Prev 1 2 3 4 5 Next
1. ನಾಮಪದದ ಮೂಲ ರೂಪ ಇದು.
A. ಧಾತು
B. ಭಾವನಾಮ
C. ನಾಮಪ್ರಕೃತಿ
D. ಸರ್ವನಾಮ
ANSWER:C
SOLUTION: ನಾಮಪದದ ಮೂಲರೂಪವಾಗಿಯೂ, ಕ್ರಿಯೆಯ ಅರ್ಥವನ್ನು ಕೊಡದೆಯೂ ಇರುವ ಶಬ್ದವೇ ನಾಮಪ್ರಕೃತಿ.
2. “ವ್ಯಾಪಾರಿ” – ಪದವು ಈ ನಾಮ ಪದಕ್ಕೆ ಉದಾಹರಣೆಯಾಗಿದೆ.
A. ರೂಢನಾಮ
B. ಅಂಕಿತನಾಮ
C. ಭಾವನಾಮ
D. ಅನ್ವರ್ಥನಾಮ
ANSWER:D
SOLUTION: ಅರ್ಥಕ್ಕೆ ಅನುಸಾರವಾಗಿ ಅಥವಾ ವಸ್ತುವಿನ ಲಕ್ಷಣಕ್ಕನುಸಾರವಾಗಿ ಕರೆಯಲ್ಪಡುವ ಹೆಸರುಗಳಿಗೆ ಅನ್ವರ್ಥಕ ನಾಮ ಎಂದು ಕರೆಯುವರು. ಉದಾಹರಣೆಗೆ ವೈದ್ಯ, ಶಿಕ್ಷಕ, ಕುಂಟ, ಇತ್ಯಾದಿಗಳು
3. “ಮೂಡಣ” ಈ ನಾಮ ಪದಕ್ಕೆ ಉದಾಹರಣೆಯಾಗಿದೆ.
A. ದಿಗ್ವಾಚಕ
B. ಗುಣವಾಚಕ
C. ಪರಿಮಾಣವಾಚಕ
D. ಸಂಖ್ಯಾವಾಚಕ
ANSWER:A
SOLUTION: ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು. ಉದಾ:- ಮೂಡಣ, ಪಡುವಣ, ತೆಂಕಣ, ಬಡಗಣ, ಮೂಡಲು, ಪಡುವಲು, ತೆಂಕಲು, ಬಡಗಲು, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ, ಆಚೆ, ಈಚೆ ಇತ್ಯಾದಿ.
4. ವಸ್ತು ,ವ್ಯಕ್ತಿ, ಪ್ರಾಣಿ, ಪಕ್ಷಿ, ಇವುಗಳನ್ನು ಗುರುತಿಸಲು ಇಟ್ಟ ಹೆಸರು
A. ರೂಢನಾಮ
B. ಅಂಕಿತನಾಮ
C. ಅನ್ವರ್ಥನಾಮ
D. ಗುಣ ಸಂಧಿ
ANSWER:B
SOLUTION: ನಮಗೆ ಅಗತ್ಯವೆಂದು ಕಂಡುಬಂದ, ಇಷ್ಟವೆನಿಸಿದ ವಸ್ತುವಿಷಯಗಳೆಲ್ಲದಕ್ಕೂ ಒಂದೊಂದು ಹೆಸರಿಟ್ಟು ಗುರುತಿಸುತ್ತೇವೆ. ಮುಂದೆ, ಅದೇ ಹೆಸರಿನ ಮೂಲಕ ಆ ವ್ಯಕ್ತಿಯನ್ನೇ ಘಟಕವನ್ನೋ ಪರಿಚಯಿಸತೊಡಗುತ್ತೇವೆ. ರಾಮಣ್ಣ, ರೆಹಮಾನ್, ಕಪಿ, ನಾಯಿ, ಸೀಬೆ,ಮಾವು, ತೇಗ, ಹೊನ್ನೆ, ಗುಲಾಬಿ, ಹಿಮಾಲಯ, ಗಂಗಾನದಿ, ಹನುಮಂತನ ಗುಡ್ಡ-ಹೀಗೆ ಒಂದೊಂದನ್ನೇ ಪ್ರತ್ಯೇಕವಾಗಿ ಗುರುತಿಸಲು ಇಟ್ಟ ಹೆಸರು ಅಂಕಿತನಾಮವೆನಿಸುತ್ತದೆ.
5.“ಪೆರ್ಮ” ಪದವು ಈ ನಾಮಪದವಾಗಿದೆ.
A. ಅಂಕಿತನಾಮ
B. ಭಾವನಾಮ
C. ರೂಢನಾಮ
D. ಅನ್ವರ್ಥನಾಮ
ANSWER: B
SOLUTION: ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು.
6. “ಒಳ್ಳೆಯ” ಪದವು ಈ ನಾಮಪದವಾಗಿದೆ.
A. ಗುಣವಾಚಕ
B. ಪ್ರಕಾರವಾಚಕ
C. ಸಂಖ್ಯಾವಾಚಕ
D. ಪ್ರಮಾಣವಾಚಕ
ANSWER: A
SOLUTION:ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ಹೇಳುವ ವಿಶೇಷಣಗಳೇ ಗುಣವಾಚಕಗಳು.
7.“ದೇಶ” ಪದವು ಈ ನಾಮಪದವಾಗಿದೆ.
A. ಅಂಕಿತನಾಮ
B. ಅನ್ವರ್ಥನಾಮ
C. ರೂಢನಾಮ
D. ಸರ್ವನಾಮ
ANSWER: C
SOLUTION: ರೂಢಿಯಿಂದ ಬಂದ ಸಾಮಾನ್ಯವಾಚಕಗಳು(ಹೆಸರನ್ನು ಸೂಚಿಸುವ ಶಬ್ದಗಳು) ರೂಢನಾಮಗಳು.
8. “ಆತ್ಮಾರ್ಥಕ” ಸರ್ವನಾಮಕ್ಕೆ ಉದಾಹರಣೆ.
A. ನೀನು
B. ನೀವು
C. ತಾನು
D. ತಾವು
ANSWER:C
SOLUTION:ಮೂರು ಲಿಂಗಗಳಲ್ಲಿಯೂ ಏಕರೂಪವಾಗಿ ಬಳಸುವ ”ತಾನು”, “ತಾವು”. ಎಂಬುದರ ಎಲ್ಲಾ ರೂಪಗಳೂ ಆತ್ಮಾರ್ಥಕ ಸರ್ವನಾಮಗಳೇ ಆಗಿರುತ್ತವೆ.
9. ‘ಅವನು ವಿದ್ಯೆಯಲ್ಲಿ ಬಲು ಜಾಣ’- ಈ ವಾಕ್ಯದಲ್ಲಿರುವ ಸರ್ವನಾಮ ಪದ.
A. ಅವನು
B. ವಿದ್ಯೆ
C. ಬಲು
D. ಗುಣ ಸಂಧಿ
ANSWER: A
SOLUTION:ಸರ್ವನಾಮವು ನಾಮಪದ ಅಥವಾ ನಾಮಪದ ಪದಗುಚ್ಛವಾಗಿರುವ ಸರ್ವನಾಮದ ಪೂರ್ವಭಾವಿ ಸ್ಥಾನವನ್ನು ಬದಲಿಸುವ ಪದ ಅಥವಾ ಪದಗುಚ್ಛವಾಗಿದೆ. ಸರ್ವನಾಮಗಳು ನಾಮಪದಗಳ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವ ಮತ್ತು ವಾಕ್ಯಗಳಲ್ಲಿ ಬಳಸಲಾಗುವ ಚಿಕ್ಕ ಪದಗಳಾಗಿವೆ.