Prev 1 2 3 4 5 Next
11. ಙ,ಞ,ಣ,ನ,ಮ ಅಕ್ಷರಗಳು ಆದೇಶವಾಗಿ ಬಂದರೆ
A. ಗುಣ ಸಂಧಿ
B. ಜಸ್ತ್ವ ಸಂಧಿ
C. ಯಣ್ ಸಂದಿ
D. ಅನುನಾಸಿಕ ಸಂಧಿ
ANSWER:D
SOLUTION: ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ (ಅನುನಾಸಿಕ) ಬಂದಾಗ ಅನುನಾಸಿಕ ಸಂಧಿ ಎನ್ನುವರು.
12. “ಸವರ್ಣಾಕ್ಷರ” ಪದದಲ್ಲಿರುವ ಸಂಧಿ.
A. ಸವರ್ಣದೀರ್ಘ ಸಂಧಿ
B. ಗುಣಸಂಧಿ
C. ವೃದ್ಧಿ ಸಂಧಿ
D . ಯಣ್ ಸಂದಿ
ANSWER:A
SOLUTION: ಸವರ್ಣದೀರ್ಘ ಸಂಧಿ
13. ಲೋಪಸಂಧಿಗೆ ಉದಾಹರಣೆಯಾಗಿರುವ ಪದ.
A. ಮಾತಿಲ್ಲ
B. ಕಾಶಿಯಲ್ಲಿ
C. ದೇವಾಲಯ
D. ವೀರೇಶ
ANSWER:B
SOLUTION: ಮಾತು+ಇಲ್ಲ
14. “ಮೇಲೇಳು” ಪದದಲ್ಲಿರುವ ಸಂಧಿ.
A. ಲೋಪ ಸಂಧಿ
B. ಆಗಮ ಸಂಧಿ
C. ಆದೇಶ ಸಂಧಿ
D. ಗುಣ ಸಂಧಿ
ANSWER:A
SOLUTION: ಲೋಪ ಸಂಧಿ
15. “ಬೇರೊಬ್ಬ” ಪದವು ಈ ಸಂಧಿಗೆ ಉದಾಹರಣೆಯಾಗಿದೆ.
A. ಆಗಮ ಸಂಧಿ
B. ಲೋಪ ಸಂಧಿ
C. ಆದೇಶ ಸಂಧಿ
D. ಗುಣ ಸಂಧಿ
ANSWER: B
SOLUTION: ಲೋಪ ಸಂಧಿ
16. “ಮಹಾನುಭಾವ” ಪದವು ಈ ಸಂಧಿಗೆ ಉದಾಹರಣೆಯಾಗಿದೆ.
A. ಸವರ್ಣ ದೀರ್ಘ ಸಂಧಿ
B. ಯಣ್ ಸಂಧಿ
C. ಅನುನಾಸಿಕ ಸಂಧಿ
D. ವೃದ್ಧಿ ಸಂಧಿ
ANSWER: A
SOLUTION: ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ – ಇವುಗಳಿಗೆ ‘ಸವರ್ಣ’ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು. ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
17. “ಪಂಚಾಕ್ಷರಿ” ಪದವು ಈ ಸಂಧಿಗೆ ಉದಾಹರಣೆ.
A. ಸವರ್ಣದೀರ್ಘ ಸಂಧಿ
B. ಗುಣ ಸಂಧಿ
C. ವೃದ್ಧಿ ಸಂಧಿ
D. ಯಣ್ ಸಂಧಿ
ANSWER: A
SOLUTION: ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ – ಇವುಗಳಿಗೆ ‘ಸವರ್ಣ’ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು. ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
18. “ನಿಮ್ಮಡಿಗಳಲ್ಲಿ” ಪದವು ಈ ಸಂಧಿಗೆ ಉದಾಹರಣೆ.
A. ಆಗಮ ಸಂಧಿ
B. ಆದೇಶ ಸಂಧಿ
C. ಲೋಪ ಸಂಧಿ
D. ಸವರ್ಣ ದೀರ್ಘ ಸಂಧಿ
ANSWER:C
SOLUTION:ಲೋಪ ಸಂಧಿ ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಮೊದಲ ಪದದ ಕೊನೆಯ ಸ್ವರವು ಲೋಪವಾಗುವುದು.
19. “ಭೇದವಿಲ್ಲದ” ಪದವು ಈ ಸಂಧಿಗೆ ಉದಾಹರಣೆ.
A. ಆದೇಶ ಸಂಧಿ
B. ಗುಣ ಸಂಧಿ
C. ಲೋಪ ಸಂಧಿ
D. ಆಗಮ ಸಂಧಿ
ANSWER: D
SOLUTION: ಸ್ವರದ ಮುಂದೆ ಸ್ವರವು ಬಂದು, ಅಲ್ಲಿ ಸಂಧಿ ಕಾರ್ಯವಾಗುವಾಗ ಒಂದು ಅಕ್ಷರ ಲೋಪವಾಗಿ, ಅಲ್ಲಿ ಆ ಅಕ್ಷರದ ಅರ್ಥ ಕೆಡೆದೆ ಆ ಎರಡು ಸ್ವರದ ಮಧ್ಯೆ ʼಯʼ ಅಥವಾ ʼವʼ ಕಾರವೂ ಹೊಸದಾಗಿ ಬಂದು ಸೇರಿದರೆ ಅದನ್ನು ಆಗಮ ಸಂಧಿ ಎನ್ನವರು.