Prev 1 2 3 4 5 Next
31. “ವಾಂಗ್ಮಯ” ಈ ಸಂದಿಗೆ ಉದಾಹರಣೆ.
A. ಅನುನಾಸಿಕ ಸಂಧಿ
B. ಸ್ವರ ಸಂಧಿ
C. ಲೋಪ ಸಂಧಿ
D. ಗುಣ ಸಂಧಿ
ANSWER:A
SOLUTION: ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ (ಅನುನಾಸಿಕ) ಬಂದಾಗ ಅನುನಾಸಿಕ ಸಂಧಿ ಎನ್ನುವರು.
32. ಶ್ಚುತ್ವ ತ್ವ ಸಂಧಿಗೆ ಉದಾಹರಣೆ
A. ಅಜಂತ
B. ಸನ್ಮಾನ
C. ಚಿನ್ಮಯ
D. ಶರಶ್ಚಂದ್ರ
ANSWER:D
SOLUTION: ‘ಸ’ ಕಾರ ‘ತ’ ವರ್ಗಗಳಿಗೆ ‘ಶ’ ಕಾರ ‘ಚ’ ವರ್ಗಾಕ್ಷರಗಳು ಪರವಾದಾಗ ‘ಸ’ ಕಾರಕ್ಕೆ ‘ಶ’ ಕಾರವೂ ‘ತ’ ವರ್ಗಕ್ಕೆ ‘ಚ’ ವರ್ಗವು ಆದೇಶವಾಗಿ ಬರುತ್ತದೆ.
33. “ಹೂವಿನಿಂದ” ಈ ಪದವು ಯಾವ ಸಂಧಿಗೆ ಉದಾಹರಣೆ?
A. ವಕಾರಾಗಮ ಸಂಧಿ
B. ಯಕಾರಾಗಮ ಸಂಧಿ
C. ಆದೇಶ ಸಂಧಿ
D. ಸವರ್ಣದೀರ್ಘ ಸಂಧಿ
ANSWER:A
SOLUTION: ಉ, ಊ, ಋ, ಓ, ಔ ಎಂಬಿವುಗಳ ಮುಂದೆ ಸ್ವರ ಬಂದರೆ ನಡುವೆ ‘ವ’ಕಾರಾಗಮವಾಗುತ್ತದೆ. ಅಲ್ಲದೆ ಕೇಶಿರಾಜ ಇ, ಈ ವರ್ಣಗಳಗೂ ಕೂಡ ‘ವ’ಕಾರವೆಂಬುದನ್ನು ವೃತ್ತಿಯಲ್ಲಿ ಹೇಳಿದ್ದಾನೆ.
34. “ಬೆಟ್ಟದಾವರೆ” ಈ ಪದವು ಯಾವ ಸಂಧಿಗೆ ಉದಾಹರಣೆ?
A. ಆಗಮ ಸಂಧಿ
B. ಆದೇಶ ಸಂಧಿ
C. ಲೋಪ ಸಂಧಿ
D. ಗುಣ ಸಂಧಿ
ANSWER:B
SOLUTION: ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೂಂದು ವ್ಯಂಜನ ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ.
ಆದೇಶ ಸಂಧಿಯಲ್ಲಿ ಎರಡನೆಯ ಪದದಲ್ಲಿ ಇರುವ ಕ, ತ, ಪ ಎಂಬ ವ್ಯಂಜನಗಳಿಗೆ ಪ್ರತಿಯಾಗಿ, ಕ್ರಮವಾಗಿ ಗ, ದ, ಬ ಎಂಬ ವ್ಯಂಜನಗಳು ಆದೇಶವಾಗುವುವು.
35. “ಗಿರೀಶ” ಈ ಪದವು ಯಾವ ಸಂಧಿಗೆ ಉದಾಹರಣೆ?
A. ಸವರ್ಣದೀರ್ಘ ಸಂಧಿ
B. ಆದೇಶ ಸಂಧಿ
C. ಆಗಮ ಸಂಧಿ
D. ಗುಣ ಸಂಧಿ
ANSWER: A
SOLUTION: ಅ ಮತ್ತು ಆ, ಇ ಮತ್ತು ಈ, ಉ ಮತ್ತು ಊ – ಇವುಗಳಿಗೆ ‘ಸವರ್ಣ’ಗಳೆಂದು ಹೆಸರು. ಇವುಗಳಲ್ಲಿ ಆ,ಈ ಮತ್ತು ಊ ಸ್ವರಗಳು ದೀರ್ಘ ಸ್ವರಗಳು. ಸಂಸ್ಕೃತ ಪದಗಳು ಸಂಧಿಯಾಗುವ ಸಂದರ್ಭದಲ್ಲಿ, ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಸಂಧಿ ಹೊಂದಿ, ಈ ಸವರ್ಣದ ದೀರ್ಘ ಸ್ವರವಾಗಿ ಉಳಿಯುತ್ತದೆ.
36. “ವನೌಷಧಿ” ಈ ಪದವು ಯಾವ ಸಂಧಿಗೆ ಉದಾಹರಣೆ?
A. ಗುಣ ಸಂಧಿ
B. ವೃದ್ಧಿ ಸಂಧಿ
C. ಆಗಮ ಸಂಧಿ
D. ಆದೇಶ ಸಂಧಿ
ANSWER: B
SOLUTION:ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಐ’ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಔ’ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿ ಸಂಧಿಯೆನ್ನುವರು.
37. “ಕೋಟ್ಯಾಧೀಶ” ಈ ಪದವು ಯಾವ ಸಂಧಿಗೆ ಉದಾಹರಣೆ?
A. ಯಣ್ ಸಂಧಿ
B. ಗುಣ ಸಂಧಿ
C. ವೃದ್ಧಿ ಸಂಧಿ
D. ಆಗಮ ಸಂಧಿ
ANSWER: A
SOLUTION: ಸಂಧಿ ರಚನೆಯಲ್ಲಿ ‘ಯ’ ‘ವ’ ‘ರ’ ಈ ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ.
38. “ಚಿನ್ಮಯ” ಈ ಪದವು ಯಾವ ಸಂದಿಗೆ ಉದಾಹರಣೆ?
A. ಯಣ್ ಸಂಧಿ
B. ಗುಣ ಸಂಧಿ
C. ಅನುನಾಸಿಕ ಸಂಧಿ
D. ವೃದ್ಧಿ ಸಂಧಿ
ANSWER:C
SOLUTION: ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ (ಅನುನಾಸಿಕ) ಬಂದಾಗ ಅನುನಾಸಿಕ ಸಂಧಿ ಎನ್ನುವರು.
39. “ಷಡಾಸನ” ಇದು.
A. ಜಸ್ತ್ವ ಸಂಧಿ
B. ಲೋಪ ಸಂಧಿ
C. ಆದೇಶ ಸಂಧಿ
D. ಗುಣ ಸಂಧಿ
ANSWER: A
SOLUTION:ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಶ್ತ್ವ ಸಂಧಿ ಆಗುತ್ತದೆ.