Prev 1 2 3 4 5 Next
31.‘ಹಣೆಗಣ್ಣ’ ಪದವು ಈ ಸಮಾಸಕ್ಕೆ ಉದಾಹರಣೆ:
A. ಬಹುರ್ವಿಹಿ ಸಮಾಸ
B. ದ್ವಂದ್ವ ಸಮಾಸ
C. ಅಂಶಿ ಸಮಾಸ
D. ತತ್ಪುರುಷ ಸಮಾಸ
ANSWER:A
SOLUTION: ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಸ್ತ ಪದವಾದಾಗ ಬೇರೊಂದು ಪದದ (ಅನ್ಯ ಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಎಂಬ ಹೆಸರು.
32. ‘ತಲೆನೋವು’ ಪದದಲ್ಲಿ ಉಂಟಾಗಿರುವ ಸಮಾಸ:
A. ಅಂಶಿ ಸಮಾಸ
B. ತತ್ಪುರುಷ ಸಮಾಸ
C. ಕ್ರಿಯಾ ಸಮಾಸ
D. ದ್ವಂದ್ವ ಸಮಾಸ
ANSWER:B
SOLUTION: ಎರಡು ನಾಮಪದಗಳು ಸೇರಿ ಸಮಾಸವಾದಾಗ, ಉತ್ತರ ಪದದ ಅರ್ಥವು ಪ್ರಧಾನವಾಗಿ ಇರುವ ಸಮಸ್ತಪದಕ್ಕೆ ತತ್ಪುರುಷ ಸಮಾಸ ವೆಂದು ಹೆಸರು. ಅರಮನೆ ಎಂಬ ಸಮಸ್ತಪದವನ್ನು ಬಿಡಿಸಿದಾಗ, ಅರಸನ ಮನೆ ಎಂದಾಗುವುದು.
33. ‘ಮೂಗಾವುದ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ:
A. ದ್ವಿಗು ಸಮಾಸ
B. ಕರ್ಮಧಾರೆಯ ಸಮಾಸ
C. ಕ್ರಿಯಾ ಸಮಾಸ
D. ತತ್ಪುರುಷ ಸಮಾಸ
ANSWER:A
SOLUTION: ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ ದ್ವಿಗು ಸಮಾಸವೆಂದು ಹೆಸರು.
34. ‘ರಾಜಭಕ್ತಿ’ ಪದವು ಈ ಸಮಾಸಕ್ಕೆ ಸಂಬಂಧಿಸಿದೆ:
A. ತತ್ಪುರುಷ ಸಮಾಸ
B. ಕರ್ಮಧಾರೆಯ ಸಮಾಸ
C. ಗಮಕ ಸಮಾಸ
D. ಕ್ರಿಯಾ ಸಮಾಸ
ANSWER:A
SOLUTION: ಎರಡು ನಾಮಪದಗಳು ಸೇರಿ ಸಮಾಸವಾದಾಗ, ಉತ್ತರ ಪದದ ಅರ್ಥವು ಪ್ರಧಾನವಾಗಿ ಇರುವ ಸಮಸ್ತಪದಕ್ಕೆ ತತ್ಪುರುಷ ಸಮಾಸ ವೆಂದು ಹೆಸರು.
35. ‘ಕರಿತುರಗರಥ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ:
A. ಕ್ರಿಯಾ ಸಮಾಸ
B. ದ್ವಂದ್ವ ಸಮಾಸ
C. ತತ್ಪುರುಷ ಸಮಾಸ
D. ದ್ವಿಗು ಸಮಾಸ
ANSWER:B
SOLUTION: ಎರಡು ಅಥವಾ ಅನೇಕ ನಾಮಪದಗಳೂ ಸಹಯೋಗ ತೋರುವಂತೆ ಸೇರಿ, ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸವೆಂದು ಹೆಸರು.”
36. ‘ಮೆಲ್ವಾತು’ ಪದವು ಈ ಸಮಾಸಕ್ಕೆ ಉದಾಹರಣೆ:
A. ದ್ವಿಗು ಸಮಾಸ
B. ಕರ್ಮಧಾರೆಯ ಸಮಾಸ
C. ದ್ವಂದ್ವ ಸಮಾಸ
D. ಗಮಕ ಸಮಾಸ
ANSWER: B
SOLUTION: ಕರ್ಮಧಾರೆಯ ಸಮಾಸ ಎಂದರೆ ಪೂರ್ವೋತ್ತರ ಪದಗಳು ಲಿಂಗ ವಚನ ವಿಭಕ್ತಿಗಳಿಂದ ಸಮನಾಗಿದ್ದು ವಿಶೇಷಣ ಸಂಬಂಧದಿಂದ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನುವರು . ಇದರಲ್ಲಿ ಉತ್ತರಪದದ ಅರ್ಥವೇ ಪ್ರಧಾನವಾಗಿರುತ್ತದೆ .
37. ಇವುಗಳಲ್ಲಿ ಬಹುವ್ರೀಹಿ ಸಮಾಸಕ್ಕೆ ಉದಾಹರಣೆ:
A. ಹೊಸಗನ್ನಡ
B. ಪೆರ್ಬಯಕೆ
C. ನಾಲ್ಮೊಗ
D. ಕೈನೀಡು
ANSWER: C
SOLUTION: ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಸ್ತ ಪದವಾದಾಗ ಬೇರೊಂದು ಪದದ (ಅನ್ಯ ಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಎಂಬ ಹೆಸರು.
38. ‘ನಡುರಾತ್ರಿ’ ಪದವು ಈ ಸಮಾಸಕ್ಕೆ ಉದಾಹರಣೆ:
A. ದ್ವಂದ್ವ ಸಮಾಸ
B. ಕರ್ಮಧಾರೆಯ ಸಮಾಸ
C. ತತ್ಪುರುಷ ಸಮಾಸ
D. ಅಂಶಿ ಸಮಾಸ
ANSWER:D
SOLUTION:ಅಂಶಿಸಮಾಸದಲ್ಲಿ ಪೂರ್ವಪದ ವಸ್ತುವಿನ ಅಂಶವನ್ನೂ, ಉತ್ತರಪದ ಆ ವಸ್ತುವನ್ನು (ಅಂದರೆ ಅಂಶಿಯನ್ನು) ಸೂಚಿಸುತ್ತದೆ. ಆದ್ದರಿಂದಲೇ ಇದಕ್ಕೆ ಅಂಶಿ ಸಮಾಸವೆಂದು ಹೆಸರು.
39. ‘ಪಾರ್ಥಭೀಮರು’ ಪದವು ಈ ಸಮಾಸಕ್ಕೆ ಉದಾಹರಣೆ:
A. ತತ್ಪುರುಷ ಸಮಾಸ
B. ಗಮಕ ಸಮಾಸ
C. ಕರ್ಮಧಾರೆಯ ಸಮಾಸ
D. ದ್ವಂದ್ವ ಸಮಾಸ
ANSWER: D
SOLUTION: ಎರಡು ಅಥವಾ ಅನೇಕ ನಾಮಪದಗಳೂ ಸಹಯೋಗ ತೋರುವಂತೆ ಸೇರಿ, ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸವೆಂದು ಹೆಸರು.