Prev 1 2 3 4 5 Next
21. “ದ್ರವ್ಯಾರ್ಥಿ” ಪದದಲ್ಲಿರುವ ಸಂಧಿ.
A. ಸವರ್ಣದೀರ್ಘ ಸಂಧಿ
B. ಜಸ್ತ್ವ ಸಂಧಿ
C. ಯಣ್ ಸಂದಿ
D. ಶ್ಚುತ್ವ ಸಂಧಿ
ANSWER:A
SOLUTION: ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ – ಇವುಗಳಿಗೆ ‘ಸವರ್ಣ’ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು. ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
22. ಪ್ರಾಣೇಂದ್ರೀಯ ಪದವು ಈ ಸಂಧಿಗೆ ಉದಾಹರಣೆ.
A. ಸವರ್ಣದೀರ್ಘ ಸಂಧಿ
B. ಗುಣಸಂಧಿ
C. ವೃದ್ಧಿ ಸಂಧಿ
D . ಯಣ್ ಸಂಧಿ
ANSWER:B
SOLUTION: ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ. ಅ ಆ ಕಾರಗಳ ಮುಂದೆ ಇ ಈ ಕಾರವು ಬಂದಾಗ ‘ಏ’ ಕಾರವು ಉ ಊ ಕಾರವು ಬಂದಾಗ ‘ಓ’ ಕಾರವೂ ಋ ಕಾರವು ಬಂದಾಗ ‘ಆರ್’ ಕಾರವೂ ಆದೇಶವಾಗಿ ಬಂದರೆ ಗುಣಸಂಧಿ ಎನಿಸುವುದು.
23. ಸ್ವರದ ಮುಂದೆ ಸ್ವರ ಬಂದರೂ ಸಂಧಿ ಆಗದೆ ಇರುವುದು.
A. ಧಾತು
B. ಕೃದಂತ
C. ಅವ್ಯಯ
D. ಪ್ರಕೃತಿ ಭಾವ
ANSWER:D
SOLUTION: ಸ್ವರದ ಮುಂದೆ ಸ್ವರ ಬಂದರೂ ಸಂಧಿ ಕಾರ್ಯ ನಡೆಯದಿರುವುದೇ ಪ್ರಕೃತಿ ಭಾವ . ಅಂದರೆ ಪದಗಳು ಅವುಗಳ ಮೂಲ ಸ್ಥಾನವನ್ನು ಉಳಿಸಿಕೊಳ್ಳುತ್ತವೆ .
24. “ವಾಗ್ದೇವಿ” ಸಂದೀಪ್ ದ ವನ್ನು ಬಿಡಿಸಿ ಬರೆಯಿರಿ.
A. ವಾಕಾ + ಗೇವಿ
B. ವಾಕ್ + ದೇವಿ
C. ವಾಗ್ + ದೇವಿ
D. ವಾಗ್ + ಗ್ಗೆವಿ
ANSWER:B
SOLUTION: ವಾಕ್ + ದೇವಿ
25. ದಿಗಂತ ಪದದಲ್ಲಿ ಆಗಿರುವ ಸಂಧಿ.
A. ಅನುನಾಸಿಕ ಸಂಧಿ
B. ವಿಸರ್ಗ ಸಂಧಿ
C. ಜಸ್ತ್ವ ಸಂಧಿ
D. ಶ್ಚುತ್ವ ಸಂಧಿ
ANSWER: C
SOLUTION: ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಶ್ತ್ವ ಸಂಧಿ ಆಗುತ್ತದೆ.
26. ಕಂಬನಿ” ಈ ಪದವು ಯಾವ ಸಂಧಿಗೆ ಉದಾಹರಣೆ.
A. ಆದೇಶ ಸಂಧಿ
B. ಆಗಮ ಸಂಧಿ
C. ಗುಣ ಸಂಧಿ
D. ವೃದ್ಧಿ ಸಂಧಿ
ANSWER: A
SOLUTION: ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೂಂದು ವ್ಯಂಜನ ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ.
27. “ಹಳೆಗನ್ನಡ” ಈ ಪದವು ಯಾವ ಸಂಧಿಗೆ ಉದಾಹರಣೆ.
A. ಆಗಮ ಸಂಧಿ
B. ಆದೇಶ ಸಂಧಿ
C. ವೃದ್ಧಿ ಸಂಧಿ
D. ಯಣ್ ಸಂಧಿ
ANSWER: B
SOLUTION: ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೂಂದು ವ್ಯಂಜನ ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ.
28. “ಪ್ರತಿಯನ್ನು” ಬಿಡಿಸಿ ಬರೆದಾಗ.
A. ಪ್ರತಿ + ಅನ್ನು
B. ಆದೇಶ ಸಂಧಿ
C. ಪ್ರತಿ + ಯನ್ನು
D. ಪ್ರತಿ + ನ್ನು
ANSWER:A
SOLUTION:ಪ್ರತಿ + ಅನ್ನು
29. “ಸರ್ವೇಶ” ಎಂಬುವುದು.
A. ಜಸ್ತ್ವ ಸಂಧಿ
B. ಗುಣ ಸಂಧಿ
C. ವೃದ್ಧಿ ಸಂಧಿ
D. ಲೋಪ ಸಂಧಿ