Prev 1 2 3 4 5 Next
1. ‘ಹೂಹಣ್ಣುತಳಿರು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ:
A. ದ್ವಿಗು ಸಮಾಸ
B. ದ್ವಂದ್ವ ಸಮಾಸ
C. ಅಂಶಿ ಸಮಾಸ
D. ತತ್ಪುರುಷ ಸಮಾಸ
ANSWER:B
SOLUTION: ಎರಡು ಅಥವಾ ಅನೇಕ ನಾಮಪದಗಳೂ ಸಹಯೋಗ ತೋರುವಂತೆ ಸೇರಿ, ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸವೆಂದು ಹೆಸರು.
2. ‘ಚಕ್ರಪಾಣಿ’ ಪದವು ಈ ಸಮಾಸಕ್ಕೆ ಉದಾಹರಣೆ:
A. ದ್ವಿಗು ಸಮಾಸ
B. ತತ್ಪುರುಷ ಸಮಾಸ
C. ಬಹುವ್ರೀಹಿ ಸಮಾಸ
D. ಕ್ರಿಯಾ ಸಮಾಸ
ANSWER:C
SOLUTION: ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಸ್ತ ಪದವಾದಾಗ ಬೇರೊಂದು ಪದದ (ಅನ್ಯ ಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಎಂಬ ಹೆಸರು.
3. ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಬಂದು ಪದವಾಗುವುದೇ_.
A. ಅವ್ಯಯ
B. ಸಂಧಿ
C. ನಾಮಪದ
D. ಸಮಾಸ
ANSWER:D
SOLUTION: ಎರಡು, ಮೂರು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಾಗ ಮಧ್ಯದಲ್ಲಿ ವಿಭಕ್ತಿ ಪ್ರತ್ಯಯ ಲೋಪವಾದಾಗ ‘ಸಮಾಸ’ ಎಂದು ಹೆಸರು. ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದೂ ಎರಡನೆಯ ಪದವು ಉತ್ತರ ಪದವೆಂದು ಕರೆಯುತ್ತಾರೆ. ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ ‘ವಿಗ್ರಹ ವಾಕ್ಯ’ ಎನ್ನುತ್ತಾರೆ.
4. ಸಮಾಸದಲ್ಲಿ ಬರುವ ಮೊದಲನೇ ಪದವನ್ನು ಹೀಗೆಂದು ಕರೆಯುತ್ತಾರೆ.
A. ದಕ್ಷಿಣ ಪದ
B. ಪೂರ್ವಪದ
C. ಉತ್ತರಪದ
D. ಪಶ್ಚಿಮ ಪದ
ANSWER:B
SOLUTION: ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದೂ ಕರೆಯುತ್ತಾರೆ.
5. ಸಮಾಸದಲ್ಲಿ ಬರುವ ಎರಡನೇ ಪದವನ್ನು ಹೀಗೆಂದು ಕರೆಯುತ್ತಾರೆ.
A. ಪೂರ್ವಪದ
B. ಉತ್ತರಪದ
C. ದಕ್ಷಿಣ ಪದ
D. ಪಶ್ಚಿಮ ಪದ
ANSWER:B
SOLUTION: ಸಮಾಸದಲ್ಲಿ ಬರುವ ಎರಡನೇ ಪದವನ್ನು ಉತ್ತರಪದವೆಂದೂ ಕರೆಯುತ್ತಾರೆ.
6. ಸಮಾಸವನ್ನು ಬಿಡಿಸಿ ಬರೆಯುವುದಕ್ಕೆ ಹೀಗೆನ್ನುವರು.
A. ವಿಭಾಗ ವಾಕ್ಯ
B. ವಿಗ್ರಹ ವಾಕ್ಯ
C. ಸಮಾಸ ವಾಕ್ಯ
D. ವಿಂಗಡಣೆ
ANSWER: B
SOLUTION: ಆಯಾ ಪ್ರಕೃತಿಗಳನ್ನು ವಿಭಕ್ತಿಗನುಗುಣವಾಗಿ ವಿಂಗಡಿಸಿ ಹೇಳುವ ವಿಶೇಷ ವಾಕ್ಯಕ್ಕೆ ‘ವಿಗ್ರಹವಾಕ್ಯ’ವೆಂದು ಹೆಸರು. ಅಂದರೆ ಸಮಾಸದ ಅರ್ಥವನ್ನು ಹೇಳುವ ವಾಕ್ಯ.
7. ವಿಶೇಷಣ, ನಾಮಪದಗಳು ಸೇರಿ ಆಗುವ ಸಮಾಸ
A. ಕರ್ಮಧಾರೆಯ ಸಮಾಸ
B. ಗಮಕ ಸಮಾಸ
C. ಅಂಶಿ ಸಮಾಸ
D. ಕ್ರಿಯಾಸಮಸ
ANSWER: A
SOLUTION: “ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು.”
8. ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವೇ ಪ್ರಧಾನವಾಗಿ ಉಂಟಾಗುವ ಸಮಾಸವೇ _.
A. ಗಮಕಸಮಾಸ
B. ಅರಿ ಸಮಾಸ
C. ಅಂಶಿ ಸಮಾಸ
D. ತತ್ಪುರುಷ ಸಮಾಸ
ANSWER:B
SOLUTION:ಸಮಾಸದ ವಿಧಗಳು ಸಮಾಸದಲ್ಲಿಯ ಎರಡೂ ಪದಗಳು ಸಂಸ್ಕೃತ+ಸಂಸ್ಕೃತ ಶಬ್ದಗಳಿದ್ದರೆ, ಅಥವಾ ಎರಡೂ ಪದಗಳು ಕನ್ನಡ+ಕನ್ನಡ ಶಬ್ದಗಳಿದ್ದರೆ ಸಮಾಸ ಮಾಡಲು ಬರುತ್ತದೆ. ಒಂದು ಪದ ಸಂಸ್ಕೃತ ಇನ್ನೊಂದು ಪದ ಕನ್ನಡ (ಸಂಸ್ಕೃತ+ಕನ್ನಡ) ಶಬ್ದಗಳನ್ನು ಕೂಡಿಸಿ ಸಮಾಸ ಮಾಡಲು ಬರುವುದಿಲ್ಲ. ಹಾಗೆ ಮಾಡಿದರೆ ಅದನ್ನು ‘ಅರಿಸಮಾಸ’ ಎನ್ನವರು.
9. ಸಂಖ್ಯಾ ವಾಚಕ ಮತ್ತು ನಾಮಪದ ಸೇರಿ ಆಗುವ ಸಮಾಸವೇ _.
A. ಅಂಶಿ ಸಮಾಸ
B. ಗಮಕ ಸಮಾಸ
C. ಕ್ರಿಯಾ ಸಮಾಸ
D. ದ್ವಿಗು ಸಮಾಸ
ANSWER: D
SOLUTION: ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ ದ್ವಿಗು ಸಮಾಸವೆಂದು ಹೆಸರು. ಎರಡು+ಕೆಲ=ಇಕ್ಕೆಲ (ಇರ್ಕೆಲ),