Prev 1 2 3 4 5 Next
1. ಎರಡು ಅಕ್ಷರಗಳು ಪರಸ್ಪರ ಕಾಲ ವಿಳಂಬವಿಲ್ಲದೆ ಅರ್ಥಕ್ಕೆ ಅನುಸಾರವಾಗಿ ಸೇರುವುದೇ ——.
A. ಸಂಧಿ
B. ಕೃದಂತ
C. ನಾಮಪದ
D. ಸಮಾಸ
ANSWER:A
SOLUTION: ಸಂಧಿ
2. ಹುಳುವನ್ನು ಎನ್ನುವಲ್ಲಿ ಆಗಿರುವ ಸಂಧಿ.
A. ಲೋಪಸಂಧಿ
B. ಪ್ರಕೃತಿ ಭಾವ
C. ಆಗಮ ಸಂಧಿ
D .ಆದೇಶ ಸಂಧಿ
ANSWER:C
SOLUTION: ಆಗಮ ಸಂಧಿ – ಸ್ವರದ ಮುಂದೆ ಸ್ವರವು ಬಂದು, ಅಲ್ಲಿ ಸಂಧಿ ಕಾರ್ಯವಾಗುವಾಗ ಒಂದು ಅಕ್ಷರ ಲೋಪವಾಗಿ, ಅಲ್ಲಿ ಆ ಅಕ್ಷರದ ಅರ್ಥ ಕೆಡೆದೆ ಆ ಎರಡು ಸ್ವರದ ಮಧ್ಯೆ ʼಯʼ ಅಥವಾ ʼವʼ ಕಾರವೂ ಹೊಸದಾಗಿ ಬಂದು ಸೇರಿದರೆ ಅದನ್ನು ಆಗಮ ಸಂಧಿ ಎನ್ನಲಾಗುತ್ತದೆ.
3. “ಜಗದಗಲ”ಬಿಡಿಸಿ ಬರೆಯಿರಿ.
A. ಜಗತ್ + ಅಗಲ
B. ಜಗದ + ಅಗಲ
C. ಜಗದ + ಗಲ
D. ಜಗ + ದಗಲ
ANSWER:B
SOLUTION: ಜಗದ + ಅಗಲ
4. ಇವುಗಳಲ್ಲಿ “ಆದೇಶ” ಸಂಧಿಗೆ ಉದಾಹರಣೆ.
A. ಮಗುವನ್ನು
B. ಮೈದೊಳೆ
C. ಹೂವಿಂದ
D. ಗೊತ್ತಿಲ್ಲ
ANSWER:B
SOLUTION: ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೂಂದು ವ್ಯಂಜನ ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ.
ಆದೇಶ ಸಂಧಿಯಲ್ಲಿ ಎರಡನೆಯ ಪದದಲ್ಲಿ ಇರುವ ಕ, ತ, ಪ ಎಂಬ ವ್ಯಂಜನಗಳಿಗೆ ಪ್ರತಿಯಾಗಿ, ಕ್ರಮವಾಗಿ ಗ, ದ, ಬ ಎಂಬ ವ್ಯಂಜನಗಳು ಆದೇಶವಾಗುವುವು.
5. “ಸುರಸುರ” ಎಂಬುವುದು.
A. ಆಗಮ ಸಂಧಿ
B. ಸವರ್ಣದೀರ್ಘ ಸಂಧಿ
C. ಆದೇಶ ಸಂಧಿ
D. ಗುಣ ಸಂಧಿ
ANSWER: B
SOLUTION: ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ – ಇವುಗಳಿಗೆ ‘ಸವರ್ಣ’ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು. ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
6. “ಲೋಪಸಂಧಿಗೆ” ಉದಾಹರಣೆ.
A. ಸೂರ್ಯೋದಯ
B. ಮಳೆಗಾಲ
C. ಹೂವಿನಿಂದ
D. ಬಲ್ಲೆನೆಂದು
ANSWER: D
SOLUTION:ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಸಂಧಿಪದದಲ್ಲಿ ಲೋಪವಾಗುವುದು. ಇದರಿಂದ ಮೂಲ ಅರ್ಥಕ್ಕೆ ಬಾಧೆ ಬಾರದಿದ್ದಲ್ಲಿ ‘ಲೋಪಸಂಧಿ’ಯಾಗುತ್ತದೆ.
7. ಸ್ವರದ ಮುಂದೆ ಸ್ವರ ಬಂದು ಸಂಧಿ ಆದರೆ ಅದು
A. ಸ್ವರ ಸಂಧಿ
B. ವ್ಯಂಜನ ಸಂಧಿ
C. ಪ್ರಕೃತಿ ಭಾವ
D. ಗುಣಸಂಧಿ
ANSWER: A
SOLUTION: ಸ್ವರ ಸಂಧಿ
8. ಸಂಧಿ ಆಗುವಾಗ ಸಂಬಂಧಿಸಿದ ಅಕ್ಷರಗಳಲ್ಲಿ ಉಂಟಾಗುವ ವ್ಯತ್ಯಾಸವನ್ನು ಹೀಗೆ ಎನ್ನುವರು.
A. ಅನುಕರಣಾವ್ಯಯ
B. ಪ್ರಕೃತಿಭಾವ
C. ಸಮಾಸ
D. ಸಂಧಿ ಕಾರ್ಯ
ANSWER:D
SOLUTION: ಸಂಧಿ ಕಾರ್ಯ
9. ಆಗಮ ಸಂಧಿಯಲ್ಲಿರುವ ಸ್ವರಗಳು.
A. 2
B. 4
C. 3
D. 6
ANSWER: A
SOLUTION: ಸ್ವರದ ಮುಂದೆ ಸ್ವರವು ಬಂದು, ಅಲ್ಲಿ ಸಂಧಿ ಕಾರ್ಯವಾಗುವಾಗ ಒಂದು ಅಕ್ಷರ ಲೋಪವಾಗಿ, ಅಲ್ಲಿ ಆ ಅಕ್ಷರದ ಅರ್ಥ ಕೆಡೆದೆ ಆ ಎರಡು ಸ್ವರದ ಮಧ್ಯೆ ʼಯʼ ಅಥವಾ ʼವʼ ಕಾರವೂ ಹೊಸದಾಗಿ ಬಂದು ಸೇರಿದರೆ ಅದನ್ನು ಆಗಮ ಸಂಧಿ ಎನ್ನವರು.