ್ತರ: A
ವಿವರಣೆ: ಇದು ಅಂಶಿ ಸಮಾಸ. ಕೈಯ + ಮುಂದು = ಮುಂಗೈ. ಇಲ್ಲಿ ‘ಕೈ’ ಎಂಬುದು ಅಂಶಿ ಮತ್ತು ‘ಮುಂದು’ ಎಂಬುದು ಅದರ ಒಂದು ಅಂಶ.
24. ‘ಕಲ್ಲುಹಾಸಿಗೆ’ – ಸಮಾಸ ಭೇದ?
A) ತತ್ಪುರುಷ
B) ಕರ್ಮಧಾರಯ
C) ದ್ವಂದ್ವ
D) ಬಹುವ್ರೀಹಿ
ಉತ್ತರ: A
ವಿವರಣೆ: ‘ಕಲ್ಲಿನ + ಹಾಸಿಗೆ’ ಎಂಬ ವಿಗ್ರಹ. ಉತ್ತರಪದಾರ್ಥ ಪ್ರಧಾನ. ಷಷ್ಠೀ ತತ್ಪುರುಷ.
25. ‘ಕೆಳದುಟಿ’ _____ ಸಮಾಸ
A) ತತ್ಪುರುಷ
B) ಕರ್ಮಧಾರಯ
C) ಅಂಶಿ
D) ದ್ವಿಗು
ಉತ್ತರ: C
ವಿವರಣೆ: ‘ತುಟಿಯ ಕೆಳಗು’ ಎಂಬ ವಿಗ್ರಹ. ಅಂಶ ಮತ್ತು ಅಂಶಿ ಭಾವ.
26. ‘ಎರಡು + ಮಡಿ’ ಸಮಾಸವಾದಾಗ ಏನಾಗುತ್ತದೆ?
A) ಎರಡುಮಡಿ
B) ಎರಡಿಮಡಿ
C) ಇಮ್ಮಡಿ
D) ಎರಳ್ಮಡಿ
ಉತ್ತರ: C
ವಿವರಣೆ: ಸಂಖ್ಯಾಪೂರ್ವಪದದ ಸಮಾಸ. ದ್ವಿಗು ಸಮಾಸ.
27. ‘ತುದಿಮೂಗು’ ಎಂಬ ಸಮಾಸವು ಯಾವ ಬಗೆಯದು?
A) ತತ್ಪುರುಷ
B) ಕರ್ಮಧಾರಯ
C) ಅಂಶಿ
D) ದ್ವಿಗು
ಉತ್ತರ: C
ವಿವರಣೆ: ‘ತುದಿಮೂಗು’ ಎಂಬ ಪದದ ವಿಗ್ರಹವಾಕ್ಯ ‘ಮೂಗಿನ + ತುದಿ’. ಇಲ್ಲಿ ‘ಮೂಗು’ ಅಂಶಿ ಮತ್ತು ‘ತುದಿ’ ಅಂಶ. ಪೂರ್ವಪದವಾದ ‘ತುದಿ’ಯ ಅರ್ಥ ಪ್ರಧಾನ. ಆದ್ದರಿಂದ ಇದು ಅಂಶಿ ಸಮಾಸ.
28. ಯಾವ ಸಮಾಸದಲ್ಲಿ ಎಲ್ಲ ಪದಗಳ ಅರ್ಥ ಪ್ರಧಾನ?
A) ತತ್ಪುರುಷ
B) ದ್ವಂದ್ವ
C) ಬಹುವ್ರೀಹಿ
D) ಕ್ರಿಯಾ
ಉತ್ತರ: B
ವಿವರಣೆ: ದ್ವಂದ್ವ ಸಮಾಸದ ಮುಖ್ಯ ಲಕ್ಷಣ.
29. ಯಾವ ಸಮಾಸದಲ್ಲಿ ಬೇರೊಂದು ಪದದ ಅರ್ಥ ಪ್ರಧಾನ?
A) ತತ್ಪುರುಷ
B) ದ್ವಂದ್ವ
C) ಬಹುವ್ರೀಹಿ
D) ಕರ್ಮಧಾರಯ
ಉತ್ತರ: C
ವಿವರಣೆ:ಬಹುವ್ರೀಹಿ ಸಮಾಸದ ಮುಖ್ಯ ಲಕ್ಷಣ.
30. ಯಾವ ಸಮಾಸದಲ್ಲಿ ಪೂರ್ವಪದ ಸಂಖ್ಯಾವಾಚಕ?
A) ದ್ವಿಗು
B) ಅಂಶಿ
C) ಕ್ರಿಯಾ
D) ಗಮಕ
ಉತ್ತರ: A
ವಿವರಣೆ: ದ್ವಿಗು ಸಮಾಸದ ಮುಖ್ಯ ಲಕ್ಷಣ.
31. ಯಾವ ಸಮಾಸದಲ್ಲಿ ಅಂಶ ಮತ್ತು ಅಂಶಿ ಭಾವ ಇರುತ್ತದೆ?
A) ದ್ವಿಗು
B) ಅಂಶಿ
C) ಕ್ರಿಯಾ
D) ಗಮಕ
ಉತ್ತರ: B
ವಿವರಣೆ: ಅಂಶಿ ಸಮಾಸದ ಮುಖ್ಯ ಲಕ್ಷಣ.
32. ಯಾವ ಸಮಾಸದಲ್ಲಿ ಪೂರ್ವಪದ ಸರ್ವನಾಮ ಅಥವಾ ಕೃದಂತ?
A) ದ್ವಿಗು
B) ಅಂಶಿ
C) ಕ್ರಿಯಾ
D) ಗಮಕ
ಉತ್ತರ: D
ವಿವರಣೆ: ಗಮಕ ಸಮಾಸದ ಮುಖ್ಯ ಲಕ್ಷಣ.
33. ‘ಅಂಗಾಲು’ ಎಂಬ ಪದದ ಸಮಾಸ ಯಾವುದು?
A) ತತ್ಪುರುಷ
B) ಕರ್ಮಧಾರಯ
C) ಅಂಶಿ
D) ದ್ವಿಗು
ಉತ್ತರ: C
ವಿವರಣೆ: ‘ಅಂಗಾಲು’ ಎಂಬ ಪದದ ವಿಗ್ರಹವಾಕ್ಯ ‘ಕಾಲ + ಅಡಿ’. ಇಲ್ಲಿ ‘ಕಾಲ ‘ ಅಂಶಿ ಮತ್ತು ‘ಅಡಿ’ ಅಂಶ. ಪೂರ್ವಪದದ ಅರ್ಥ ಪ್ರಧಾನ. ಆದ್ದರಿಂದ ಇದು ಅಂಶಿ ಸಮಾಸ.
34. ದ್ವಂದ್ವ ಸಮಾಸದ ಮುಖ್ಯ ಲಕ್ಷಣ ಯಾವುದು?
A) ಒಂದು ಪದದ ಅರ್ಥ ಪ್ರಧಾನ
B) ಎಲ್ಲ ಪದಗಳ ಅರ್ಥ ಪ್ರಧಾನ
C) ಪೂರ್ವಪದದ ಅರ್ಥ ಪ್ರಧಾನ
D) ಅನ್ಯಪದದ ಅರ್ಥ ಪ್ರಧಾನ
ಉತ್ತರ: B
ವಿವರಣೆ: ದ್ವಂದ್ವ ಸಮಾಸದಲ್ಲಿ ಎರಡು ಅಥವಾ ಹೆಚ್ಚು ಪದಗಳು ಸೇರಿ, ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುತ್ತದೆ ಮತ್ತು ಸಹಯೋಗ ತೋರಿಸುತ್ತದೆ. ಉದಾ: ಹೊಲಮನೆ, ಕೆರೆಕಟ್ಟೆ.
35. ‘ಗಿಡಮರಬಳ್ಳಿಪೊದೆ’ ಎಂಬ ಸಮಾಸವು ಯಾವ ಬಗೆಯದು?
A) ತತ್ಪುರುಷ
B) ಕರ್ಮಧಾರಯ
C) ದ್ವಂದ್ವ
D) ಬಹುವ್ರೀಹಿ
ಉತ್ತರ: C
ವಿವರಣೆ: ‘ಗಿಡಮರಬಳ್ಳಿಪೊದೆ’ ಎಂಬ ಪದದಲ್ಲಿ ಗಿಡ, ಮರ, ಬಳ್ಳಿ, ಪೊದೆ ಎಂಬ ನಾಲ್ಕು ಪದಗಳ ಅರ್ಥವೂ ಪ್ರಧಾನವಾಗಿದೆ ಮತ್ತು ಅವುಗಳ ನಡುವೆ ಸಹಯೋಗವಿದೆ. ಆದ್ದರಿಂದ ಇದು ದ್ವಂದ್ವ ಸಮಾಸ.
36. ‘ಪಂಚೇಂದ್ರಿಯ’ ____ಸಮಾಸ ಭೇದ.
A) ದ್ವಿಗು
B) ತತ್ಪುರುಷ
C) ಕರ್ಮಧಾರಯ
D) ದ್ವಂದ್ವ
ಉತ್ತರ: A
ವಿವರಣೆ: ‘ಪಂಚಗಳಾದ +ಇಂದ್ರಿಯಗಳು’ = ಪಂಚೇಂದ್ರಿಯ. ದ್ವಿಗು ಸಮಾಸ.
37. ‘ಹಣೆಗಣ್ಣ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಹಣೆಯ ಕಣ್ಣ
B) ಹಣೆಯಲ್ಲಿ ಕಣ್ಣುಳ್ಳವ
C) ಹಣೆ ಮತ್ತು ಕಣ್ಣ
D) ಹಣೆಗೆ ಕಣ್ಣ
ಉತ್ತರ: B
ವಿವರಣೆ: ಇದು ಬಹುವ್ರೀಹಿ ಸಮಾಸ. ಹಣೆಯಲ್ಲಿ + ಕಣ್ಣು ಉಳ್ಳವ = ಹಣೆಗಣ್ಣ (ಶಿವ). ಇಲ್ಲಿ ಪೂರ್ವ ಮತ್ತು ಉತ್ತರ ಪದಗಳು ಭಿನ್ನ ವಿಭಕ್ತಿಯಿಂದ ಕೂಡಿವೆ (ಹಣೆಯಲ್ಲಿ – ಸಪ್ತಮಿ, ಕಣ್ಣು – ಪ್ರಥಮಾ). ಆದ್ದರಿಂದ ಇದು ವ್ಯಧಿಕರಣ ಬಹುವ್ರೀಹಿ.
38. ಕ್ರಿಯಾ ಸಮಾಸದ ಮುಖ್ಯ ಲಕ್ಷಣ ಯಾವುದು?
A) ಪೂರ್ವಪದ ಸರ್ವನಾಮ
B) ಪೂರ್ವಪದ ಕ್ರಿಯಾಪದ
C) ಪೂರ್ವಪದ ದ್ವಿತೀಯಾಂತ ನಾಮಪದ
D) ಉತ್ತರಪದ ನಾಮಪದ
ಉತ್ತರ: C
ವಿವರಣೆ: ಕ್ರಿಯಾ ಸಮಾಸದಲ್ಲಿ ಪೂರ್ವಪದವು ಪ್ರಾಯಶಃ ದ್ವಿತೀಯಾ ವಿಭಕ್ತ್ಯಂತ ನಾಮಪದವಾಗಿದ್ದು, ಉತ್ತರಪದವು ಕ್ರಿಯಾಪದವಾಗಿರುತ್ತದೆ. ಉದಾ: ಮನೆಯನ್ನು + ಕಟ್ಟಿದನು = ಮನೆಕಟ್ಟಿದನು.
39. ‘ಕೈಮುಟ್ಟಿ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಕೈಯ + ಮುಟ್ಟಿ
B) ಕೈಯನ್ನು+ ಮುಟ್ಟಿ
C) ಕೈ + ಮುಟ್ಟಿ
D) ಕೈಗೆ + ಮುಟ್ಟಿ
ಉತ್ತರ: B
ವಿವರಣೆ: ಇದು ಕ್ರಿಯಾ ಸಮಾಸ. ಕೈಯನ್ನು + ಮುಟ್ಟಿ = ಕೈಮುಟ್ಟಿ. ಇಲ್ಲಿ ಪೂರ್ವಪದ ‘ಕೈಯನ್ನು’ ದ್ವಿತೀಯಾ ವಿಭಕ್ತ್ಯಂತ ಮತ್ತು ಉತ್ತರಪದ ‘ಮುಟ್ಟಿ’ ಕ್ರಿಯಾಪದ.
40 . ‘ನೀರ್ಗೂಡಿ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ನೀರನ್ನು+ ಕೂಡಿ
B) ನೀರಿನಿಂದ +ಕೂಡಿ
C) ನೀರಿಗೆ +ಕೂಡಿ
D) ನೀರಲ್ಲಿ + ಕೂಡಿ
ಉತ್ತರ: B
ವಿವರಣೆ: ಇದು ಕ್ರಿಯಾ ಸಮಾಸ. ನೀರಿನಿಂದ + ಕೂಡಿ = ನೀರ್ಗೂಡಿ. ಇಲ್ಲಿ ಪೂರ್ವಪದವು ತೃತೀಯಾ ವಿಭಕ್ತ್ಯಂತವಾಗಿದೆ (ನೀರಿನಿಂದ). ಕ್ರಿಯಾಸಮಾಸದಲ್ಲಿ ದ್ವಿತೀಯಾವಿಭಕ್ತಿ ಹೆಚ್ಚು ಸಾಮಾನ್ಯವಾದರೂ, ಇತರ ವಿಭಕ್ತಿಗಳೂ ಬರಬಹುದು.
41. ಕ್ರಿಯಾ ಸಮಾಸದಲ್ಲಿ ಸಾಮಾನ್ಯವಾಗಿ ಬರುವ ಆದೇಶ ಯಾವುದು?
A) ‘ಕ್’ ಗೆ ‘ಗ್’
B) ‘ಪ್’ ಗೆ ‘ವ್’
C) ‘ತ್’ ಗೆ ‘ದ್’
D) ಮೇಲೆ ಎಲ್ಲವೂ
ಉತ್ತರ: D
ವಿವರಣೆ: ಕ್ರಿಯಾ ಸಮಾಸದಲ್ಲಿ ಸಂಧಿ ನಿಯಮಗಳಂತೆ ಆದೇಶಗಳಾಗುತ್ತವೆ. ಉದಾ: ಮೈಯನ್ನು + ತಡವಿ = ಮೈದಡವಿ (‘ತ್’ ಗೆ ‘ದ್’ ಆದೇಶ), ಕೈಯನ್ನು + ಪಿಡಿದು = ಕೈವಿಡಿದು (‘ಪ್’ ಗೆ ‘ವ್’ ಆದೇಶ), ದಾರಿಯನ್ನು + ಕಾಣನು = ದಾರಿಗಾಣನು (‘ಕ್’ ಗೆ ‘ಗ್’ ಆದೇಶ).
42. ಗಮಕ ಸಮಾಸದ ಮುಖ್ಯ ಲಕ್ಷಣ ಯಾವುದು?
A) ಪೂರ್ವಪದ ಸರ್ವನಾಮ ಅಥವಾ ಕೃದಂತ
B) ಪೂರ್ವಪದ ಸಂಖ್ಯಾವಾಚಕ
C) ಪೂರ್ವಪದ ವಿಶೇಷಣ
D) ಉತ್ತರಪದ ಕ್ರಿಯಾಪದ
ಉತ್ತರ: A
ವಿವರಣೆ: ಗಮಕ ಸಮಾಸದಲ್ಲಿ ಪೂರ್ವಪದವು ಸರ್ವನಾಮ (ಉದಾ: ಅವನು, ಇದು) ಅಥವಾ ಕೃದಂತ (ಉದಾ: ಮಾಡಿದುದು, ತಿಂದುದು) ಆಗಿದ್ದು, ಉತ್ತರಪದವು ನಾಮಪದವಾಗಿರುತ್ತದೆ. ಅವನು+ಹುಡುಗ =ಆ ಹುಡುಗ, ಮಾಡಿದುದು+ಅಡಿಗೆ =ಮಾಡಿದಡಿಗೆ.
43. ‘ಸಿಡಿಮದ್ದು’ ಎಂಬ ಸಮಾಸ ಪದವು ಯಾವ ಬಗೆಯದು?
A) ತತ್ಪುರುಷ
B) ಕರ್ಮಧಾರಯ
C) ಗಮಕ
D) ಕ್ರಿಯಾ
ಉತ್ತರ: C
ವಿವರಣೆ: ‘ಸಿಡಿಮದ್ದು’ ಎಂಬ ಪದದ ವಿಗ್ರಹವಾಕ್ಯ ‘ಸಿಡಿಯುವುದು+ ಮದ್ದು’. ಇಲ್ಲಿ ಪೂರ್ವಪದ ‘ಸಿಡಿಯುವುದು’ ಎಂಬುದು ಕೃದಂತ (ಕ್ರಿಯೆಯಿಂದ ಉತ್ಪನ್ನವಾದ ಪದ) ಮತ್ತು ಉತ್ತರಪದ ‘ಮದ್ದು’ ನಾಮಪದ. ಆದ್ದರಿಂದ ಇದು ಗಮಕ ಸಮಾಸ.
44. ‘ಸೂರ್ಯಚಂದ್ರನಕ್ಷತ್ರ’ – ಸಮಾಸ
A) ತತ್ಪುರುಷ
B) ದ್ವಂದ್ವ
C) ಬಹುವ್ರೀಹi
D) ಕರ್ಮಧಾರಯ
ಉತ್ತರ: B
ವಿವರಣೆ: ‘ಸೂರ್ಯನೂ ಚಂದ್ರನೂ ನಕ್ಷತ್ರವೂ’ ಎಂಬ ವಿಗ್ರಹ. ಎಲ್ಲ ಪದಗಳ ಅರ್ಥ ಪ್ರಧಾನ.
45. ‘ತಿಂದಅನ್ನ’ ____ ಸಮಾಸ
A) ಗಮಕ
B) ಕ್ರಿಯಾ
C) ದ್ವಿಗು
D) ಬಹುವ್ರೀಹಿ
ಉತ್ತರ: A
ವಿವರಣೆ: ‘ತಿಂದುದು + ಅನ್ನ’ ಎಂಬ ವಿಗ್ರಹ. ಕೃದಂತ ಪೂರ್ವಪದ.
46. ‘ತೇರುಮರ’ ಪದದಲ್ಲಿ ಯಾವ ವಿಭಕ್ತಿ ಲೋಪವಾಗಿದೆ?
A) ದ್ವಿತೀಯಾ
B) ತೃತೀಯಾ
C) ಚತುರ್ಥೀ
D) ಪಂಚಮೀ
ಉತ್ತರ:C
ವಿವರಣೆ: ‘ತೇರಿಗೆ + ಮರ’ ಎಂಬ ಚತುರ್ಥೀ ವಿಭಕ್ತಿ ಲೋಪ. ಚತುರ್ಥೀ ತತ್ಪುರುಷ ಸಮಾಸ.
47. ‘ಕಣ್ಣುಕುರುಡ’ ಪದದಲ್ಲಿ ಯಾವ ವಿಭಕ್ತಿ ಲೋಪವಾಗಿದೆ?
A) ದ್ವಿತೀಯಾ
B) ತೃತೀಯಾ
C) ಚತುರ್ಥೀ
D) ಪಂಚಮೀ
ಉತ್ತರ: B
ವಿವರಣೆ: ‘ಕಣ್ಣಿನಿಂದ + ಕುರುಡ’ ಎಂಬ ತೃತೀಯಾ ವಿಭಕ್ತಿ ಲೋಪ. ತೃತೀಯಾ ತತ್ಪುರುಷ ಸಮಾಸ.
48. ‘ವ್ಯಾಘ್ರಭಯ’ ಪದದಲ್ಲಿ ಯಾವ ವಿಭಕ್ತಿ ಲೋಪವಾಗಿದೆ?
A) ತೃತೀಯಾ
B) ಚತುರ್ಥೀ
C) ಪಂಚಮೀ
D) ಷಷ್ಠೀ
ಉತ್ತರ: C
ವಿವರಣೆ: ‘ವ್ಯಾಘ್ರದೆಸೆಯಿಂದ + ಭಯ’ ಎಂಬ ಪಂಚಮೀ ವಿಭಕ್ತಿ ಲೋಪ. ಪಂಚಮೀ ತತ್ಪುರುಷ ಸಮಾಸ.
49. ‘ಮೆಲ್ವಾತು’ – ವಿಗ್ರಹ?
A) ಮೆಲ್ಲಿತು + ಮಾತು
B) ಮೇಲಿನ +ಮಾತು
C) ಮೆಲು + ಮಾತು
D) ಮೆಲ್ಲ + ಮಾತು
ಉತ್ತರ: A
ವಿವರಣೆ: ವಿಶೇಷಣ-ವಿಶೇಷ್ಯ ಭಾವ. ಕರ್ಮಧಾರಯ ಸಮಾಸ.
50. ‘ನಾಲ್ವಡಿ’ ______ ಸಮಾಸ,
A) ದ್ವಿಗು
B) ತತ್ಪುರುಷ
C) ಕರ್ಮಧಾರಯ
D) ದ್ವಂದ್ವ
ಉತ್ತರ: A
ವಿವರಣೆ: ‘ನಾಲ್ಕು + ಮಡಿ’ ಎಂಬ ಸಂಖ್ಯಾಪೂರ್ವಪದದ ಸಮಾಸ.
51. ‘ನಟ್ಟಡವಿ’ – ಸಮಾಸ ಭೇದ?
A) ತತ್ಪುರುಷ
B) ಕರ್ಮಧಾರಯ
C) ಅಂಶಿ
D) ದ್ವಿಗು
ಉತ್ತರ: C
ವಿವರಣೆ: ‘ಅಡವಿಯ + ನಡು’ ಎಂಬ ವಿಗ್ರಹ. ಅಂಶ ಮತ್ತು ಅಂಶಿ ಭಾವ.
52. ‘ಮುಂದಲೆ’ _____ ಸಮಾಸ.
A) ತತ್ಪುರುಷ
B) ಕರ್ಮಧಾರಯ
C) ಅಂಶಿ
D) ದ್ವಿಗು
ಉತ್ತರ: C
ವಿವರಣೆ: ‘ತಲೆಯ + ಮುಂದು’ ಎಂಬ ವಿಗ್ರಹ. ಅಂಶ ಮತ್ತು ಅಂಶಿ ಭಾವ.
53. ‘ತುದಿಮೂಗು’ _____ ಸಮಾಸ.
A) ತತ್ಪುರುಷ
B) ಕರ್ಮಧಾರಯ
C) ಅಂಶಿ
D) ದ್ವಿಗು
ಉತ್ತರ: C
ವಿವರಣೆ: ‘ಮೂಗಿನ + ತುದಿ’ ಎಂಬ ವಿಗ್ರಹ. ಅಂಶ ಮತ್ತು ಅಂಶಿ ಭಾವ.
54. . ‘ಪಕ್ಕಿಗೂಡು’ _____ ಸಮಾಸ.
A) ತತ್ಪುರುಷ
B) ಕರ್ಮಧಾರಯ
C) ದ್ವಂದ್ವ
D) ಬಹುವ್ರೀಹಿ
ಉತ್ತರ: A
ವಿವರಣೆ: ‘ಪಕ್ಕಿಯ +ಗೂಡು’ ಎಂಬ ವಿಗ್ರಹ. ಉತ್ತರಪದಾರ್ಥ ಪ್ರಧಾನ. ಷಷ್ಠೀ ತತ್ಪುರುಷ.
55. ‘ಎಣ್ದೆಸೆ’ – ಸಮಾಸ ಭೇದ?
A) ದ್ವಿಗು
B) ತತ್ಪುರುಷ
C) ಕರ್ಮಧಾರಯ
D) ದ್ವಂದ್ವ
ಉತ್ತರ: A
ವಿವರಣೆ: ‘ಎಂಟು+ ದೆಸೆ’ ಎಂಬ ಸಂಖ್ಯಾಪೂರ್ವಪದದ ಸಮಾಸ.
56. ಸಮಾಸದಿಂದ ರೂಪುಗೊಂಡ ಪದವನ್ನು ಯಾವ ಪದದಿಂದ ಕರೆಯುತ್ತಾರೆ?
A) ವಿಗ್ರಹವಾಕ್ಯ
B) ಸಮಸ್ತಪದ
C) ಪ್ರಕೃತಿ
D) ಪ್ರತ್ಯಯ
ಉತ್ತರ: B
ವಿವರಣೆ: ಸಮಾಸದಿಂದ ರೂಪುಗೊಂಡ ಪದವನ್ನು ಸಮಸ್ತಪದ ಎಂದು ಕರೆಯುತ್ತಾರೆ.
57. ‘ಹೆಜ್ಜೇನು’ ಪದದ ವಿಗ್ರಹ ಯಾವುದು?
A) ಹಿರಿದು + ಜೇನು
B) ಹೆಚ್ಚು + ಜೇನು
C) ಹೆಸರುವಾಸಿ + ಜೇನು
D) ಹೆಣ್ಣು + ಜೇನು
ಉತ್ತರ: B
ವಿವರಣೆ: ‘ಹೆಜ್ಜೇನು’ ಎಂಬ ಪದದಲ್ಲಿ “ಹೆಚ್ಚು” ಎಂಬ ಪದವು “ಹೆಜ್ಜ್” ರೂಪಕ್ಕೆ ಬದಲಾಗಿದ್ದು, ಜೇನು ಎಂಬ ಪದದೊಂದಿಗೆ ಸೇರಿ “ಹೆಜ್ಜೇನು” ಎಂಬ ಸಂಧಿಪದ ರೂಪುಗೊಂಡಿದೆ.
58. ‘ಹಳೆಗನ್ನಡ’ ಪದದ ವಿಗ್ರಹ ಯಾವುದು?
A) ಹಳೆಯದು + ಕನ್ನಡ
B) ಹಳೆಯ +ಕನ್ನಡ
C) ಹಳಿದ +ಕನ್ನಡ
D) ಹಳೆ + ಕನ್ನಡ
ಉತ್ತರ: A
ವಿವರಣೆ: ಹಳೆಯದು + ಕನ್ನಡ = ಹಳೆಗನ್ನಡ.”ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯ ಸಮಾಸವೆನ್ನುವರು.”
59. ‘ದಳಪತಿ’ ಎಂಬ ಸಮಾಸ ಪದವು ಯಾವ ಬಗೆಯದು?
A) ತತ್ಪುರುಷ
B) ಅರಿಸಮಾಸ
C) ಕರ್ಮಧಾರಯ
D) ಬಹುವ್ರೀಹಿ
ಉತ್ತರ: B
ವಿವರಣೆ:‘ದಳಪತಿ’ ಎಂಬ ಪದದ ವಿಗ್ರಹವಾಕ್ಯ ‘ದಳದ + ಪತಿ’. ಇಲ್ಲಿ ‘ದಳ’ ಎಂಬುದು ಕನ್ನಡ ಪದ ಮತ್ತು ‘ಪತಿ’ ಎಂಬುದು ಸಂಸ್ಕೃತ ಪದ. ಆದ್ದರಿಂದ ಇದು ಅರಿಸಮಾಸ.
60. ‘ಕೆರೆಕಟ್ಟೆಬಾವಿ’ ಎಂಬ ಸಮಾಸ ಪದವು ಯಾವ ಬಗೆಯದು?
A) ತತ್ಪುರುಷ
B) ಕರ್ಮಧಾರಯ
C) ದ್ವಂದ್ವ
D) ಬಹುವ್ರೀಹಿ
ಉತ್ತರ: C
ವಿವರಣೆ:ಕೆರೆಯೂ + ಕಟ್ಟೆಯೂ + ಬಾವಿಯೂ-ಕೆರೆಕಟ್ಟೆಬಾವಿ.’ಕೆರೆಕಟ್ಟೆಬಾವಿ’ ಎಂಬ ಪದದಲ್ಲಿ ಕೆರೆ, ಕಟ್ಟೆ, ಬಾವಿ ಎಂಬ ಮೂರು ಪದಗಳ ಅರ್ಥವೂ ಪ್ರಧಾನವಾಗಿದೆ ಮತ್ತು ಸಹಯೋಗವನ್ನು ತೋರಿಸುತ್ತದೆ. ಆದ್ದರಿಂದ ಇದು ದ್ವಂದ್ವ ಸಮಾಸ.
61.’ಚಕ್ರಪಾಣಿ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಚಕ್ರವನ್ನು + ಪಾಣಿಯಲ್ಲಿ ಉಳ್ಳವನು
B) ಚಕ್ರದ +ಪಾಣಿ
C) ಚಕ್ರ + ಪಾಣಿ
D) ಚಕ್ರವಾದ + ಪಾಣಿ
ಉತ್ತರ: A
ವಿವರಣೆ:ಇದು ಬಹುವ್ರೀಹಿ ಸಮಾಸ. ಚಕ್ರವನ್ನು + ಪಾಣಿಯಲ್ಲಿ ಉಳ್ಳವನು = ಚಕ್ರಪಾಣಿ (ವಿಷ್ಣು).
62. ‘ಡೊಂಕುಗಾಲ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಡೊಂಕಾದ + ಕಾಲು ಉಳ್ಳವ
B) ಡೊಂಕು+ ಕಾಲು ಉಳ್ಳವ
C) ಡೊಂಕು +ಕಾಲು
D) ಡೊಂಕರ + ಕಾಲು
ಉತ್ತರ: A
ವಿವರಣೆ: ಇದು ಬಹುವ್ರೀಹಿ ಸಮಾಸ. ಡೊಂಕು (ಆದ) ಕಾಲು ಉಳ್ಳವ = ಡೊಂಕುಗಾಲ.
63. ಸಮಾಸದ ವಿಧಗಳನ್ನು ಕ್ರಮವಾಗಿ ಹೆಸರಿಸಿ.
A) ತತ್ಪುರುಷ, ಕರ್ಮಧಾರಯ, ದ್ವಿಗು, ಅಂಶಿ, ದ್ವಂದ್ವ, ಬಹುವ್ರೀಹಿ, ಕ್ರಿಯಾ, ಗಮಕ
B) ತತ್ಪುರುಷ, ದ್ವಂದ್ವ, ಬಹುವ್ರೀಹಿ, ಕರ್ಮಧಾರಯ, ದ್ವಿಗು, ಅಂಶಿ, ಕ್ರಿಯಾ, ಗಮಕ
C) ಕರ್ಮಧಾರಯ, ತತ್ಪುರುಷ, ದ್ವಿಗು, ಅಂಶಿ, ದ್ವಂದ್ವ, ಬಹುವ್ರೀಹಿ, ಕ್ರಿಯಾ, ಗಮಕ
D) ದ್ವಂದ್ವ, ತತ್ಪುರುಷ, ಕರ್ಮಧಾರಯ, ದ್ವಿಗು, ಅಂಶಿ, ಬಹುವ್ರೀಹಿ, ಕ್ರಿಯಾ, ಗಮಕ
ಉತ್ತರ: A
ವಿವರಣೆ: ತತ್ಪುರುಷ, ಕರ್ಮಧಾರಯ, ದ್ವಿಗು, ಅಂಶಿ, ದ್ವಂದ್ವ, ಬಹುವ್ರೀಹಿ, ಕ್ರಿಯಾ, ಗಮಕ.
64. ‘ಬಹುವ್ರೀಹಿ ಸಮಾಸ’ ದಲ್ಲಿ ಯಾವ ಪದದ ಅರ್ಥ ಪ್ರಧಾನ?
A) ಪೂರ್ವಪದ
B) ಉತ್ತರಪದ
C) ಎಲ್ಲಾ ಪದಗಳು
D) ಅನ್ಯಪದ
ಉತ್ತರ: D
ವಿವರಣೆ: ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗುಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುತ್ತಾರೆ.
65. ‘ಕರ್ಮಧಾರಯ ಸಮಾಸ’ ದಲ್ಲಿ ಪೂರ್ವೋತ್ತರ ಪದಗಳು ಹೇಗಿರುತ್ತವೆ?
A) ಲಿಂಗ, ವಚನ, ವಿಭಕ್ತಿಗಳಿಂದ ಸಮಾನ
B) ವಿಭಿನ್ನ ಲಿಂಗ
C) ವಿಭಿನ್ನ ವಚನ
D) ವಿಭಿನ್ನ ವಿಭಕ್ತಿ
ಉತ್ತರ:A
ವಿವರಣೆ: ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯ ಸಮಾಸವೆನ್ನುವರು.
66. ‘ಕಣ್ಣುಮುಚ್ಚಿ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಕಣ್ಣನ್ನು+ ಮುಚ್ಚಿ
B) ಕಣ್ಣು + ಮುಚ್ಚಿ
C) ಕಣ್ಣ + ಮುಚ್ಚಿ
D) ಕಣ್ಣಿಗೆ + ಮುಚ್ಚಿ
ಉತ್ತರ:A
ವಿವರಣೆ: ಇದು ಕ್ರಿಯಾ ಸಮಾಸ. ಕಣ್ಣನ್ನು + ಮುಚ್ಚಿ = ಕಣ್ಣುಮುಚ್ಚಿ.
67. ‘ಈ ನಾಯಿ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಇದು + ನಾಯಿ
B) ಇದರ + ನಾಯಿ
C) ಈ + ನಾಯಿ
D) ಇದಿಗೆ ನಾಯಿ
ಉತ್ತರ:A
ವಿವರಣೆ: ಇದು ಗಮಕ ಸಮಾಸ. ಪೂರ್ವಪದವು ಸರ್ವನಾಮ. ಇದು + ನಾಯಿ = ಈ ನಾಯಿ.
68. ‘ಪರಬೊಮ್ಮ’ ಎಂಬ ಸಮಾಸ ಪದವು ಯಾವ ಬಗೆಯದು?
A) ತತ್ಪುರುಷ
B) ಅರಿಸಮಾಸ
C) ಕರ್ಮಧಾರಯ
D) ಬಹುವ್ರೀಹಿ
ಉತ್ತರ:B
ವಿವರಣೆ: ‘ಪರಬೊಮ್ಮ’ ಎಂಬ ಪದದ ವಿಗ್ರಹವಾಕ್ಯ ‘ಪರಮ + ಬೊಮ್ಮ’. ಇಲ್ಲಿ ‘ಪರಮ’ ಎಂಬುದು ಸಂಸ್ಕೃತ ಪದ ಮತ್ತು ‘ಬೊಮ್ಮ’ ಎಂಬುದು ಕನ್ನಡ ಪದ. ಆದ್ದರಿಂದ ಇದು ಅರಿಸಮಾಸ.
69. ‘ಹೆದ್ದೊರೆ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಹಿರಿದಾದ + ತೊರೆ
B) ಹಿರಿದು ತೊರೆ
C) ಹಿರಿದರ ತೊರೆ
D) ಹಿರಿದಿಗೆ ತೊರೆ
ಉತ್ತರ: A
ವಿವರಣೆ: ಇದು ವಿಶೇಷಣಪೂರ್ವಪದ ಕರ್ಮಧಾರಯ ಸಮಾಸ. ಹಿರಿದು + ತೊರೆ = ಹೆದ್ದೊರೆ.
70. ‘ಕಾಲುಬಳೆ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಕಾಲಿನ ಬಳೆ
B) ಕಾಲು ಬಳೆ
C) ಕಾಲು ಮತ್ತು ಬಳೆ
D) ಕಾಲಿಗೆ ಬಳೆ
ಉತ್ತರ: A
ವಿವರಣೆ: ಇದು ಷಷ್ಠೀ ತತ್ಪುರುಷ ಸಮಾಸ. ಕಾಲಿನ + ಬಳೆ = ಕಾಲುಬಳೆ.
71. ‘ದೊಡ್ಡಹುಡುಗ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ದೊಡ್ಡವನು + ಹುಡುಗ
B) ದೊಡ್ಡ + ಹುಡುಗ
C) ದೊಡ್ಡವನಾದ + ಹುಡುಗ
D) ದೊಡ್ಡದರ + ಹುಡುಗ
ಉತ್ತರ: C
ವಿವರಣೆ: ಇದು ವಿಶೇಷಣಪೂರ್ವಪದ ಕರ್ಮಧಾರಯ ಸಮಾಸ. ದೊಡ್ಡವನು + ಹುಡುಗನು = ದೊಡ್ಡಹುಡುಗನು.
72. ‘ಗುಡುಗುಸಿಡಿಲುಮಿಂಚು’ ಎಂಬ ಸಮಾಸ ಪದವು ಯಾವ ಬಗೆಯದು?
A) ತತ್ಪುರುಷ
B) ಕರ್ಮಧಾರಯ
C) ದ್ವಂದ್ವ
D) ಬಹುವ್ರೀಹಿ
ಉತ್ತರ: C
ವಿವರಣೆ: ‘ಗುಡುಗುಸಿಡಿಲುಮಿಂಚು’ ಎಂಬ ಪದದಲ್ಲಿ ಗುಡುಗು, ಸಿಡಿಲು, ಮಿಂಚು ಎಂಬ ಮೂರು ಪದಗಳ ಅರ್ಥವೂ ಪ್ರಧಾನವಾಗಿದೆ. ಆದ್ದರಿಂದ ಇದು ದ್ವಂದ್ವ ಸಮಾಸ.
73. ‘ವ್ಯತಿಹಾರ ಲಕ್ಷಣ’ ಬಹುವ್ರೀಹಿ ಸಮಾಸದ ಉದಾಹರಣೆ ಯಾವುದು?
A) ಹಣೆಗಣ್ಣ
B) ಹಣಾಹಣಿ
C) ನಾಲ್ಮೊಗ
D) ಚಕ್ರಪಾಣಿ
ಉತ್ತರ: B
ವಿವರಣೆ: ‘ಹಣಾಹಣಿ’, ‘ಕೋಲಾಕೋಲಿ’ ಇತ್ಯಾದಿ ಸಮಾಸಗಳು ವ್ಯತಿಹಾರ ಲಕ್ಷಣ ಬಹುವ್ರೀಹಿ ಸಮಾಸದ ಉದಾಹರಣೆಗಳು. ಇಲ್ಲಿ ಒಂದೇ ಪದವನ್ನು ಪುನರಾವರ್ತಿಸಿ, ಅವುಗಳ ನಡುವೆ ನಡೆಯುವ ಕ್ರಿಯೆಯನ್ನು ಸೂಚಿಸಲಾಗುತ್ತದೆ.
74. ‘ಮೀಂಗುಲಿ’ ಎಂಬ ಸಮಾಸ ಪದದ ವಿಗ್ರಹವಾಕ್ಯ ಯಾವುದು?
A) ಮೀನನ್ನು+ ಕೊಲ್ಲುವವ
B) ಮೀನು + ಗುಲಿ
C) ಮೀನ + ಗುಲಿ
D) ಮೀನಿಗೆ + ಗುಲಿ
ಉತ್ತರ: A
ವಿವರಣೆ: ಇದು ಬಹುವ್ರೀಹಿ ಸಮಾಸ. ಮೀನನ್ನು + ಕೊಲ್ಲುವವ = ಮೀಂಗುಲಿ.
75. ‘ಉತ್ತಮೋತ್ತಮ’ ಎಂಬ ಪದದ ಸಮಾಸ ಯಾವುದು?
A) ತತ್ಪುರುಷ
B) ಕರ್ಮಧಾರಯ
C) ಅಂಶಿ
D) ದ್ವಿಗು
ಉತ್ತರ: A
ವಿವರಣೆ: ಉತ್ತಮರಲ್ಲಿ + ಉತ್ತಮ = (ಸಪ್ತಮೀತತ್ಪುರುಷ).ತತ್ಪುರುಷ ಸಮಾಸದಲ್ಲಿ ಎರಡು ನಾಮಪದಗಳು ಸೇರಿ, ಉತ್ತರಪದದ ಅರ್ಥವೇ ಪ್ರಧಾನವಾಗಿ ಉಳಿಯುತ್ತದೆ.
76. ‘ಹಿರಿಯಮಕ್ಕಳು’ ಎಂಬ ಪದದ ಸಮಾಸ ಯಾವುದು?
A) ತತ್ಪುರುಷ
B) ಕರ್ಮಧಾರಯ
C) ಅಂಶಿ
D) ದ್ವಿಗು
ಉತ್ತರ: B
ವಿವರಣೆ: ಹಿರಿಯರು + ಮಕ್ಕಳು = ಹಿರಿಯಮಕ್ಕಳು. ಕರ್ಮಧಾರಯ ಸಮಾಸದಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಲಿಂಗ, ವಚನ, ವಿಭಕ್ತಿಗಳಲ್ಲಿ ಸಮಾನವಾಗಿದ್ದು, ಪೂರ್ವಪದವು ಉತ್ತರಪದದ ವಿಶೇಷಣವಾಗಿರುತ್ತದೆ.
77. ‘ಹಳೆಯಬಟ್ಟೆ’ ಎಂಬ ಪದದ ಸಮಾಸ ಯಾವುದು?
A) ತತ್ಪುರುಷ
B) ಕರ್ಮಧಾರಯ
C) ಅಂಶಿ
D) ದ್ವಿಗು
ಉತ್ತರ: B
ವಿವರಣೆ: ಹಳೆಯದು+ ಬಟ್ಟೆ = ಹಳೆಯಬಟ್ಟೆ. ಕರ್ಮಧಾರಯ ಸಮಾಸದಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಲಿಂಗ, ವಚನ, ವಿಭಕ್ತಿಗಳಲ್ಲಿ ಸಮಾನವಾಗಿದ್ದು, ಪೂರ್ವಪದವು ಉತ್ತರಪದದ ವಿಶೇಷಣವಾಗಿರುತ್ತದೆ.
78. ‘ಕಲ್ಕುಟಿಗ’ ಎಂಬ ಪದದ ಸಮಾಸ ಯಾವುದು?
A) ತತ್ಪುರುಷ
B) ಕರ್ಮಧಾರಯ
C) ಬಹುವ್ರೀಹಿಸಮಾಸ
D) ದ್ವಿಗು
ಉತ್ತರ: C
ವಿವರಣೆ: ಕಲ್ಲನ್ನು+ಕುಟ್ಟುವವನು=ಕಲ್ಕುಟಿಗ.ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ (ಅನ್ಯಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುವರು.
79. ‘ತಂಗಾಳಿ’ ಎಂಬ ಪದದ ಸಮಾಸ ಯಾವುದು?
A) ತತ್ಪುರುಷ
B) ಕರ್ಮಧಾರಯ
C) ಬಹುವ್ರೀಹಿಸಮಾಸ
D) ಕರ್ಮಧಾರಯಸಮಾಸ
ಉತ್ತರ: D
ವಿವರಣೆ: ತಣ್ಣನೆ+ಗಾಳಿ=ತಂಗಾಳಿ . ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು.
80. ‘ಅನೆಮರಿ’ ಎಂಬ ಪದದ ಸಮಾಸ ಯಾವುದು?
A) ತತ್ಪುರುಷ
B) ಕರ್ಮಧಾರಯ
C) ಬಹುವ್ರೀಹಿಸಮಾಸ
D) ಕರ್ಮಧಾರಯಸಮಾಸ
ಉತ್ತರ: A
ವಿವರಣೆ: ತಣ್ಣನೆ+ಗಾಳಿ=ತಂಗಾಳಿ.ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸವೆನ್ನುವರು.
81. ‘ಇನಿವಾತು’ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ಬಹುವ್ರೀಹಿಸಮಾಸ
D) ಕರ್ಮಧಾರಯಸಮಾಸ
ಉತ್ತರ: D
ವಿವರಣೆ: ಇನಿದು+ಮಾತು=ಇನಿವಾತು. ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು.
82. ‘ ಮುಪ್ಪರಿ’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ಬಹುವ್ರೀಹಿಸಮಾಸ
D) ಕರ್ಮಧಾರಯಸಮಾಸ
ಉತ್ತರ: A
ವಿವರಣೆ:ಮೂರು+ಪುರಿ=ಮುಪ್ಪರಿ. ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು.
83. ‘ತಣ್ಣೀರ್’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ಬಹುವ್ರೀಹಿಸಮಾಸ
D) ಕರ್ಮಧಾರಯಸಮಾಸ
ಉತ್ತರ: D
ವಿವರಣೆ:ತಣ್ಣನೆ +ನೀರ್=ತಣ್ಣೀರ್ಪೂ.ರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು.
84. ‘ಕೆಂಗಣ್ಣು’ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ಬಹುವ್ರೀಹಿಸಮಾಸ
D) ಕರ್ಮಧಾರಯಸಮಾಸ
ಉತ್ತರ: D
ವಿವರಣೆ: ಕೆಚ್ಚನೆ+ಕಣ್ಣು=ಕೆಂಗಣ್ಣು. ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು.
85. ‘ಗಿರಿವನದುರ್ಗ‘ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ದ್ವಂದ್ವಸಮಾಸ
D) ಕರ್ಮಧಾರಯಸಮಾಸ
ಉತ್ತರ: C
ವಿವರಣೆ: ಗಿರಿಯೂ+ವನವೂ+ದುರ್ಗವೂ=ಗಿರಿವನದುರ್ಗ. ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವಸಮಾಸವೆಂದು ಹೆಸರು.
86. ‘ಕೊನೆಹುಬ್ಬು‘ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ಅಂಶಿಸಮಾಸ
D) ಕರ್ಮಧಾರಯಸಮಾಸ
ಉತ್ತರ: C
ವಿವರಣೆ: ಹುಬ್ಬಿನ+ಕೊನೆ=ಕೊನೆಹುಬ್ಬು. ಪೂರ್ವೋತ್ತರಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಆರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆನ್ನುವರು.
87. ‘ಸಪ್ತಸಾಗರಗಳು’ ಎಂಬ ಪದದ ಸಮಾಸ ಯಾವುದು?
A) ದ್ವಿಗುಸಮಾಸ
B) ತತ್ಪುರುಷ
C) ದ್ವಂದ್ವಸಮಾಸ
D) ಕರ್ಮಧಾರಯಸಮಾಸ
ಉತ್ತರ: A
ವಿವರಣೆ:ಸಪ್ತಗಳಾದ+ಸಾಗರಗಳು=ಸಪ್ತಸಾಗರಗಳು. ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು.
88. ‘ಪುರುಷೋತ್ತಮ ‘ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ ಸಮಾಸ
C) ದ್ವಂದ್ವಸಮಾಸ
D) ಕರ್ಮಧಾರಯಸಮಾಸ
ಉತ್ತರ: B
ವಿವರಣೆ:ಪುರುಷರಲ್ಲಿ+ಉತ್ತಮ=ಪುರುಷೋತ್ತಮ. ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸವೆನ್ನುವರು.
89. ‘ರಾಮಲಕ್ಷ್ಮಣ ‘ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ದ್ವಂದ್ವಸಮಾಸ
D) ಕರ್ಮಧಾರಯಸಮಾಸ
ಉತ್ತರ: C
ವಿವರಣೆ: ರಾಮನು + ಲಕ್ಷ್ಮಣನೂ = ರಾಮಲಕ್ಷ್ಮಣ.ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವಸಮಾಸವೆಂದು ಹೆಸರು.
90. ‘ಕರಿಮುಖ’ ಎಂಬ ಪದದ ಸಮಾಸ ಯಾವುದು?
A) ಬಹುವ್ರೀಹಿ ಸಮಾಸ
B) ತತ್ಪುರುಷ
C) ದ್ವಂದ್ವಸಮಾಸ
D) ಕರ್ಮಧಾರಯಸಮಾಸ
ಉತ್ತರ: A
ವಿವರಣೆ:ಕರಿಯನ್ನು + ಮುಖವಾಗಿ ಉಳ್ಳವನು = ಕರಿಮುಖ. ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ (ಅನ್ಯಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುವರು.
91. ‘ಮಂಗಳಾರತಿ’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ದ್ವಂದ್ವಸಮಾಸ
D) ಅರಿ ಸಮಾಸ
ಉತ್ತರ: D
ವಿವರಣೆ:ಮಂಗಳದ + ಆರತಿ = ಮಂಗಳಾರತಿ. ಕನ್ನಡ ಪದದೊಡನೆ ಸಂಸ್ಕೃತ ಪದವನ್ನು ಸೇರಿಸಿ ಸಮಾಸ ಮಾಡಬಾರದು. ಹಾಗೆ ಮಾಡಿದರೆ ಅದನ್ನು ‘ಅರಿಸಮಾಸ’ ವೆನ್ನುವರು.
92. ‘ಆ ಪ್ರಾಣಿಗಳು ‘ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ಗಮಕ ಸಮಾಸ
D) ಕರ್ಮಧಾರಯಸಮಾಸ
ಉತ್ತರ: C
ವಿವರಣೆ:ಅವು + ಪ್ರಾಣಿಗಳು = ಆ ಪ್ರಾಣಿಗಳು. ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸವನ್ನು ಗಮಕಸಮಾಸವೆಂದು ಕರೆಯುವರು. ಈ ಸಮಾಸದಲ್ಲಿ ಅರಿಸಮಾಸ ದೋಷವನ್ನು ಎಣಿಸಕೂಡದು.
93. ‘ಕಣ್ಣುರಿ’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ಸಪ್ತಮಿ ತತ್ಪುರುಷ ಸಮಾಸ
C) ದ್ವಂದ್ವಸಮಾಸ
D) ಕರ್ಮಧಾರಯಸಮಾಸ
ಉತ್ತರ: B
ವಿವರಣೆ:ಕಣ್ಣಿನಲ್ಲಿ+ಉರಿ= ಕಣ್ಣುರಿ.ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸವೆನ್ನುವರು.
94. ‘ಕವಿವಂದಿತ’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ತತ್ಪುರುಷ ಸಮಾಸ
D) ಕರ್ಮಧಾರಯಸಮಾಸ
ಉತ್ತರ: C
ವಿವರಣೆ:ಕವಿಗಳಿಂದ + ವಂದಿತ = ಕವಿವಂದಿತ.ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸವೆನ್ನುವರು.
95. ‘ಗಜದಳ’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ಅರಿ ಸಮಾಸ
C) ದ್ವಂದ್ವಸಮಾಸ
D) ಕರ್ಮಧಾರಯಸಮಾಸ
ಉತ್ತರ: B
ವಿವರಣೆ:ಗಜದ + ದಳ = ಗಜದಳ. ಕನ್ನಡ ಪದದೊಡನೆ ಸಂಸ್ಕೃತ ಪದವನ್ನು ಸೇರಿಸಿ ಸಮಾಸ ಮಾಡಬಾರದು. ಹಾಗೆ ಮಾಡಿದರೆ ಅದನ್ನು ‘ಅರಿಸಮಾಸ’ ವೆನ್ನುವರು.
96. ‘ದೊಡ್ಡಕಲ್ಲು’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ಕರ್ಮಧಾರಯ ಸಮಾಸ
C) ದ್ವಂದ್ವಸಮಾಸ
D) ಕರ್ಮಧಾರಯಸಮಾಸ
ಉತ್ತರ: B
ವಿವರಣೆ:ದೊಡ್ಡದಾದ+ಕಲ್ಲು= ದೊಡ್ಡಕಲ್ಲು.ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು.
97. ‘ತೇರುಮರ’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ಚತುರ್ಥೀತತ್ಪುರುಷ
C) ದ್ವಂದ್ವಸಮಾಸ
D) ಕರ್ಮಧಾರಯಸಮಾಸ
ಉತ್ತರ: B
ವಿವರಣೆ: ತೇರಿಗೆ + ಮರ= ತೇರುಮರ.ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸವೆನ್ನುವರು.
98. ‘ಶ್ವೇತವರ್ಣ’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ದ್ವಂದ್ವಸಮಾಸ
D) ಕರ್ಮಧಾರಯ ಸಮಾಸ
ಉತ್ತರ: D
ವಿವರಣೆ: ಶ್ವೇತವಾದ + ವರ್ಣ = ಶ್ವೇತವರ್ಣ. ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು.
99. ‘ಮಣೆಯಿತ್ತು’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ದ್ವಂದ್ವಸಮಾಸ
D)ಕ್ರಿಯಾಸಮಾಸ
ಉತ್ತರ: D
ವಿವರಣೆ: ಮಣೆಯನ್ನು + ಇತ್ತು = ಮಣೆಯಿತ್ತು. ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಕ್ರಿಯಾಸಮಾಸವೆನ್ನುವರು.
100. ‘ಮೂಲೋಕ’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ದ್ವಂದ್ವಸಮಾಸ
D) ಕರ್ಮಧಾರಯಸಮಾಸ
ಉತ್ತರ: A
ವಿವರಣೆ:ಮೂಲೋಕ-ಮೂರು+ಲೋಕ. ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು.
101. ‘ಕುಡಿಹುಬ್ಬು’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ದ್ವಂದ್ವಸಮಾಸ
D) ಅಂಶಿಸಮಾಸ
ಉತ್ತರ: D
ವಿವರಣೆ: ಹುಬ್ಬಿನ + ಕುಡಿ = ಕುಡಿಹುಬ್ಬು. ಪೂರ್ವೋತ್ತರಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಆರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆನ್ನುವರು.
102. ‘ಕೆಳಗೋಟೆ’ ಎಂಬ ಪದದ ಸಮಾಸ ಯಾವುದು?
A) ದ್ವಿಗು
B) ತತ್ಪುರುಷ
C) ಅಂಶಿಸಮಾಸ
D) ಕರ್ಮಧಾರಯಸಮಾಸ
ಉತ್ತರ: C
ವಿವರಣೆ: ಕೋಟೆಯ + ಕೆಳಗು =ಕೆಳಗೋಟೆ.ಪೂರ್ವೋತ್ತರಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಆರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆನ್ನುವರು.
