1. ಕನ್ನಡದಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?
A) 48
B) 49
C) 50
D) 52
ಉತ್ತರ: B
ವಿವರಣೆ: ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ (ಸ್ವರಗಳು 13 + ವ್ಯಂಜನಗಳು 34 + ಯೋಗವಾಹಗಳು 2).
2. ಕನ್ನಡದಲ್ಲಿ ಎಷ್ಟು ಸ್ವರಗಳಿವೆ?
A) 10
B) 12
C) 13
D) 15
ಉತ್ತರ: C
ವಿವರಣೆ: ಕನ್ನಡದಲ್ಲಿ 13 ಸ್ವರಗಳಿವೆ – ಅ, ಆ, ಇ, ಈ, ಉ, ಊ, ಋ,ಎ, ಏ , ಐ, ಒ, ಓ, ಔ.
3. ಕನ್ನಡದಲ್ಲಿ ಎಷ್ಟು ವ್ಯಂಜನಗಳಿವೆ?
A) 32
B) 34
C) 36
D) 40
ಉತ್ತರ: B
ವಿವರಣೆ: ಒಟ್ಟು 34 ವ್ಯಂಜನಗಳಿವೆ – ಕ್ ರಿಂದ ಳ್ ವರೆಗೆ.
4. ಕನ್ನಡದಲ್ಲಿ ಎಷ್ಟು ಯೋಗವಾಹ ಅಕ್ಷರಗಳಿವೆ?
A) 1
B) 2
C) 3
D) 4
ಉತ್ತರ: B
ವಿವರಣೆ: ಯೋಗ’ ಎಂದರೆ ಸಂಬಂಧ ವಾಹ ಎಂದರೆ ‘ಹೊಂದಿದ ‘ ಎಂದರ್ಥ. ಯಾವುದಾದರೂ ಒಂದು ಅಕ್ಷರದ ಸಂಬಂಧದಿಂದಲೇ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನುವರು.ಇವುಗಳಿಗೆ ಸ್ವತಂತ್ರವಾದ ಉಚ್ಛಾರವಿಲ್ಲ.ಕನ್ನಡದಲ್ಲಿ ಎರಡು ಯೋಗವಾಹಗಳು ಇವೆ.o= ಅನುಸ್ವಾರ & : = ವಿಸರ್ಗ
5. “ಅ” ಅಕ್ಷರವು ಎಲ್ಲಾ ಸ್ವರಗಳ ____ ಅಕ್ಷರವಾಗಿದೆ.
A) ಮೂಲ
B) ಅಲಂಕಾರ
C) ಅಂತ್ಯ
D) ಯಾವುದು ಅಲ್ಲ
ಉತ್ತರ: A
ವಿವರಣೆ: ಅ” ಅಕ್ಷರವು ಎಲ್ಲಾ ಸ್ವರಗಳ ಮೂಲ ಅಕ್ಷರವಾಗಿದೆ.
6. ಕನ್ನಡದಲ್ಲಿ “ವರ್ಣಮಾಲೆ” ಎಂದರೆ ಏನು?
A) ಸ್ವರ + ವ್ಯಂಜನ + ಯೋಗವಾಹಗಳ ಒಟ್ಟು
B) ಸ್ವರಗಳಷ್ಟೇ
C) ವ್ಯಂಜನಗಳಷ್ಟೇ
D) ಕಂತುಗಳಷ್ಟೇ
ಉತ್ತರ: A
ವಿವರಣೆ: 13 ಸ್ವರ + 34 ವ್ಯಂಜನ + 2 ಯೋಗವಾಹ = 49 ಅಕ್ಷರಗಳು = ವರ್ಣಮಾಲೆ.
7. ವ್ಯಂಜನಗಳಲ್ಲಿ ಎಷ್ಟು ವಿಧಗಳಿವೆ?
A) 2
B) 4
C) 3
D) 5
ಉತ್ತರ: A
ವಿವರಣೆ: ವ್ಯಂಜನಗಳಲ್ಲಿ ಎರಡು ವಿಧ. ವರ್ಗೀಯ ವ್ಯಂಜನ & ಅವರ್ಗೀಯ ವ್ಯಂಜನ.
8. ಕೆಳಗಿನವುಗಳಲ್ಲಿ ಸ್ವರ ಯಾವುದು?
A) ಕ್
B) ಅ
C) ಚ್
D) ತ್
ಉತ್ತರ: B
ವಿವರಣೆ:“ಅ” ಸ್ವರ, ಉಳಿದವು ವ್ಯಂಜನಗಳು.
9. ವರ್ಗೀಯ ವ್ಯಂಜನಗಳಲ್ಲಿ ಎಷ್ಟು ವರ್ಗಗಳಿವೆ?
A) 3
B) 5
C) 7
D) 9
ಉತ್ತರ: B
ವಿವರಣೆ: ವ್ಯಂಜನಗಳನ್ನು 5 ವರ್ಗಗಳಾಗಿ ಹೀಗೆ ವಿಭಜಿಸಲಾಗಿದೆ – ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ, ಪ ವರ್ಗ.
10. “ಕ ವರ್ಗ” ವ್ಯಂಜನಗಳು ಯಾವುವು?
A) ಕ್ ಖ್ ಗ್ ಘ್ ಙ್
B) ಚ್ ಛ್ ಜ್ ಝ್ ಞ್
C) ಟ್ ಠ್ ಡ್ ಢ್ ಣ್
D) ತ್ ಥ್ ದ್ ಧ್ ನ್
ಉತ್ತರ: A
ವಿವರಣೆ: ಮೊದಲ ವರ್ಗ= ಕ ವರ್ಗ
11. “ಚ ವರ್ಗ” ವ್ಯಂಜನಗಳು ಯಾವುವು?
A) ಕ್ ಖ್ ಗ್ ಘ್ ಙ್
B) ಚ್ ಛ್ ಜ್ ಝ್ ಞ್
C) ಟ್ ಠ್ ಡ್ ಢ್ ಣ್
D) ತ್ ಥ್ ದ್ ಧ್ ನ್
ಉತ್ತರ: B
ವಿವರಣೆ: ಎರಡನೇ ವರ್ಗ = ಚ ವರ್ಗ.
12. “ಟ ವರ್ಗ” ವ್ಯಂಜನಗಳು ಯಾವುವು?
A) ಕ್ ಖ್ ಗ್ ಘ್ ಙ್
B) ಚ್ ಛ್ ಜ್ ಝ್ ಞ್
C) ಟ್ ಠ್ ಡ್ ಢ್ ಣ್
D) ತ್ ಥ್ ದ್ ಧ್ ನ್
ಉತ್ತರ: C
ವಿವರಣೆ: ಮೂರನೇ ವರ್ಗ = ಟ ವರ್ಗ.
13. “ತ ವರ್ಗ” ವ್ಯಂಜನಗಳು ಯಾವುವು?
A) ಕ್ ಖ್ ಗ್ ಘ್ ಙ್
B) ಚ್ ಛ್ ಜ್ ಝ್ ಞ್
C) ಟ್ ಠ್ ಡ್ ಢ್ ಣ್
D) ತ್ ಥ್ ದ್ ಧ್ ನ್
ಉತ್ತರ: D
ವಿವರಣೆ: ನಾಲ್ಕನೇ ವರ್ಗ = ತ ವರ್ಗ.
14. “ಪ ವರ್ಗ” ವ್ಯಂಜನಗಳು ಯಾವುವು?
A) ಚ್ ಛ್ ಜ್ ಝ್ ಞ್
B) ಟ್ ಠ್ ಡ್ ಢ್ ಣ
C) ತ್ ಥ್ ದ್ ಧ್ ನ್
D) ಪ್ ಫ್ ಬ್ ಭ್ ಮ್
ಉತ್ತರ: A
ವಿವರಣೆ: ಐದನೇ ವರ್ಗ = ಪ ವರ್ಗ.
15. ವರ್ಗೀಯ ವ್ಯಂಜನಗಳಲ್ಲಿ ಎಷ್ಟು ಅಕ್ಷರಗಳಿವೆ?
A) 25
B) 34
C) 49
D) 9
ಉತ್ತರ: A
ವಿವರಣೆ: ವರ್ಗೀಯ ವ್ಯಂಜನಗಳಲ್ಲಿ 25 ಅಕ್ಷರಗಳಿವೆ. ಇವುಗಳನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದೆ: ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ, ಮತ್ತು ಪ ವರ್ಗ, ಪ್ರತಿಯೊಂದರಲ್ಲಿ ಐದು ಅಕ್ಷರಗಳಿವೆ.
16. ಅವರ್ಗೀಯ ವ್ಯಂಜನಗಳಲ್ಲಿ ಎಷ್ಟು ಅಕ್ಷರಗಳಿವೆ?
A) 25
B) 34
C) 49
D) 9
ಉತ್ತರ: D
ವಿವರಣೆ: ಅವರ್ಗೀಯ ವ್ಯಂಜನಗಳಲ್ಲಿ ಒಂಬತ್ತು ಅಕ್ಷರಗಳಿವೆ: ಯ್, ರ್, ಲ್, ವ್, ಶ್, ಷ್, ಸ್, ಹ್, ಳ್. ಇವುಗಳನ್ನು ವರ್ಗೀಕರಿಸಲು ಸಾಧ್ಯವಿಲ್ಲದ ಕಾರಣ, ಅವುಗಳನ್ನು ‘ಅವರ್ಗೀಯ ವ್ಯಂಜನಗಳು’ ಎಂದು ಕರೆಯುತ್ತಾರೆ.
17. ಕೆಳಗಿನವುಗಳಲ್ಲಿ ಅವರ್ಗೀಯ ಯಾವುದು?
A) ಕ್
B) ರ್
C) ಚ್
D) ತ್
ಉತ್ತರ: B
ವಿವರಣೆ: ಸ್ವತಂತ್ರವಾಗಿ ಉಚ್ಚರಿಸಲಾಗದ ಅಕ್ಷರಗಳು ‘ವ್ಯಂಜನ’ಗಳಾಗಿವೆ. ಸ್ವರಗಳ ಸಹಾವಿಲ್ಲದೆ ವ್ಯಂಜನಗಳ ಉಚ್ಚಾರ ಸಾಧ್ಯವಿಲ್ಲ. ಉದಾ : ಯ್+ಅ=ಯ. ಅವರ್ಗೀಯ ವ್ಯಂಜನ ಸಂಜ್ಞೆಗಳಲ್ಲಿ ‘ಯ್’ಕಾರದಿಂದ ‘ಳ್’ ಕಾರದವರೆಗೆ ಒಟ್ಟು ೦9 ಅಕ್ಷರಗಳಿವೆ
18. “ಅ, ಇ, ಉ” ಸ್ವರಗಳನ್ನು ಏನೆಂದು ಕರೆಯುತ್ತಾರೆ?
A) ಹ್ರಸ್ವ
B) ದೀರ್ಘ
C) ಪ್ಲುತ
D) ಯಾವುದು ಅಲ್ಲ
ಉತ್ತರ: A
ವಿವರಣೆ: ಹೃಸ್ವ ಸ್ವರಗಳು (6)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಆರು ಅಕ್ಷರಗಳನ್ನು(ಅ,ಇ ಉ,ಋ,ಎ,ಒ) ಹೃಸ್ವ ಸ್ವರಗಳೆಂದು ಕರೆಯುವರು.
19. “ಆ, ಈ, ಊ, ಏ, ಓ” ಸ್ವರಗಳನ್ನು ಏನೆಂದು ಕರೆಯುತ್ತಾರೆ?
A) ಹ್ರಸ್ವ
B) ದೀರ್ಘ
C) ಪ್ಲುತ
D) ಯಾವುದು ಅಲ್ಲ
ಉತ್ತರ: B
ವಿವರಣೆ: ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (7)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು.
20. “ಐ, ಔ” ಸ್ವರಗಳನ್ನು ಏನೆಂದು ಕರೆಯುತ್ತಾರೆ?
A) ಸಂಧ್ಯಕ್ಷರ
B) ಸಂಯುಕ್ತಸ್ವರ
C) ಹ್ರಸ್ವ
D) ಪ್ಲುತ
ಉತ್ತರ: A
ವಿವರಣೆ: ಐ ಮತ್ತು ಔ ಅಕ್ಷರಗಳು ಧೀರ್ಘಸ್ವರಗಳೂ ಸಂಧ್ಯಕ್ಷರಗಳೂ ಆಗಿವೆ.
21. “ಅಂ” ಅಕ್ಷರವನ್ನು ಏನೆಂದು ಕರೆಯುತ್ತಾರೆ?
A) ಅನುಸ್ವಾರ
B) ವಿಸರ್ಗ
C) ಹ್ರಸ್ವ
D) ಸಂಧ್ಯಕ್ಷರ
ಉತ್ತರ: A
ವಿವರಣೆ: ಅನುಸ್ವಾರ: “ಅಂ” ಅಕ್ಷರವನ್ನು ಅನುಸ್ವಾರ ಎಂದು ಕರೆಯಲಾಗುತ್ತದೆ.
22. “ಅಃ” ಅಕ್ಷರವನ್ನು ಏನೆಂದು ಕರೆಯುತ್ತಾರೆ?
A) ವಿಸರ್ಗ
B) ಅನುಸ್ವಾರ
C) ಅಂತಃಸ್ಥ
D) ದೀರ್ಘಸ್ವರ
ಉತ್ತರ: A
ವಿವರಣೆ: “ಅಃ” ಅಕ್ಷರವನ್ನು ವಿಸರ್ಗ ಎಂದು ಕರೆಯುತ್ತಾರೆ.
23. ಕನ್ನಡದಲ್ಲಿ “ಸ್ವರಮಾಲೆ” ಎಂದರೆ ಏನು?
A) ವ್ಯಂಜನಗಳ ಸರಣಿ
B) ಸ್ವರಗಳ ಸರಣಿ
C) ಯೋಗವಾಹಗಳ ಸರಣಿ
D) ಯಾವುದು ಅಲ್ಲ
ಉತ್ತರ: B
ವಿವರಣೆ: ಸ್ವರಗಳನ್ನು ಕ್ರಮವಾಗಿ ಬರೆದರೆ ಅದು ಸ್ವರಮಾಲೆ.
24. ಕನ್ನಡದಲ್ಲಿ “ವ್ಯಂಜನಮಾಲೆ” ಎಂದರೆ ಏನು?
A) ವ್ಯಂಜನಗಳ ಸರಣಿ
B) ಸ್ವರಗಳ ಸರಣಿ
C) ಯೋಗವಾಹಗಳ ಸರಣಿ
D) ಹ್ರಸ್ವಸ್ವರಗಳು
ಉತ್ತರ: A
ವಿವರಣೆ: ವ್ಯಂಜನಗಳನ್ನು ಕ್ರಮವಾಗಿ ಬರೆದರೆ ಅದು ವ್ಯಂಜನಮಾಲೆ.
25. ಈ ಪದದಲ್ಲಿ ಅನುನಾಸಿಕ ಅಕ್ಷರವಿಲ್ಲ.
A) ಮುದುಕಿ
B) ಪಯಣ
C) ಸೈನಿಕ
D) ರಾಹಿಲ್
ಉತ್ತರ: D
ವಿವರಣೆ: ಅನುನಾಸಿಕ ಅಕ್ಷರಗಳು ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳಾಗಿವೆ. ಕನ್ನಡದಲ್ಲಿ ಅನುನಾಸಿಕ ಅಕ್ಷರಗಳು ಙ್, ಞ್, ಣ್, ನ್, ಮ್. ಇವುಗಳನ್ನು ವರ್ಗೀಯ ವ್ಯಂಜನಗಳ ಪಂಚಮಾಕ್ಷರಗಳೆಂದೂ ಕರೆಯಲಾಗುತ್ತದೆ.
26. ಕನ್ನಡದಲ್ಲಿ ಒಟ್ಟು ಎಷ್ಟು ಹೃಸ್ವ ಸ್ವರಗಳಿವೆ?
A) 13
B) 6
C) 7
D) 2
ಉತ್ತರ: B
ವಿವರಣೆ: ಹ್ರಸ್ವ ಸ್ವರಗಳು (6): ಅ, ಇ, ಉ, ಋ, ಎ, ಒ. ಇವುಗಳನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುತ್ತದೆ.
27. ಕನ್ನಡದಲ್ಲಿ ಒಟ್ಟು ಎಷ್ಟು ದೀರ್ಘಸ್ವರಗಳಿವೆ?
A) 13
B) 6
C) 7
D) 2
ಉತ್ತರ: C
ವಿವರಣೆ: ದೀರ್ಘ ಸ್ವರಗಳು (7): ಆ, ಈ, ಊ, ಏ, ಐ, ಓ, ಔ. ಇವುಗಳನ್ನು ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುತ್ತದೆ.
28. ಕನ್ನಡದಲ್ಲಿ ‘ಅನುಸ್ವಾರ’ ಯಾವ ಅಕ್ಷರದಿಂದ ಸೂಚಿಸಲಾಗುತ್ತದೆ?
A) ಅಂ
B) ಅಃ
C) ಆ
D) ಅ
ಉತ್ತರ: A
ವಿವರಣೆ: “ಅಂ” ಗುರುತು ಅನುಸ್ವಾರ.
29. ಕನ್ನಡದಲ್ಲಿ ‘ವಿಸರ್ಗ’ ಯಾವ ಅಕ್ಷರದಿಂದ ಸೂಚಿಸಲಾಗುತ್ತದೆ?
A) ಅಂ
B) ಅಃ
C) ಆ
D) ಅ
ಉತ್ತರ: B
ವಿವರಣೆ: “ಅಃ” ಗುರುತು ವಿಸರ್ಗ.
30. ಸಜಾತೀಯ ಸಂಯುಕ್ತಾಕ್ಷರ ಕ್ಕೆ ಉದಾಹರಣೆ ಅಲ್ಲ.
A) ಅಪ್ಪ
B) ಸ್ವರ
C) ಎಲ್ಲ
D) ಬಟ್ಟೆ
ಉತ್ತರ: B
ವಿವರಣೆ: ಅಪ್ಪ ಈ ಪದದಲ್ಲಿ ಪ್ಪ ಎಂಬ ಅಕ್ಷರವನ್ನು ಗಮನಿಸಿ ಇಲ್ಲಿ ಪ್+ಪ್+ಅ ಎಂಬ ಮೂರು ಅಕ್ಷರಗಳಿವೆ. ಇವುಗಳಲ್ಲಿ ಮೊದಲೆರಡು(ಪ್+ಪ್) ಒಂದೇ ರೀತಿಯ ವ್ಯಂಜನಗಳಾಗಿವೆ. ಆದ್ದರಿಂದ ಪ್ಪ ಎಂಬುದು ಸಜಾತೀಯ ಸಂಯುಕ್ತಾಕ್ಷರವಾಗಿದೆ.
31. ಕನ್ನಡದಲ್ಲಿ ಮೊದಲ ಸ್ವರ ಯಾವದು?
A) ಆ
B) ಅ
C) ಇ
D) ಉ
ಉತ್ತರ: B
ವಿವರಣೆ: “ಅ” ಪ್ರಥಮ ಸ್ವರ.
32. ಕನ್ನಡದಲ್ಲಿ ಕೊನೆಯ ವ್ಯಂಜನ ಯಾವದು?
A) ಹ್
B) ಳ್
C) ಕ್
D) ಮ್
ಉತ್ತರ: C
ವಿವರಣೆ: ವ್ಯಂಜನಗಳ ಕೊನೆಯ ಅಕ್ಷರ ಳ್.
33. “ಕ್ ಖ್ ಗ್ ಘ್ ಙ್” — ಇವು ಯಾವ ವರ್ಗಕ್ಕೆ ಸೇರುತ್ತವೆ?
A) ತ ವರ್ಗ
B) ಕ ವರ್ಗ
C) ಪ ವರ್ಗ
D) ಶ ವರ್ಗ
ಉತ್ತರ: B
ವಿವರಣೆ: ಇವು ಕ ವರ್ಗದ ವ್ಯಂಜನಗಳು.
34. “ಚ್ ಛ್ ಜ್ ಝ್ ಞ್” ಯಾವ ವರ್ಗಕ್ಕೆ ಸೇರಿವೆ?
A) ಚ ವರ್ಗ
B) ಟ ವರ್ಗ
C) ಕ ವರ್ಗ
D) ಪ ವರ್ಗ
ಉತ್ತರ: A
ವಿವರಣೆ: ಇವು ಚ ವರ್ಗಕ್ಕೆ ಸೇರಿವೆ.
35. “ಟ್ ಠ್ ಡ್ ಢ್ ಣ್” – ಇವು ಯಾವ ವರ್ಗ?
A) ಟ ವರ್ಗ
B) ತ ವರ್ಗ
C) ಪ ವರ್ಗ
D) ಚ ವರ್ಗ
ಉತ್ತರ: A
ವಿವರಣೆ: ಟ ವರ್ಗದಲ್ಲಿ 5 ವ್ಯಂಜನಗಳು ಇವೆ.
36. “ತ್ ಥ್ ದ್ ಧ್ ನ್” – ಇವು ಯಾವ ವರ್ಗ?
A) ಪ ವರ್ಗ
B) ತ ವರ್ಗ
C) ಶ ವರ್ಗ
D) ಟ ವರ್ಗ
ಉತ್ತರ: B
ವಿವರಣೆ: ತ ವರ್ಗದಲ್ಲಿ 5 ವ್ಯಂಜನಗಳಿವೆ.
37. “ಪ್ ಫ್ ಬ್ ಭ್ ಮ್” – ಇವು ಯಾವ ವರ್ಗ?
A) ಪ ವರ್ಗ
B) ಚ ವರ್ಗ
C) ಶ ವರ್ಗ
D) ತ ವರ್ಗ
ಉತ್ತರ: A
ವಿವರಣೆ: ಪ ವರ್ಗದಲ್ಲಿ 5 ವ್ಯಂಜನಗಳಿವೆ.
38. ವರ್ಗೀಯ ವ್ಯಂಜನಗಳ ಪಂಚಮಾಕ್ಷರಳಿಗೆ ___ ಕರೆಯಲಾಗುತ್ತದೆ.
A) ಮಹಾಪ್ರಾಣಾಕ್ಷರಗಳು
B) ಅನುನಾಸಿಕಾಕ್ಷರಗಳು
C) ಅಲ್ಪಪ್ರಾಣಾಕ್ಷರಗಳು
D) ಹ್ರಸ್ವಸ್ವರಗಳು
ಉತ್ತರ: B
ವಿವರಣೆ: ವರ್ಗೀಯ ವ್ಯಂಜನಗಳ ಪಂಚಮಾಕ್ಷರಳಿಗೆ ಅನುನಾಸಿಕಾಕ್ಷರಗಳು ಎಂದು ಕರೆಯಲಾಗುತ್ತದೆ.
39. “ಯ್, ರ್, ಲ್, ವ್” — ಇವು ಯಾವ ವ್ಯಂಜನಗಳ ಗುಂಪು?
A) ವರ್ಗೀಯ ವ್ಯಂಜನಗಳು
B) ಅವರ್ಗೀಯ ವ್ಯಂಜನಗಳು
C) ಸ್ವರಗಳು
D) ಯಾವುದು ಅಲ್ಲ
ಉತ್ತರ: B
ವಿವರಣೆ: ಅವರ್ಗೀಯ ವ್ಯಂಜನಗಳು ‘ಯ್’ಕಾರದಿಂದ ‘ಳ್’ ಕಾರದವರೆಗೆ ಒಟ್ಟು ೦9 ಅಕ್ಷರಗಳಿವೆ.
40. “ಶ್, ಷ್, ಸ್, ಹ್, ಳ್” – ಇವು ಯಾವ ವ್ಯಂಜನಗಳ ಗುಂಪು?
A) ವರ್ಗೀಯ ವ್ಯಂಜನಗಳು
B) ಅವರ್ಗೀಯ ವ್ಯಂಜನಗಳು
C) ಸ್ವರಗಳು
D) ಯಾವುದು ಅಲ್ಲ
ಉತ್ತರ: B
ವಿವರಣೆ: ಅವರ್ಗೀಯ ವ್ಯಂಜನಗಳು ‘ಯ್’ಕಾರದಿಂದ ‘ಳ್’ ಕಾರದವರೆಗೆ ಒಟ್ಟು ೦9 ಅಕ್ಷರಗಳಿವೆ.
41. ಅಲ್ಪಪ್ರಾಣ ಅಕ್ಷರಗಳು.
A) ಙ್, ಞ್, ಣ್, ನ್, ಮ್
B) ಕ್ ಚ್ ಟ್ ತ್ ಪ್
C) ಖ್ ಛ್ ಠ್ ಥ್ ಫ್
D) ಅ,ಇ,ಉ,ಋ,ಎ,ಒ
ಉತ್ತರ: B
ವಿವರಣೆ: ಅಲ್ಪಪ್ರಾಣಾಕ್ಷರಗಳು (10) :- ಕಡಿಮೆ ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ ‘ಅಲ್ಪಪ್ರಾಣಾಕ್ಷರಗಳು’.ಅವುಗಳೆಂದರೆ : ಕ್, ಗ್, ಚ್, ಜ್, ಟ್, ಡ್, ತ್, ದ್, ಪ್, ಬ್
42. “ಕ್ಷ” ಅಕ್ಷರ ಯಾವ ವರ್ಣಗಳ ಸಂಯೋಗದಿಂದ ಉಂಟಾಗಿದೆ?
A) ಕ + ಷ
B) ಕ + ಶ
C) ಕ + ಸ
D) ಕ + ಳ
ಉತ್ತರ: A
ವಿವರಣೆ: ಇದನ್ನು ಸಂಯುಕ್ತ ವ್ಯಂಜನ (conjunct consonant) ಎಂದು ಕರೆಯಲಾಗುತ್ತದೆ.
43. “ಜ್ಞ” ಅಕ್ಷರ ಯಾವ ವರ್ಣಗಳ ಸಂಯೋಗ?
A) ಜ + ನ
B) ಜ + ಞ
C) ಜ + ಮ
D) ಜ + ಶ
ಉತ್ತರ: B
ವಿವರಣೆ: ಇದನ್ನು ಸಂಯುಕ್ತ ವ್ಯಂಜನ (conjunct consonant) ಎಂದು ಕರೆಯಲಾಗುತ್ತದೆ.
44. ವರ್ಗೀಯ ವ್ಯಂಜನಗಳಲ್ಲಿ ಕೊನೆಯ ಅಕ್ಷರ ಯಾವದು?
A) ಜ್ಞ
B) ಹ್
C) ಳ್
D) ಮ್
ಉತ್ತರ: D
ವಿವರಣೆ: ವರ್ಗೀಯ ವ್ಯಂಜನಗಳಲ್ಲಿ ಕೊನೆಯ ಅಕ್ಷರ ಮ್.
45. ಕನ್ನಡದ ಮೊದಲ ವ್ಯಂಜನ ಯಾವದು?
A) ಖ್
B) ಕ್
C) ಗ್
D) ಙ್
ಉತ್ತರ: B
ವಿವರಣೆ: ವ್ಯಂಜನಗಳಲ್ಲಿ ಮೊದಲ ಅಕ್ಷರ “ಕ”.
46. ಮಹಾಪ್ರಾಣ ಅಕ್ಷರಗಳು.
A) ಙ್, ಞ್, ಣ್, ನ್, ಮ್
B) ಕ್ ಚ್ ಟ್ ತ್ ಪ್
C) ಖ್ ಛ್ ಠ್ ಥ್ ಫ್
D) ಅ,ಇ,ಉ,ಋ,ಎ,ಒ
ಉತ್ತರ: C
ವಿವರಣೆ: ಮಹಾಪ್ರಾಣ ಅಕ್ಷರಗಳು (ಖ್, ಘ್, ಛ್, ಝ್, ಠ್, ಢ್, ಥ್, ಧ್, ಫ್, ಭ್) ಹೆಚ್ಚು ಉಸಿರನ್ನು ಉಪಯೋಗಿಸಿ, ಒತ್ತಿ ಹೇಳುವ ಅಕ್ಷರಗಳಾಗಿವೆ.
47. ಎರಡು ಮಾತ್ರ ಕಾಲಾವಧಿಯಲ್ಲಿ ಉಚ್ಚಾರಣೆ ಮಾಡುವ ಅಕ್ಷರಗಳು.
A) ಹ್ರಸ್ವ ಸ್ವರಗಳು
B) ಧೀರ್ಘ ಸ್ವರಗಳು
C) ಮಹಾಪ್ರಾಣಗಳು
D) ಯೋಗವಾಹಗಳು
ಉತ್ತರ: B
ವಿವರಣೆ: ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರಗಳು ದೀರ್ಘ ಸ್ವರಗಳು. ಅವುಗಳೆಂದರೆ ಆ, ಈ, ಊ, ಏ, ಐ, ಓ, ಔ. ಕನ್ನಡ ವರ್ಣಮಾಲೆಯಲ್ಲಿ ಈ ಏಳು ಅಕ್ಷರಗಳನ್ನು ದೀರ್ಘ ಸ್ವರಗಳೆಂದು ಕರೆಯುತ್ತಾರೆ, ಏಕೆಂದರೆ ಅವುಗಳನ್ನು ಉಚ್ಚರಿಸಲು ಎರಡು ಮಾತ್ರೆಯಷ್ಟು ಸಮಯ ತೆಗೆದುಕೊಳ್ಳುತ್ತದೆ.
48. ಅನುನಾಸಿಕ ಅಕ್ಷರಗಳ ಸಂಖ್ಯೆ.
A) 3
B) 4
C) 5
D) 6
ಉತ್ತರ: C
ವಿವರಣೆ: ಕನ್ನಡದಲ್ಲಿ ಐದು ಅನುನಾಸಿಕ ಅಕ್ಷರಗಳಿವೆ: ಙ್, ಞ್, ಣ್, ನ್, ಮತ್ತು ಮ್. ಈ ಅಕ್ಷರಗಳನ್ನು ಮೂಗಿನ ಸಹಾಯದಿಂದ ಉಚ್ಚರಿಸಲಾಗುತ್ತದೆ.
49. ಇದು ವಿಜಾತೀಯ ಒತ್ತಕ್ಷರವಲ್ಲದ ಪದವಾಗಿದೆ.
A) ಸಂಸ್ಕೃತ
B) ಅಕ್ಷರ
C) ಕನ್ನಡ
D) ಪ್ರಾಕೃತ
ಉತ್ತರ: C
ವಿವರಣೆ: ಬೇರೆ ಬೇರೆ ವ್ಯಂಜನಗಳನ್ನು ಹೊಂದಿರುವ ಒತ್ತಕ್ಷರಗಳನ್ನು ವಿಜಾತೀಯ ಒತ್ತಕ್ಷರಗಳೆಂದು ಕರೆಯಲಾಗುತ್ತದೆ.
50. ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು.
A) ಒತ್ತಕ್ಷರಗಳು
B) ಮಹಾಪ್ರಾಣಗಳು
C) ಸಂಯುಕ್ತಾಕ್ಷರಗಳು
D) ಅಲ್ಪಪ್ರಾಣಗಳು
ಉತ್ತರ: D
ವಿವರಣೆ: ಕಡಿಮೆ ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳಿಗೆ ಅಲ್ಪಪ್ರಾಣ ಎನ್ನುವರು. ಅಲ್ಪಪ್ರಾಣಗಳು ಒಟ್ಟು 10.
51. ಅನುನಾಸಿಕ ಅಕ್ಷರಗಳು.
A) ಙ್, ಞ್, ಣ್, ನ್, ಮ್
B) ಕ್ ಚ್ ಟ್ ತ್ ಪ್
C) ಖ್ ಛ್ ಠ್ ಥ್ ಫ್
D) ಅ,ಇ,ಉ,ಋ,ಎ,ಒ
ಉತ್ತರ: A
ವಿವರಣೆ: ಕನ್ನಡದಲ್ಲಿ ಐದು ಅನುನಾಸಿಕ ಅಕ್ಷರಗಳಿವೆ: ಙ್, ಞ್, ಣ್, ನ್, ಮತ್ತು ಮ್. ಈ ಅಕ್ಷರಗಳನ್ನು ಮೂಗಿನ ಸಹಾಯದಿಂದ ಉಚ್ಚರಿಸಲಾಗುತ್ತದೆ.
52. ಕನ್ನಡದಲ್ಲಿ ಹ್ರಸ್ವಸ್ವರಗಳ ಸಂಖ್ಯೆ ಎಷ್ಟು?
A) 5
B) 6
C) 7
D) 8
ಉತ್ತರ: B
ವಿವರಣೆ: ಅ, ಇ, ಉ, ಋ, ಎ, ಮತ್ತು ಒ. — ಇವು ಹ್ರಸ್ವಸ್ವರಗಳು.
53. ಕನ್ನಡದಲ್ಲಿ ದೀರ್ಘಸ್ವರಗಳ ಸಂಖ್ಯೆ ಎಷ್ಟು?
A) 5
B) 6
C) 7
D) 8
ಉತ್ತರ: C
ವಿವರಣೆ: ಆ, ಈ, ಊ, ಏ, ಐ, ಓ, ಔ – ಇವು ದೀರ್ಘಸ್ವರಗಳು.
54. ಕನ್ನಡದಲ್ಲಿ ದೀರ್ಘಸ್ವರಗಳನ್ನು ಹೇಗೆ ಉಚ್ಚರಿಸಲಾಗುತ್ತದೆ?
A) ಕಡಿಮೆ ಕಾಲ
B) ಹೆಚ್ಚು ಕಾಲ
C) ಉಚ್ಛಾರವಿಲ್ಲ
D) ಮಧ್ಯಮ ಕಾಲ
ಉತ್ತರ: B
ವಿವರಣೆ: ದೀರ್ಘಸ್ವರಗಳನ್ನು ಹೆಚ್ಚು ಕಾಲ ಉಚ್ಚರಿಸಲಾಗುತ್ತದೆ.
55. ಕನ್ನಡದಲ್ಲಿ ಹ್ರಸ್ವಸ್ವರಗಳನ್ನು ಹೇಗೆ ಉಚ್ಚರಿಸಲಾಗುತ್ತದೆ?
A) ಕಡಿಮೆ ಕಾಲ
B) ಹೆಚ್ಚು ಕಾಲ
C) ಮಧ್ಯಮ ಕಾಲ
D) ಸ್ಪಷ್ಟವಿಲ್ಲ
ಉತ್ತರ: A
ವಿವರಣೆ: ಹ್ರಸ್ವಸ್ವರಗಳನ್ನು ಸ್ವಲ್ಪಕಾಲ ಮಾತ್ರ ಉಚ್ಚರಿಸಲಾಗುತ್ತದೆ.
56. “ಅ” ಯಾವ ಸ್ವರಕ್ಕೆ ಸೇರುತ್ತದೆ?
A) ಹ್ರಸ್ವ
B) ದೀರ್ಘ
C) ಮಹಾಪ್ರಾಣ
D) ಅಲ್ಪಪ್ರಾಣ
ಉತ್ತರ: A
ವಿವರಣೆ: “ಅ” ಹ್ರಸ್ವಸ್ವರವಾಗಿದೆ.
57. “ಆ” ಯಾವ ಸ್ವರಕ್ಕೆ ಸೇರುತ್ತದೆ?
A) ಹ್ರಸ್ವ
B) ದೀರ್ಘ
C) ಮಹಾಪ್ರಾಣ
D) ಯೋಗವಾಹಕ
ಉತ್ತರ: B
ವಿವರಣೆ: “ಆ” ದೀರ್ಘಸ್ವರವಾಗಿದೆ.
58. “ಋ” ಯಾವ ಸ್ವರವಾಗಿದೆ?
A) ಹ್ರಸ್ವ
B) ದೀರ್ಘ
C) ಮಹಾಪ್ರಾಣ
D) ಅಲ್ಪಪ್ರಾಣ
ಉತ್ತರ: A
ವಿವರಣೆ: “ಋ” ಹ್ರಸ್ವಸ್ವರವಾಗಿದೆ.
59. “ಊ” ಯಾವ ಸ್ವರವಾಗಿದೆ?
A) ಹ್ರಸ್ವ
B) ದೀರ್ಘ
C) ಯೋಗವಾಹಕ
D) ಅಲ್ಪಪ್ರಾಣ
ಉತ್ತರ: B
ವಿವರಣೆ: “ಊ” ದೀರ್ಘಸ್ವರ.
60. “ಏ” ಯಾವ ಸ್ವರವಾಗಿದೆ?
A) ಹ್ರಸ್ವ
B) ದೀರ್ಘ
C) ಯೋಗವಾಹಕ
D) ಅಲ್ಪಪ್ರಾಣ
ಉತ್ತರ: B
ವಿವರಣೆ: “ಏ” ದೀರ್ಘಸ್ವರ.
61. “ಐ” ಸ್ವರವನ್ನು ಯಾವ ವರ್ಗದಲ್ಲಿ ಸೇರಿಸಲಾಗಿದೆ?
A) ಹ್ರಸ್ವ
B) ಅಲ್ಪಪ್ರಾಣ
C) ಸಂಧ್ಯಕ್ಷರ
D) ಯಾವುದು ಅಲ್ಲ
ಉತ್ತರ: C
ವಿವರಣೆ: “ಐ” ಮತ್ತು “ಔ” ಮಾತ್ರ ಸಂಧ್ಯಕ್ಷರಗಳು.
62. “ಔ” ಸ್ವರವನ್ನು ಯಾವ ವರ್ಗದಲ್ಲಿ ಸೇರಿಸಲಾಗಿದೆ?
A) ಹ್ರಸ್ವ
B) ಮಹಾಪ್ರಾಣ
C) ಸಂಧ್ಯಕ್ಷರ
D) ಯಾವುದು ಅಲ್ಲ
ಉತ್ತರ: C
ವಿವರಣೆ: “ಐ” ಮತ್ತು “ಔ” ಮಾತ್ರ ಸಂಧ್ಯಕ್ಷರಗಳು.
63. ಕನ್ನಡದಲ್ಲಿ ಒಟ್ಟು ಎಷ್ಟು ಸಂಧ್ಯಕ್ಷರಗಳಿವೆ?
A) 1
B) 2
C) 3
D) 4
ಉತ್ತರ: B
ವಿವರಣೆ: “ಐ” ಮತ್ತು “ಔ” ಮಾತ್ರ ಸಂಧ್ಯಕ್ಷರಗಳು.
64.ದೀರ್ಘ ಸ್ವರಗಳು : 07 : : ಹ್ರಸ್ವಸ್ವರಗಳು : ————
A) 7
B) 6
C) 10
D) 3
ಉತ್ತರ: B
ವಿವರಣೆ: ಹ್ರಸ್ವಸ್ವರಗಳು ಎಂದರೆ ಒಂದು ಮಾತ್ರೆ (ಛಂದಸ್ಸು) ಕಾಲಾವಧಿಯಲ್ಲಿ ಉಚ್ಚರಿಸುವ ಸ್ವರಗಳು.
65. ಕನ್ನಡದಲ್ಲಿ ಅನುಸ್ವಾರ ಮತ್ತು ವಿಸರ್ಗಗಳನ್ನು ಹೀಗೆ ಕರೆಯುತ್ತಾರೆ?
A) ವ್ಯಂಜನಗಳು
B) ಸ್ವರಗಳು
C) ಯೋಗವಾಹಗಕಳು
D) ಅನುನಾಸಿಕಗಳು
ಉತ್ತರ: C
ವಿವರಣೆ: ಯೋಗವಾಹಕಗಳು = ಅಂ (ಅನುಸ್ವಾರ) + ಅಃ (ವಿಸರ್ಗ).
66. ಇದು ಒತ್ತಕ್ಷರವಲ್ಲದ ಪದವಾಗಿದೆ.
A) ಪಾತ್ರ
B) ಗೃಹ
C) ಕರ್ತೃ
D) ಪ್ರಾಕೃತ
ಉತ್ತರ: B
ವಿವರಣೆ: ಒತ್ತಕ್ಷರ ಎಂದರೆ ಎರಡು ಅಥವಾ ಹೆಚ್ಚು ಅಕ್ಷರಗಳು ಒಟ್ಟಾಗಿ ಸೇರಿ ಒಂದು ಹೊಸ ಅಕ್ಷರವನ್ನು ರೂಪಿಸುವುದು.
67. ಇದು ವಿಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ ಅಲ್ಲ.
A) ಸಂಯುಕ್ತ
B) ಅಣ್ಣ
C) ರಸ್ತೆ
D) ದ್ರಾವಿಡ
ಉತ್ತರ: B
ವಿವರಣೆ: ಬೇರೆ ಬೇರೆ ವ್ಯಂಜನಗಳನ್ನು ಹೊಂದಿರುವ ಸಂಯುಕ್ತಾಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳೆಂದು ಕರೆಯಲಾಗುತ್ತದೆ.
68. ಇದು ಸಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ.
A) ರಸ್ತೆ
B) ಅಕ್ಷರ
C) ಕನ್ನಡ
D) ದ್ರಾವಿಡ
ಉತ್ತರ: C
ವಿವರಣೆ: ಒಂದೇ ವ್ಯಂಜನವು ಎರಡು ಬಾರಿ ಸೇರಿಕೊಂಡಾಗ ಅದು ಸಜಾತೀಯ ಸಂಯುಕ್ತಾಕ್ಷರ ಅಥವಾ ದ್ವಿತ್ವಾಕ್ಷರ ಎನಿಸಿಕೊಳ್ಳುತ್ತದೆ. ಉದಾಹರಣೆಗೆ, ‘ಅಣ್ಣ’ ಪದದಲ್ಲಿ ‘ಣ’ ಅಕ್ಷರ ಎರಡು ಸಲ ಸೇರಿದೆ.
69. ಇದು ವಿಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ.
A) ಅಪ್ಪ
B) ಅಮ್ಮ
C) ರಸ್ತೆ
D) ತಮ್ಮ
ಉತ್ತರ: C
ವಿವರಣೆ:‘ಅಕ್ಷರ’ ಎಂಬ ಪದದಲ್ಲಿ ‘ಕ’ ಮತ್ತು ‘ಷ’ ಎಂಬ ಎರಡು ಬೇರೆ ಬೇರೆ ವ್ಯಂಜನಗಳು ಸೇರಿವೆ.
70. “ಙ್” ಯಾವ ವರ್ಗಕ್ಕೆ ಸೇರುತ್ತದೆ?
A) ಕ ವರ್ಗ
B) ಚ ವರ್ಗ
C) ತ ವರ್ಗ
D) ಪ ವರ್ಗ
ಉತ್ತರ: A
ವಿವರಣೆ: ಕ್ ಖ್ ಗ್ ಘ್ ಙ್ — ಕ ವರ್ಗ ವ್ಯಂಜನಗಳು.
71. “ಞ್” ಯಾವ ವರ್ಗಕ್ಕೆ ಸೇರಿದೆ?
A) ಚ ವರ್ಗ
B) ಟ ವರ್ಗ
C) ತ ವರ್ಗ
D) ಪವ ರ್ಗ
ಉತ್ತರ: A
ವಿವರಣೆ: ಚ್ ಛ್ ಜ್ ಝ್ ಞ್ — ಚ ವರ್ಗ ವ್ಯಂಜನಗಳು.
72. “ಣ್” ಯಾವ ವರ್ಗಕ್ಕೆ ಸೇರಿದೆ?
A) ಟ ವರ್ಗ
B) ತ ವರ್ಗ
C) ಚ ವರ್ಗ
D) ಪ ವರ್ಗ
ಉತ್ತರ: A
ವಿವರಣೆ: ಟ್ ಠ್ ಡ್ ಢ್ ಣ್ — ಟ ವರ್ಗ ವ್ಯಂಜನಗಳು.
73. “ನ್” ಯಾವ ವರ್ಗಕ್ಕೆ ಸೇರಿದೆ?
A) ಟ ವರ್ಗ
B) ತ ವರ್ಗ
C) ಚ ವರ್ಗ
D) ಪ ವರ್ಗ
ಉತ್ತರ: B
ವಿವರಣೆ:ತ್ ಥ್ ದ್ ಧ್ ನ್ — ತ ವರ್ಗ ವ್ಯಂಜನಗಳು.
74. “ಮ್” ಯಾವ ವರ್ಗಕ್ಕೆ ಸೇರಿದೆ?
A) ಟ ವರ್ಗ
B) ತ ವರ್ಗ
C) ಪ ವರ್ಗ
D) ಚ ವರ್ಗ
ಉತ್ತರ: C
ವಿವರಣೆ: ಪ್ ಫ್ ಬ್ ಭ್ ಮ್ — ಪ ವರ್ಗ ವ್ಯಂಜನಗಳು.
75. “ಗ್” ಯಾವ ವರ್ಗಕ್ಕೆ ಸೇರಿದೆ?
A) ಟ ವರ್ಗ
B) ಕ ವರ್ಗ
C) ಪ ವರ್ಗ
D) ಚ ವರ್ಗ
ಉತ್ತರ: B
ವಿವರಣೆ: ಕ-ವರ್ಗ = ಕ್ ಖ್ ಗ್ ಘ್ ಙ್
76. ಕನ್ನಡದಲ್ಲಿ “ಕ್ಷ” ಯಾವ ವರ್ಗಕ್ಕೆ ಸೇರಿದೆ?
A) ಕ ವರ್ಗ
B) ಚ ವರ್ಗ
C) ವಿಶೇಷ
D) ಮಹಾಪ್ರಾಣ
ಉತ್ತರ: C
ವಿವರಣೆ: “ಕ್ಷ” ಒಂದು ಸಂಯುಕ್ತಾಕ್ಷರವಾಗಿದ್ದು, ವಿಶೇಷ ವ್ಯಂಜನವೆಂದು ಪರಿಗಣಿಸಲಾಗಿದೆ.
77. ವರ್ಗದ ದ್ವಿತೀಯ ಮತ್ತು ಚತುರ್ಥಿ ಅಕ್ಷರಗಳಿಗೆ ಹೀಗೆ ಕರೆಯುವರು.
A) ಮಹಾಪ್ರಾಣ
B) ಅಲ್ಪಪ್ರಾಣ
C) ಅನುನಾಸಿಕ
D) ಯೋಗವಾಹಕ
ಉತ್ತರ: A
ವಿವರಣೆ: ವರ್ಗದ ದ್ವಿತೀಯ ಮತ್ತು ಚತುರ್ಥಿ ಅಕ್ಷರಗಳಿಗೆ ಮಹಾಪ್ರಾಣಾಕ್ಷರಗಳು ಎಂದು ಕರೆಯುವರು.
78. ಈ ಕೆಳಗಿನವುಗಳಲ್ಲಿ ಯಾವುದು ಸ್ವರವಲ್ಲ?
A) ಏ
B) ಐ
C) ಔ
D) ಙ್
ಉತ್ತರ: D
ವಿವರಣೆ: ‘ಙ್’ ಒಂದು ವ್ಯಂಜನ ಅಕ್ಷರ (‘ಕ’ ವರ್ಗದ ಅನುನಾಸಿಕ). ಏ, ಐ, ಔ ಸ್ವರಗಳು.
79. ‘ಓ’ ಅಕ್ಷರದ ಕಾಗುಣಿತ ಯಾವುದು?
A) ೊ
B) ೋ
C) ೌ
D) ೈ
ಉತ್ತರ: B
ವಿವರಣೆ: ‘ಓ’ ಸ್ವರದ ಕಾಗುಣಿತ ‘ೋ’. ಉದಾ: ಕೋಡಿ (ಕ್ + ಓ = ಕೋ).
80. ‘ಒ’ ಸ್ವರದ ಕಾಗುಣಿತ ಯಾವುದು?
A) ೊ
B) ೋ
C) ೌ
D) ೇ
ಉತ್ತರ: A
ವಿವರಣೆ: ‘ಒ’ ಸ್ವರದ ಕಾಗುಣಿತ ‘ೊ’. ಉದಾ: ಕೊಟೆ (ಕ್ + ಒ = ಕೊ).
81. ‘ಚೇತನ’ ಪದದಲ್ಲಿ ‘ಚೇ’ ಎಂಬುದರಲ್ಲಿ ಯಾವ ಸ್ವರದ ಕಾಗುಣಿತ ಬಂದಿದೆ?
A) ಏ
B) ಐ
C) ಎ
D) ಈ
ಉತ್ತರ: A
ವಿವರಣೆ: ಚೇ = ಚ್ + ಏ. ಇಲ್ಲಿ ‘ಏ’ ಸ್ವರದ ಕಾಗುನಿತ ‘ೇ’ ಬಳಸಲಾಗಿದೆ.
82. ವರ್ಗದ ಪ್ರಥಮ ಮತ್ತು ದ್ವಿತೀಯ ಅಕ್ಷರಗಳಿಗೆ ಹೀಗೆ ಕರೆಯುತ್ತಾರೆ.
A) ಮಹಾಪ್ರಾಣ
B) ಅಲ್ಪಪ್ರಾಣ
C) ಅನುನಾಸಿಕ
D) ಯೋಗವಾಹಕ
ಉತ್ತರ: B
ವಿವರಣೆ:ವರ್ಗದ ಪ್ರಥಮ ಮತ್ತು ದ್ವಿತೀಯ ಅಕ್ಷರಗಳಿಗೆ ‘ಅಲ್ಪಪ್ರಾಣಾಕ್ಷರಗಳು’ಎಂದು ಕರೆಯುವರು.
83. ‘ರ್’ ಮತ್ತು ‘ಥ’ ಸೇರಿದಾಗ ಯಾವ ಒತ್ತಕ್ಷರವಾಗುತ್ತದೆ?
A) ರ್ಥ
B) ಥ್ರ
C) ರ್ತ
D) ತ್ರ
ಉತ್ತರ: A
ವಿವರಣೆ: ‘ರ್’ ಮತ್ತು ‘ಥ’ ಸೇರಿದಾಗ ‘ರ್ಥ’ ಒತ್ತಕ್ಷರವಾಗುತ್ತದೆ.
84. ಕನ್ನಡದಲ್ಲಿ ಅತಿ ಹೆಚ್ಚು ಬಳಕೆಯಾಗುವ ಅಕ್ಷರ ಯಾವುದು?
A) ಅ
B) ಕ
C) ಮ
D) ನ
ಉತ್ತರ: A
ವಿವರಣೆ: “ಅ” ಸ್ವರವು ಕನ್ನಡದಲ್ಲಿ ಅತಿ ಹೆಚ್ಚು ಬಳಸಲಾಗುತ್ತದೆ.
85. ಕನ್ನಡದಲ್ಲಿ ಅತಿ ಕಡಿಮೆ ಬಳಕೆಯಾಗುವ ಅಕ್ಷರ ಯಾವುದು?
A) ಕ
B) ಳ
C) ಕ್ಷ
D) ಙ
ಉತ್ತರ: D
ವಿವರಣೆ: “ಙ” ಅಕ್ಷರವು ಅತಿ ಕಡಿಮೆ ಬಳಸಲ್ಪಡುವ ವ್ಯಂಜನ.
86. “ಚಿಟ್ಟೆ” ಪದದಲ್ಲಿ ಎಷ್ಟು ಒತ್ತಕ್ಷರಗಳಿವೆ?
A) 0
B) 1
C) 2
D) 3
ಉತ್ತರ: B
ವಿವರಣೆ: ಟ್ಟ ಒಂದು ಒತ್ತಕ್ಷರ; ಉಳಿದೆಲ್ಲ ಸಾಮಾನ್ಯ ಅಕ್ಷರ.
87. ‘ಪ’ ವರ್ಗದ ಅಕ್ಷರಗಳ ಉಚ್ಚಾರಣಾ ಸ್ಥಾನ ಯಾವುದು?
A) ಕಂಠ
B) ತಾಲು
C) ಮೂರ್ಧಾ
D) ಓಷ್ಠ
ಉತ್ತರ: D
ವಿವರಣೆ: ‘ಪ’ ವರ್ಗದ ಅಕ್ಷರಗಳು ಓಷ್ಠದಿಂದ (ತುಟಿಗಳಿಂದ) ಉಚ್ಚರಿಸಲ್ಪಡುತ್ತವೆ. ಆದ್ದರಿಂದ ಇವುಗಳನ್ನು ‘ಓಷ್ಠ್ಯ’ ವ್ಯಂಜನಗಳೆನ್ನುತ್ತಾರೆ.
88. ‘ತ’ ವರ್ಗದ ಅಕ್ಷರಗಳ ಉಚ್ಚಾರಣಾ ಸ್ಥಾನ ಯಾವುದು?
A) ಕಂಠ
B) ದಂತ
C) ಮೂರ್ಧಾ
D) ಓಷ್ಠ
ಉತ್ತರ: B
ವಿವರಣೆ: ತ’ ವರ್ಗದ ಅಕ್ಷರಗಳು ದಂತಗಳಿಂದ (ಹಲ್ಲುಗಳಿಂದ) ಉಚ್ಚರಿಸಲ್ಪಡುತ್ತವೆ. ಆದ್ದರಿಂದ ಇವುಗಳನ್ನು ‘ದಂತ್ಯ’ ವ್ಯಂಜನಗಳೆನ್ನುತ್ತಾರೆ.
89. ‘ಟ’ ವರ್ಗದ ಅಕ್ಷರಗಳ ಉಚ್ಚಾರಣಾ ಸ್ಥಾನ ಯಾವುದು?
A) ಕಂಠ
B) ದಂತ
C) ಮೂರ್ಧಾ
D) ಓಷ್ಠ
ಉತ್ತರ: C
ವಿವರಣೆ: ‘ಟ’ ವರ್ಗದ ಅಕ್ಷರಗಳು ಮೂರ್ಧನ್ಯದಿಂದ (ನಾಲಗೆಯಿಂದ ಅಂಚಿನಿಂದ ಅಂಗುಲಿಯ ಭಾಗ ತಾಗಿ) ಉಚ್ಚರಿಸಲ್ಪಡುತ್ತವೆ. ಆದ್ದರಿಂದ ಇವುಗಳನ್ನು ‘ಮೂರ್ಧನ್ಯ’ ವ್ಯಂಜನಗಳೆನ್ನುತ್ತಾರೆ.
90. ‘ಚ’ ವರ್ಗದ ಅಕ್ಷರಗಳ ಉಚ್ಚಾರಣಾ ಸ್ಥಾನ ಯಾವುದು?
A) ಕಂಠ
B) ತಾಲು
C) ಮೂರ್ಧಾ
D) ಓಷ್ಠ
ಉತ್ತರ: B
ವಿವರಣೆ: ‘ಚ’ ವರ್ಗದ ಅಕ್ಷರಗಳು ತಾಲುವಿನಿಂದ ಉಚ್ಚರಿಸಲ್ಪಡುತ್ತವೆ. ತಾಲು ಎಂದರೆ ಅಂಗಳು. ಅಲ್ಲಿ ಉಚ್ಚಾರವಾಗುವ ಅಕ್ಷರಗಳು ತಾಲವ್ಯಗಳು.
91. ‘ಕ’ ವರ್ಗದ ಅಕ್ಷರಗಳ ಉಚ್ಚಾರಣಾ ಸ್ಥಾನ ಯಾವುದು?
A) ಕಂಠ
B) ತಾಲು
C) ಮೂರ್ಧಾ
D) ಓಷ್ಠ
ಉತ್ತರ: A
ವಿವರಣೆ: ‘ಕ’ ವರ್ಗದ ಅಕ್ಷರಗಳು ಕಂಠದಿಂದ ಉಚ್ಚರಿಸಲ್ಪಡುತ್ತವೆ. ಆದ್ದರಿಂದ ಇವುಗಳನ್ನು ‘ಕಂಠ್ಯ’ ವ್ಯಂಜನಗಳೆನ್ನುತ್ತಾರೆ.
92. ಮೂರು ಮಾತ್ರ ಕಾಲದಲ್ಲಿ ಉಚ್ಚರಿಸುವ ಸ್ವರಗಳು.
A) ಹ್ರಸ್ವಸ್ವರ
B) ದೀರ್ಘ ಸ್ವರ
C) ಪ್ಲುತಸ್ವರ
D) ಅನುಸ್ವರ
ಉತ್ತರ: C
ವಿವರಣೆ: ಮೂರು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತಸ್ವರ ಎನ್ನುವರು.
ಉದಾಹರಣೆ :ದೇವರೇss.ಅಯ್ಯೋss
93. ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳು.
A) ಸಂಯುಕ್ತಾಕ್ಷರಗಳು
B) ಸಂಧಿಗಳು
C) ಗುಣಿತಾಕ್ಷರಗಳು
D) ಸಮಾಸಗಳು
ಉತ್ತರ: C
ವಿವರಣೆ: “ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ.”
94. ತ್ರಿಶೂಲ ಪದವು ಇದಕ್ಕೆ ಉದಾಹರಣೆ.
A) ವಿಜಾತೀಯ ಸಂಯುಕ್ತಾಕ್ಷರ ಪದ
B) ಸಜಾತೀಯ ಸಂಯುಕ್ತಾಕ್ಷರ ಪದ
C) ಅನುನಾಸಿಕ ಪದ
D) ಯೋಗವಾಹಕ ಪದ
ಉತ್ತರ: A
ವಿವರಣೆ: ಉದಾ: ಶ್ರವಣ ಈ ಪದದಲ್ಲಿ ಶ್ರ ಎಂಬ ಅಕ್ಷರವನ್ನು ಗಮನಿಸಿ ಇಲ್ಲಿ ಶ್+ರ್+ಅ ಎಂಬ ಮೂರು ಅಕ್ಷರಗಳಿವೆ. ಇವುಗಳಲ್ಲಿ ಮೊದಲೆರಡು (ಶ್+ರ್) ಬೇರೆ ಬೇರೆ ರೀತಿಯ ವ್ಯಂಜನಗಳಾಗಿವೆ. ಆದ್ದರಿಂದ ಶ್ರ ಎಂಬುದು ವಿಜಾತೀಯ ಸಂಯುಕ್ತಾಕ್ಷರವಾಗಿದೆ
95. ಕೆಳಗಿನ ಪದಗಳಲ್ಲಿ ಸಂಯುಕ್ತಾಕ್ಷರ ಇಲ್ಲದ ಪದ ಯಾವುದು?
A) ಮನೆ
B) ಸ್ತ್ರೀ
C) ಜ್ಞಾನ
D) ಕ್ಷಮೆ
ಉತ್ತರ: A
ವಿವರಣೆ: ಸಂಯುಕ್ತಾಕ್ಷರವು ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಒಂದು ಪದವನ್ನು ರೂಪಿಸುವ ಪದವಾಗಿದೆ. ಉದಾಹರಣೆಗೆ, ‘ದಟ್ಟ’ ಎಂಬ ಪದದಲ್ಲಿ ‘ದ’ ಮತ್ತು ‘ಟ’ ವ್ಯಂಜನಗಳು ಸೇರಿವೆ, ಮತ್ತು ‘ಪತ್ರ’ ಎಂಬ ಪದದಲ್ಲಿ ‘ಪ’ ಮತ್ತು ‘ತ್ರ’ ವ್ಯಂಜನಗಳು ಸೇರಿವೆ.
96. ಇದರಲ್ಲಿ ಯಾವುದು ವಿಸರ್ಗ ಪದ.
A) ಛಂದಸ್ಸು
B) ಮನ್ವಂತರ
C) ಅಂತರ
D) ದುಃಖ
ಉತ್ತರ: D
ವಿವರಣೆ: ವಿಸರ್ಗ:- (ಅಃ) – ಇಲ್ಲಿ ‘ಅ’ ಅಕ್ಷರದ ಜೊತೆಯಲ್ಲಿರುವ ಎರಡು ಸೊನ್ನೆಗಳ ಸಂಕೇತ ಮಾತ್ರ ವಿಸರ್ಗವಾಗಿದೆ.
97. ವರ್ಗೀಯ ವ್ಯಂಜನಗಳು ಇರುವ ಪದ ಇದಲ್ಲ.
A) ಹವಳ
B) ಚಮಚ
C) ಕದನ
D) ಮನನ
ಉತ್ತರ: A
ವಿವರಣೆ: ‘ಕ’ ಇಂದ ‘ಮ’ ವರೆಗಿನ 25 ಅಕ್ಷರಗಳನ್ನು ‘ವರ್ಗೀಯ ವ್ಯಂಜನಗಳು’ ಎಂದು ಕರೆಯಲಾಗುತ್ತದೆ.
98. ಇದರಲ್ಲಿ ಯಾವುದು ಅನುಸ್ವರ ಪದ.
A) ಶ್ರೀವಿಜಯ
B) ಪಂಪ
C) ರನ್ನ
D) ಜನ್ನ
ಉತ್ತರ: B
ವಿವರಣೆ: ಅನುಸ್ವಾರ:- (ಅಂ) – ಇಲ್ಲಿ ‘ಅ’ ಅಕ್ಷರದ ಜೊತೆಯಲ್ಲಿರುವ ‘O’ ಮಾತ್ರ ಅನುಸ್ವರವಾಗಿದೆ.
99. ಸಂತೋಷ ಎಂಬುವುದು
A) ವಿಸರ್ಗಪದ
B) ಒತ್ತಕ್ಷರಪದ
C) ಅನುಸ್ವರ ಪದ
D) ಅನುನಾಸಿಕ ಪದ
ಉತ್ತರ: C
ವಿವರಣೆ: ಅನುಸ್ವಾರ:- (ಅಂ) – ಇಲ್ಲಿ ‘ಅ’ ಅಕ್ಷರದ ಜೊತೆಯಲ್ಲಿರುವ ‘O’ ಮಾತ್ರ ಅನುಸ್ವರವಾಗಿದೆ.
100. ದೇವರೇss ಕ್ಕೆ_____ ಉದಾಹರಣೆ.
A) ಹ್ರಸ್ವಸ್ವರ
B) ದೀರ್ಘ ಸ್ವರ
C) ಪ್ಲುತಸ್ವರ
D) ಅನುಸ್ವರ
ಉತ್ತರ: C
ವಿವರಣೆ: ಪ್ಲುತಸ್ವರ:ಮೂರು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತಸ್ವರ ಎನ್ನುವರು.ಉದಾಹರಣೆ :ದೇವರೇss.ಅಯ್ಯೋss.
