Prev 1 2 3 4 5 Next
41. ವಾಕ್ಯೋಕ್ತಿ ಬಿಡಿಸಿ ಬರೆದಾಗ.
A. ವಾಕ್ಯ + ಉಕ್ತಿ
B. ವಾಕ್ಯ + ಒಕ್ತಿ
C. ವಾಕ್ಯೋ + ಉಕ್ತಿ
D. ವಾಕ್ + ಉಕ್ತಿ
ANSWER:A
SOLUTION: ವಾಕ್ಯ + ಉಕ್ತಿ
42. ಸಂಧಿಯಲ್ಲಿ ಎಷ್ಟು ವಿಧಗಳು?
A. ಎರಡು
B. ಮೂರು
C. ನಾಲ್ಕು
D. ಐದು
ANSWER:A
SOLUTION: ಕನ್ನಡ ಸಂಧಿಗಳನ್ನು ಅಕ್ಷರಗಳ ಆಧಾರದ ಮೇಲೆ ಪುನಃ ಎರಡು ಭಾಗಗಳಾಗಿ ವಿಂಗಡಿಸಬಹುದು.
ಸ್ವರ ಸಂಧಿಗಳು (1) ಲೋಪಸಂಧಿ (2) ಆಗಮಸಂಧಿ
ವ್ಯಂಜನ ಸಂಧಿಗಳು (3) ಆದೇಶ ಸಂಧಿ
43. ಕನ್ನಡ ಸಂಧಿಯಲ್ಲಿ ಎಷ್ಟು ವಿಧಗಳು?
A. ಎರಡು
B. ಮೂರು
C. ನಾಲ್ಕು
D. ಐದು
ANSWER:B
SOLUTION: ಕನ್ನಡ ಸಂಧಿಯಲ್ಲಿ ಲೋಪ, ಆಗಮ, ಆದೇಶ ಎಂದು ಮೂರು ವಿಧಗಳುಂಟು.
44. “ಊರಲ್ಲಿ” ಪದವು ಈ ಸಂದಿಗೆ ಉದಾಹರಣೆ.
A. ಆಗಮ ಸಂಧಿ
B. ಆದೇಶ ಸಂಧಿ
C. ಲೋಪ ಸಂಧಿ
D. ಗುಣ ಸಂಧಿ
ANSWER:C
SOLUTION: ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಮೊದಲ ಪದದ ಕೊನೆಯ ಸ್ವರವು ಲೋಪವಾಗುವುದು.
45. “ನಾವೆಲ್ಲ” ಪದವು ಈ ಸಂಧಿಗೆ ಉದಾಹರಣೆ.
A. ಲೋಪ ಸಂಧಿ
B. ಆದೇಶ ಸಂಧಿ
C. ಆಗಮ ಸಂಧಿ
D. ಗುಣ ಸಂಧಿ
ANSWER: A
SOLUTION: ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಮೊದಲ ಪದದ ಕೊನೆಯ ಸ್ವರವು ಲೋಪವಾಗುವುದು.
46. “ಕೈಯೆತ್ತು” ಬಿಡಿಸಿ ಬರೆದಾಗ
A. ಕೈ + ಮತ್ತು
B. ಕೈ + ಎತ್ತು
C. ಕೈಯನ್ನು+ ಎತ್ತು
D. ಯಾವುದು ಅಲ್ಲ
ANSWER: B
SOLUTION:ಕೈ + ಎತ್ತು
47. “ಹಳೆಗನ್ನಡ” ಇದು ಈ ಸಂಧಿಗೆ ಉದಾಹರಣೆ.
A. ಯಣ್ ಸಂಧಿ
B. ಗುಣ ಸಂಧಿ
C. ಆದೇಶ ಸಂಧಿ
D. ಆಗಮ ಸಂಧಿ
ANSWER: C
SOLUTION: ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೂಂದು ವ್ಯಂಜನ ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ.
48. “ಮಹರ್ಷಿ” ಈ ಸಂಧಿಗೆ ಉದಾಹರಣೆ.
A. ಲೋಪ ಸಂಧಿ
B. ಗುಣ ಸಂಧಿ
C. ಅನುನಾಸಿಕ ಸಂಧಿ
D. ವೃದ್ಧಿ ಸಂಧಿ
ANSWER:B
SOLUTION: ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ. ಅ ಆ ಕಾರಗಳ ಮುಂದೆ ಇ ಈ ಕಾರವು ಬಂದಾಗ ‘ಏ’ ಕಾರವು ಉ ಊ ಕಾರವು ಬಂದಾಗ ‘ಓ’ ಕಾರವೂ ಋ ಕಾರವು ಬಂದಾಗ ‘ಆರ್’ ಕಾರವೂ ಆದೇಶವಾಗಿ ಬಂದರೆ ಗುಣಸಂಧಿ ಎನಿಸುವುದು. ಅಥವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ, ಓ ಕಾರವು ಋ ಕಾರವು ಪರವಾದರೆ ಅರ್ ಕಾರವು ಬರುತ್ತದೆ ಇದನ್ನ ಗುಣ ಸಂಧಿ ಎನ್ನುವರು.
49. “ನೋಡುತ್ತಿರು”ಈ ಸಂಧಿಗೆ ಉದಾಹರಣೆ.
A. ಜಸ್ತ್ವ ಸಂಧಿ
B. ಲೋಪ ಸಂಧಿ
C. ಆದೇಶ ಸಂಧಿ
D. ಗುಣ ಸಂಧಿ
ANSWER: B
SOLUTION:ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಮೊದಲ ಪದದ ಕೊನೆಯ ಸ್ವರವು ಲೋಪವಾಗುವುದು.