Prev 1 2 3 4 5 Next
41. ‘ಕಪ್ಪು’- ಪದವು ಈ ವ್ಯಾಕರಣ ವಶಕ್ಕೆ ಉದಾಹರಣೆಯಾಗಿದೆ.
A. ಗುಣವಾಚಕ
B. ಭಾವನಾಮ
C. ಸಂಖ್ಯಾ ವಾಚಕ
D. ಪರಿಮಾಣವಾಚಕ
ANSWER:B
SOLUTION: ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು.
42. ಹಲವು,ಕೆಲವು, ಅಷ್ಟು,ಇಷ್ಟು ಇತ್ಯಾದಿ ಪದಗಳು ನಾಮಪದದ ಈ ಗುಂಪಿಗೆ ಸೇರಿವೆ.
A. ಭಾವನಾಮ
B. ಗುಣವಾಚಕ
C. ಸಂಖ್ಯಾ ವಾಚಕ
D. ಪರಿಮಾಣ ವಾಚಕ
ANSWER:D
SOLUTION: ಪರಿಮಾಣ ವಾಚಕ ಅಂದರೆ, ಇಲ್ಲಿ ನಿರ್ದಿಷ್ಟವಾದ ಅಳತೆ, ಸಂಖ್ಯೆ ಇಲ್ಲಿ ಇಲ್ಲ. ಈ ಪದಗಳು ಕೇವಲ ಪರಿಮಾಣವನ್ನು ಮಾತ್ರ ತಿಳಿಸುತ್ತದೆ. ಇಂಥ ಪದಗಳಿಗೆ, ಪರಿಮಾಣ ವಾಚಕಗಳು ಎಂದು ಕರೆಯುತ್ತೇವೆ. ಉದಾ: ಅಷ್ಟು, ಇಷ್ಟು, ಹಲವು, ಕೆಲವು, ಅನಿತು, ಇನಿತು, ಎನಿತು, ಸ್ವಲ್ಪ ಇತ್ಯಾದಿ.
43. ‘ಅಂಥದು’ – ಎಂಬುವುದು ಈ ನಾಮಪದವಾಗಿದೆ.
A. ಪರಿಮಾಣವಾಚಕ
B. ಗುಣವಾಚಕ
C. ಪ್ರಕಾರವಾಚಕ
D. ಸಂಖ್ಯಾ ವಾಚಕ
ANSWER:C
SOLUTION: ಪ್ರಕಾರವಾಚಕ
44. ‘ನೈರುತ್ಯ’ ಪದ ಈ ವ್ಯಾಕರಣಾಂಶಕ್ಕೆ ಸಂಬಂಧಿಸಿದೆ.
A. ಪ್ರಕಾರವಾಚಕ
B. ದಿಗ್ವಾಚಕ
C. ಗುಣವಾಚಕ
D. ಭಾವನಾಮ
ANSWER:B
SOLUTION: ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು. ಉದಾ:- ಮೂಡಣ, ಪಡುವಣ, ತೆಂಕಣ, ಬಡಗಣ, ಮೂಡಲು, ಪಡುವಲು, ತೆಂಕಲು, ಬಡಗಲು, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ, ಆಚೆ, ಈಚೆ ಇತ್ಯಾದಿ.
45. ಏಕವಚನದಲ್ಲಿರುವ ನಾಮಪದವಿದೆ.
A. ಮನೆಗಳು
B. ಪಾಲಕರು
C. ಮಗು
D. ಶಿಕ್ಷಕರು
ANSWER: C
SOLUTION: ಮಗು
46. ಉತ್ತಮ ಪುರುಷ ಸರ್ವನಾಮಕ್ಕೆ ಉದಾಹರಣೆ.
A. ಇವು
B. ನೀನು
C. ನಾನು
D. ಅದು
ANSWER: C
SOLUTION:ತನ್ನನ್ನು ತಾನೇ ಸಂಬೋಧಿಸಿಕೊಳ್ಳಲು ಬಳಸುವ ಸರ್ವನಾಮವೇ ಉತ್ತಮ ಪುರುಷ ಸರ್ವನಾಮ.
47. ನೀನು – ಎಂಬುದು ಈ ಪುರುಷಾರ್ಥಕ ಸರ್ವನಾಮಪದವಾಗಿದೆ.
A. ಪ್ರಥಮ
B. ಉತ್ತಮ
C. ಮಧ್ಯಮ
D. ತೃತೀಯ
ANSWER: C
SOLUTION: ತನ್ನ ಎದುರಿಗೆ ಇರುವವರನ್ನು ಸಂಬೋಧಿಸಲು ಬಳಸುವ ಪದವೇ ಮಧ್ಯಮ ಪುರುಷ ಸರ್ವನಾಮ.
48. ‘ಅವರು’ – ಎಂಬುವುದು ಈ ಪುರುಷಾರ್ಥಕ ಸರ್ವನಾಮಪದವಾಗಿದೆ.
A. ಪ್ರಥಮ
B. ಉತ್ತಮ
C. ತೃತೀಯ
D. ಮಧ್ಯಮ
ANSWER:A
SOLUTION:ತಾನು ಹಾಗೂ ಎದುರಿನ ವ್ಯಕ್ತಿ ಇಬ್ಬರನ್ನು ಹೊರತುಪಡಿಸಿ ಮೂರನೇ ವಸ್ತು- ವ್ಯಕ್ತಿಯನ್ನು ಸೂಚಿಸಲು ಬಳಸುವ ಪದವೇ ಪ್ರಥಮ ಪುರುಷ ಸರ್ವನಾಮ.
49. ಕೆಳಗಿನವುಗಳಲ್ಲಿ ಯಾವುದು ನಾಮಪದವಾಗಿದೆ?
A. ಪುಸ್ತಕ
B. ಹಾಡಿರಿ
C. ಕೋಪಗೊಂಡ
D. ಪ್ರೀತಿ
ANSWER: A
SOLUTION: ನಾಮಪದವು ವ್ಯಕ್ತಿ, ಸ್ಥಳ, ವಸ್ತು ಅಥವಾ ಕಲ್ಪನೆಯನ್ನು ಪ್ರತಿನಿಧಿಸುವ ಪದವಾಗಿದೆ. ಈ ಸಂದರ್ಭದಲ್ಲಿ, “ಪುಸ್ತಕ” ಎಂಬುದು ನಾಮಪದವಾಗಿದೆ ಏಕೆಂದರೆ ಅದು ವಸ್ತುವನ್ನು ಪ್ರತಿನಿಧಿಸುತ್ತದೆ,