Prev 1 2 3 4 5 Next
11. ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸ __.
A. ಬಹುರ್ವಿಹಿ ಸಮಾಸ
B. ದ್ವಂದ್ವ ಸಮಾಸ
C. ಅಂಶಿ ಸಮಾಸ
D. ತತ್ಪುರುಷ ಸಮಾಸ
ANSWER:A
SOLUTION: ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಸ್ತ ಪದವಾದಾಗ ಬೇರೊಂದು ಪದದ (ಅನ್ಯ ಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಎಂಬ ಹೆಸರು.
12. ನಾಮಪದ ಕ್ರಿಯಾಪದಗಳು ಸೇರಿ ಆಗುವ ಸಮಾಸ.
A. ದ್ವಿಗು ಸಮಾಸ
B. ತತ್ಪುರುಷ ಸಮಾಸ
C. ಬಹುವ್ರೀಹಿ ಸಮಾಸ
D. ಕ್ರಿಯಾ ಸಮಾಸ
ANSWER:D
SOLUTION: “ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಕ್ರಿಯಾಸಮಾಸವೆನ್ನುವರು.”
13. ದೇವಾಲಯ ಸಮಾಸದ ವಿಗ್ರಹ ವಾಕ್ಯ.
A. ದೇವ + ಆಲಯ
B. ದೇವ + ಅಲಯ
C. ದೇವರ + ಆಲಯ
D. ದೇವಾ + ಲಯ
ANSWER:C
SOLUTION: ಎರಡು, ಮೂರು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಾಗ ಮಧ್ಯದಲ್ಲಿ ವಿಭಕ್ತಿ ಪ್ರತ್ಯಯ ಲೋಪವಾದಾಗ ‘ಸಮಾಸ’ ಎಂದು ಹೆಸರು. ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದೂ ಎರಡನೆಯ ಪದವು ಉತ್ತರ ಪದವೆಂದು ಕರೆಯುತ್ತಾರೆ. ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ ‘ವಿಗ್ರಹ ವಾಕ್ಯ’ ಎನ್ನುತ್ತಾರೆ.
14. “ಹೆಜ್ಜೇನು” ಎನ್ನುವಲ್ಲಿ ಆಗಿರುವ ಸಮಾಸ
A. ತತ್ಪುರುಷ ಸಮಾಸ
B. ಕರ್ಮಧಾರೆಯ ಸಮಾಸ
C. ಗಮಕ ಸಮಾಸ
D. ಕ್ರಿಯಾ ಸಮಾಸ
ANSWER:B
SOLUTION: ಕರ್ಮಧಾರೆಯ ಸಮಾಸ ಎಂದರೆ ಪೂರ್ವೋತ್ತರ ಪದಗಳು ಲಿಂಗ ವಚನ ವಿಭಕ್ತಿಗಳಿಂದ ಸಮನಾಗಿದ್ದು ವಿಶೇಷಣ ಸಂಬಂಧದಿಂದ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನುವರು . ಇದರಲ್ಲಿ ಉತ್ತರಪದದ ಅರ್ಥವೇ ಪ್ರಧಾನವಾಗಿರುತ್ತದೆ .
15. “ನಾಲ್ವಡಿ” ಎನ್ನುವುದರ ವಿಗ್ರಹ ವಾಕ್ಯ.
A. ನಾಲ್ + ವಡಿ
B. ನಾಲ್ + ಮಡಿ
C. ನಾಕು + ಮಡಿ
D. ನಾಲ್ಕು + ಮಡಿ
ANSWER:D
SOLUTION: ಆಯಾ ಪ್ರಕೃತಿಗಳನ್ನು ವಿಭಕ್ತಿಗನುಗುಣವಾಗಿ ವಿಂಗಡಿಸಿ ಹೇಳುವ ವಿಶೇಷ ವಾಕ್ಯಕ್ಕೆ ‘ವಿಗ್ರಹವಾಕ್ಯ’ವೆಂದು ಹೆಸರು. ಅಂದರೆ ಸಮಾಸದ ಅರ್ಥವನ್ನು ಹೇಳುವ ವಾಕ್ಯ.
16. ಪೂರ್ವ ಪದ ಸರ್ವನಾಮ ಅಥವಾ ಕೃದಂತ ವಾಗಿದ್ದು ಉತ್ತರ ಪದದ ನಾಮಪದದೊಡನೆ ಕೂಡಿ ಆಗುವ ಸಮಾಸ.
A. ದ್ವಿಗು ಸಮಾಸ
B. ಗಮಕ ಸಮಾಸ
C. ಅಂಶಿ ಸಮಾಸ
D. ತತ್ಪುರುಷ ಸಮಾಸ
ANSWER: B
SOLUTION: ಗಮಕ ಸಮಾಸ – ಗಮಕ ಸಮಾಸ [ಉತ್ತರಪದಾರ್ಥ ಮುಖ್ಯಸಮಾಸ] ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಪದವನ್ನು ಗಮಕಸಮಾಸವೆಂದು ಕರೆಯುವರು.
17. “ಆ ಕಲ್ಲು” ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
A. ದ್ವಂದ್ವ ಸಮಾಸ
B. ಗಮಕ ಸಮಾಸ
C. ಅಂಶಿ ಸಮಾಸ
D. ಕ್ರಿಯಾಸಮಸ
ANSWER: B
SOLUTION: ಗಮಕ ಸಮಾಸ – ಗಮಕ ಸಮಾಸ [ಉತ್ತರಪದಾರ್ಥ ಮುಖ್ಯಸಮಾಸ] ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಪದವನ್ನು ಗಮಕಸಮಾಸವೆಂದು ಕರೆಯುವರು.
18. ಬೆಟ್ಟದಾವರೆ ಇದು ಯಾವ ಸಮಾಸಕ್ಕೆ ಸೇರಿದೆ?
A. ಗಮಕ ಸಮಾಸ
B. ಅರಿ ಸಮಾಸ
C. ಅಂಶಿ ಸಮಾಸ
D. ತತ್ಪುರುಷ ಸಮಾಸ
ANSWER:D
SOLUTION:ಎರಡು ನಾಮಪದಗಳು ಸೇರಿ ಸಮಾಸವಾದಾಗ, ಉತ್ತರ ಪದದ ಅರ್ಥವು ಪ್ರಧಾನವಾಗಿ ಇರುವ ಸಮಸ್ತಪದಕ್ಕೆ ತತ್ಪುರುಷ ಸಮಾಸ ವೆಂದು ಹೆಸರು. ಅರಮನೆ ಎಂಬ ಸಮಸ್ತಪದವನ್ನು ಬಿಡಿಸಿದಾಗ, ಅರಸನ ಮನೆ ಎಂದಾಗುವುದು.
19. ಹೊಸಗನ್ನಡ ಇದು ಯಾವ ಸಮಾಸಕ್ಕೆ ಸೇರಿದೆ?
A. ತತ್ಪುರುಷ ಸಮಾಸ
B. ಗಮಕ ಸಮಾಸ
C. ಕರ್ಮಧಾರೆಯ ಸಮಾಸ
D. ದ್ವಿಗು ಸಮಾಸ
ANSWER: C
SOLUTION: ಕರ್ಮಧಾರೆಯ ಸಮಾಸ ಎಂದರೆ ಪೂರ್ವೋತ್ತರ ಪದಗಳು ಲಿಂಗ ವಚನ ವಿಭಕ್ತಿಗಳಿಂದ ಸಮನಾಗಿದ್ದು ವಿಶೇಷಣ ಸಂಬಂಧದಿಂದ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನುವರು . ಇದರಲ್ಲಿ ಉತ್ತರಪದದ ಅರ್ಥವೇ ಪ್ರಧಾನವಾಗಿರುತ್ತದೆ .