Prev 1 2 3 4 5 Next
21. “ಅಂಗೈ” ಇದು ಯಾವ ಸಮಾಸಕ್ಕೆ ಸೇರಿದೆ?
A. ಬಹುರ್ವಿಹಿ ಸಮಾಸ
B. ದ್ವಂದ್ವ ಸಮಾಸ
C. ಅಂಶಿ ಸಮಾಸ
D. ತತ್ಪುರುಷ ಸಮಾಸ
ANSWER:C
SOLUTION: ಅಂಶಿಸಮಾಸದಲ್ಲಿ ಪೂರ್ವಪದ ವಸ್ತುವಿನ ಅಂಶವನ್ನೂ, ಉತ್ತರಪದ ಆ ವಸ್ತುವನ್ನು (ಅಂದರೆ ಅಂಶಿಯನ್ನು) ಸೂಚಿಸುತ್ತದೆ. ಆದ್ದರಿಂದಲೇ ಇದಕ್ಕೆ ಅಂಶಿ ಸಮಾಸವೆಂದು ಹೆಸರು.
22. “ಗಿರಿವನದುರ್ಗಗಳು” ಇದು ಯಾವ ಸಮಾಸಕ್ಕೆ ಸೇರಿದೆ.
A. ಅಂಶಿ ಸಮಾಸ
B. ಬಹುರ್ವಿಹಿ ಸಮಾಸ
C. ಕ್ರಿಯಾ ಸಮಾಸ
D. ದ್ವಂದ್ವ ಸಮಾಸ
ANSWER:D
SOLUTION: ಎರಡು ಅಥವಾ ಅನೇಕ ನಾಮಪದಗಳೂ ಸಹಯೋಗ ತೋರುವಂತೆ ಸೇರಿ, ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸವೆಂದು ಹೆಸರು. ಆತನು ಹೊಲಮನೆ ಮಾಡಿಕೊಂಡ್ಡಿದ್ದಾನೆ. ಕೆರೆಕಟ್ಟೆಗಳನ್ನು ಕಟ್ಟಿಸಿದನು.
23. “ಬಿಲ್ಲೊಂದು” ಇದು ಯಾವ ಸಮಾಸಕ್ಕೆ ಸೇರಿದೆ?
A. ದ್ವಿಗು ಸಮಾಸ
B. ಕರ್ಮಧಾರೆ ಸಮಾಸ
C. ಕ್ರಿಯಾ ಸಮಾಸ
D. ತತ್ಪುರುಷ ಸಮಾಸ
ANSWER:C
SOLUTION: “ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಕ್ರಿಯಾಸಮಾಸವೆನ್ನುವರು.”
24. “ಈ ಬೆಕ್ಕು” ಇದು ಯಾವ ಸಮಾಸಕ್ಕೆ ಸೇರಿದೆ?
A. ತತ್ಪುರುಷ ಸಮಾಸ
B. ಕರ್ಮಧಾರೆಯ ಸಮಾಸ
C. ಗಮಕ ಸಮಾಸ
D. ಕ್ರಿಯಾ ಸಮಾಸ
ANSWER:C
SOLUTION: ಗಮಕ ಸಮಾಸ – ಗಮಕ ಸಮಾಸ [ಉತ್ತರಪದಾರ್ಥ ಮುಖ್ಯಸಮಾಸ] ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಪದವನ್ನು ಗಮಕಸಮಾಸವೆಂದು ಕರೆಯುವರು.
25. “ಕಂಗೆಡು” – ಇದು ಯಾವ ಸಮಾಸಕ್ಕೆ ಸೇರಿದೆ?
A. ಕ್ರಿಯಾ ಸಮಾಸ
B. ಗಮಕ ಸಮಾಸ
C. ತತ್ಪುರುಷ ಸಮಾಸ
D. ದ್ವಿಗು ಸಮಾಸ
ANSWER:A
SOLUTION: “ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಕ್ರಿಯಾಸಮಾಸವೆನ್ನುವರು.”
26. “ಗಿಡಮರಬಳ್ಳಿಗಳು” ಇದು ಯಾವ ಸಮಾಸಕ್ಕೆ ಸೇರಿದೆ?
A. ದ್ವಿಗು ಸಮಾಸ
B. ಕರ್ಮಧಾರೆಯ ಸಮಾಸ
C. ದ್ವಂದ್ವ ಸಮಾಸ
D. ಗಮಕ ಸಮಾಸ
ANSWER: C
SOLUTION: ಎರಡು ಅಥವಾ ಅನೇಕ ನಾಮಪದಗಳೂ ಸಹಯೋಗ ತೋರುವಂತೆ ಸೇರಿ, ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸವೆಂದು ಹೆಸರು. ಆತನು ಹೊಲಮನೆ ಮಾಡಿಕೊಂಡ್ಡಿದ್ದಾನೆ. ಕೆರೆಕಟ್ಟೆಗಳನ್ನು ಕಟ್ಟಿಸಿದನು.
27. ಹಿಂದಲೆ- ಇದು ಯಾವ ಸಮಾಸಕ್ಕೆ ಸೇರಿದೆ?
A. ಕರ್ಮಧಾರೆಯ ಸಮಾಸ
B. ಅಂಶಿ ಸಮಾಸ
C. ತತ್ಪುರುಷ ಸಮಾಸ
D. ಗಮಕ ಸಮಾಸ
ANSWER: B
SOLUTION: ಅಂಶಿಸಮಾಸದಲ್ಲಿ ಪೂರ್ವಪದ ವಸ್ತುವಿನ ಅಂಶವನ್ನೂ, ಉತ್ತರಪದ ಆ ವಸ್ತುವನ್ನು (ಅಂದರೆ ಅಂಶಿಯನ್ನು) ಸೂಚಿಸುತ್ತದೆ. ಆದ್ದರಿಂದಲೇ ಇದಕ್ಕೆ ಅಂಶಿ ಸಮಾಸವೆಂದು ಹೆಸರು.
28. ಸಪ್ತಸ್ವರಗಳು – ಇದು ಯಾವ ಸಮಾಸಕ್ಕೆ ಸೇರಿದೆ?
A. ದ್ವಂದ್ವ ಸಮಾಸ
B. ಕರ್ಮಧಾರೆಯ ಸಮಾಸ
C. ತತ್ಪುರುಷ ಸಮಾಸ
D. ದ್ವಿಗು ಸಮಾಸ
ANSWER:D
SOLUTION:ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ ದ್ವಿಗು ಸಮಾಸವೆಂದು ಹೆಸರು. ಎರಡು+ಕೆಲ=ಇಕ್ಕೆಲ (ಇರ್ಕೆಲ),
29. ‘ನಲ್ಗುದುರೆ’ ಪದವು ಈ ಸಮಾಸಕ್ಕೆ ಉದಾಹರಣೆ:
A. ತತ್ಪುರುಷ ಸಮಾಸ
B. ಗಮಕ ಸಮಾಸ
C. ಕರ್ಮಧಾರೆಯ ಸಮಾಸ
D. ದ್ವಿಗು ಸಮಾಸ
ANSWER: C
SOLUTION: ಕರ್ಮಧಾರೆಯ ಸಮಾಸ ಎಂದರೆ ಪೂರ್ವೋತ್ತರ ಪದಗಳು ಲಿಂಗ ವಚನ ವಿಭಕ್ತಿಗಳಿಂದ ಸಮನಾಗಿದ್ದು ವಿಶೇಷಣ ಸಂಬಂಧದಿಂದ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನುವರು . ಇದರಲ್ಲಿ ಉತ್ತರಪದದ ಅರ್ಥವೇ ಪ್ರಧಾನವಾಗಿರುತ್ತದೆ .