Prev 1 2 3 4 5 Next
41.‘ತಂಗಾಳಿ’ ಪದದಲ್ಲಿ ಏರ್ಪಟ್ಟಿರುವ ಸಮಾಸ:
A. ಬಹುರ್ವಿಹಿ ಸಮಾಸ
B. ಕರ್ಮಧಾರೆಯ ಸಮಾಸ
C. ಅಂಶಿ ಸಮಾಸ
D. ತತ್ಪುರುಷ ಸಮಾಸ
ANSWER:B
SOLUTION: ಕರ್ಮಧಾರೆಯ ಸಮಾಸ ಎಂದರೆ ಪೂರ್ವೋತ್ತರ ಪದಗಳು ಲಿಂಗ ವಚನ ವಿಭಕ್ತಿಗಳಿಂದ ಸಮನಾಗಿದ್ದು ವಿಶೇಷಣ ಸಂಬಂಧದಿಂದ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನುವರು . ಇದರಲ್ಲಿ ಉತ್ತರಪದದ ಅರ್ಥವೇ ಪ್ರಧಾನವಾಗಿರುತ್ತದೆ .
42. ‘ಪರಧನ’ ಪದದಲ್ಲಿ ಉಂಟಾಗಿರುವ ಸಮಾಸ:
A. ಅಂಶಿ ಸಮಾಸ
B. ತತ್ಪುರುಷ ಸಮಾಸ
C. ಕ್ರಿಯಾ ಸಮಾಸ
D. ದ್ವಂದ್ವ ಸಮಾಸ
ANSWER:B
SOLUTION: ಎರಡು ನಾಮಪದಗಳು ಸೇರಿ ಸಮಾಸವಾದಾಗ, ಉತ್ತರ ಪದದ ಅರ್ಥವು ಪ್ರಧಾನವಾಗಿ ಇರುವ ಸಮಸ್ತಪದಕ್ಕೆ ತತ್ಪುರುಷ ಸಮಾಸ ವೆಂದು ಹೆಸರು. ಅರಮನೆ ಎಂಬ ಸಮಸ್ತಪದವನ್ನು ಬಿಡಿಸಿದಾಗ, ಅರಸನ ಮನೆ ಎಂದಾಗುವುದು.
43. ‘ವಯೋವೃದ್ಧ’ ಪದದಲ್ಲಿ ಉಂಟಾಗಿರುವ ಸಮಾಸ:
A. ದ್ವಿಗು ಸಮಾಸ
B. ಕರ್ಮಧಾರೆಯ ಸಮಾಸ
C. ಕ್ರಿಯಾ ಸಮಾಸ
D. ತತ್ಪುರುಷ ಸಮಾಸ
ANSWER:D
SOLUTION: ಎರಡು ನಾಮಪದಗಳು ಸೇರಿ ಸಮಾಸವಾದಾಗ, ಉತ್ತರ ಪದದ ಅರ್ಥವು ಪ್ರಧಾನವಾಗಿ ಇರುವ ಸಮಸ್ತಪದಕ್ಕೆ ತತ್ಪುರುಷ ಸಮಾಸ ವೆಂದು ಹೆಸರು. ಅರಮನೆ ಎಂಬ ಸಮಸ್ತಪದವನ್ನು ಬಿಡಿಸಿದಾಗ, ಅರಸನ ಮನೆ ಎಂದಾಗುವುದು.
44. ಈ ಕೆಳಗಿನವುಗಳಲ್ಲಿ ಕರ್ಮಧಾರೆಯ ಸಮಾಸಕ್ಕೆ ಸಂಬಂಧಿಸಿದ ಪದ:
A. ಹೊಸಗನ್ನಡ
B. ತಲೆನೋವು
C. ಸಪ್ತಸ್ವರಗಳು
D. ಕಡೆಗಣ್ಣು
ANSWER:A
SOLUTION: ಎಕರ್ಮಧಾರೆಯ ಸಮಾಸ ಎಂದರೆ ಪೂರ್ವೋತ್ತರ ಪದಗಳು ಲಿಂಗ ವಚನ ವಿಭಕ್ತಿಗಳಿಂದ ಸಮನಾಗಿದ್ದು ವಿಶೇಷಣ ಸಂಬಂಧದಿಂದ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನುವರು . ಇದರಲ್ಲಿ ಉತ್ತರಪದದ ಅರ್ಥವೇ ಪ್ರಧಾನವಾಗಿರುತ್ತದೆ .
45. ’ಸೆರೆಯಾಗು’ ಪದವು ಈ ಸಮಾಸಕ್ಕೆ ಸಂಬಂಧಿಸಿದೆ:
A. ಕ್ರಿಯಾ ಸಮಾಸ
B. ದ್ವಂದ್ವ ಸಮಾಸ
C. ತತ್ಪುರುಷ ಸಮಾಸ
D. ದ್ವಿಗು ಸಮಾಸ
ANSWER:A
SOLUTION: “ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಕ್ರಿಯಾಸಮಾಸವೆನ್ನುವರು.”
46.‘ಇಮ್ಮಾವು’ ಪದವು ಈ ಸಮಾಸಕ್ಕೆ ಸಂಬಂಧಿಸಿದೆ:
A. ದ್ವಿಗು ಸಮಾಸ
B. ಕರ್ಮಧಾರೆಯ ಸಮಾಸ
C. ದ್ವಂದ್ವ ಸಮಾಸ
D. ಗಮಕ ಸಮಾಸ
ANSWER: B
SOLUTION: ಕರ್ಮಧಾರೆಯ ಸಮಾಸ ಎಂದರೆ ಪೂರ್ವೋತ್ತರ ಪದಗಳು ಲಿಂಗ ವಚನ ವಿಭಕ್ತಿಗಳಿಂದ ಸಮನಾಗಿದ್ದು ವಿಶೇಷಣ ಸಂಬಂಧದಿಂದ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನುವರು . ಇದರಲ್ಲಿ ಉತ್ತರಪದದ ಅರ್ಥವೇ ಪ್ರಧಾನವಾಗಿರುತ್ತದೆ .
47. ‘ಹನುಮಭೀಮರಾಮರು’ ಪದವು ಈ ಸಮಾಸಕ್ಕೆ ಸಂಬಂಧಿಸಿದೆ:
A. ಕರ್ಮಧಾರೆಯ ಸಮಾಸ
B. ದ್ವಂದ್ವ ಸಮಾಸ
C. ಕ್ರಿಯಾ ಸಮಾಸ
D. ಬಹುವ್ರೀಹಿ ಸಮಾಸ
ANSWER: B
SOLUTION: ಎರಡು ಅಥವಾ ಅನೇಕ ನಾಮಪದಗಳೂ ಸಹಯೋಗ ತೋರುವಂತೆ ಸೇರಿ, ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸವೆಂದು ಹೆಸರು. ಆತನು ಹೊಲಮನೆ ಮಾಡಿಕೊಂಡ್ಡಿದ್ದಾನೆ. ಕೆರೆಕಟ್ಟೆಗಳನ್ನು ಕಟ್ಟಿಸಿದನು.
48. ‘ಒಳಗಣ್ಣು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ:
A. ದ್ವಂದ್ವ ಸಮಾಸ
B. ಕರ್ಮಧಾರೆಯ ಸಮಾಸ
C. ತತ್ಪುರುಷ ಸಮಾಸ
D. ಅಂಶಿ ಸಮಾಸ
ANSWER:D
SOLUTION:ಅಂಶಿಸಮಾಸದಲ್ಲಿ ಪೂರ್ವಪದ ವಸ್ತುವಿನ ಅಂಶವನ್ನೂ, ಉತ್ತರಪದ ಆ ವಸ್ತುವನ್ನು (ಅಂದರೆ ಅಂಶಿಯನ್ನು) ಸೂಚಿಸುತ್ತದೆ. ಆದ್ದರಿಂದಲೇ ಇದಕ್ಕೆ ಅಂಶಿ ಸಮಾಸವೆಂದು ಹೆಸರು.
49. ‘ಗಿರಿವನದುರ್ಗಗಳು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ:
A. ತತ್ಪುರುಷ ಸಮಾಸ
B. ಗಮಕ ಸಮಾಸ
C. ಕರ್ಮಧಾರೆಯ ಸಮಾಸ
D. ದ್ವಂದ್ವ ಸಮಾಸ
ANSWER: D
SOLUTION: ಎರಡು ಅಥವಾ ಅನೇಕ ನಾಮಪದಗಳೂ ಸಹಯೋಗ ತೋರುವಂತೆ ಸೇರಿ, ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸವೆಂದು ಹೆಸರು.