1. ‘ಕ್ಷೇಮಸಮಾಚಾರ’ ಪದದ ಸಮಾನಾರ್ಥಕ ಪದವನ್ನು ಆರಿಸಿ.
A) ಕಂಟಕ
B) ಕುಶಲ
C) ಆಕ್ರೋಶ
D) ತಳಮಳ
ಉತ್ತರ: B
ವಿವರಣೆ: ಕ್ಷೇಮಸಮಾಚಾರ ಎಂದರೆ ಯೋಗಕ್ಷೇಮ. ಇದರ ಸಮಾನಾರ್ಥಕ ಕುಶಲ.
2. ‘ವದನ’ ಪದದ ಸಮಾನಾರ್ಥಕ ಪದ ಯಾವುದು?
A) ವಸನ
B) ಮೊರೆ
C) ನಯನ
D) ರೋಮ
ಉತ್ತರ: B
ವಿವರಣೆ: ವದನ ಎಂದರೆ ಮುಖ. ಸಮಾನಾರ್ಥಕ ಪದಗಳು: ಮೊಗ, ಮೊರೆ.
3. ‘ವಾರಿಧಿ’ ಪದಕ್ಕೆ ಸಮಾನಾರ್ಥಕ ಪದಗಳ ಗುಂಪು ಯಾವುದು?
A) ನೃಪ, ಅರಸ
B) ಲೋಕ, ಜಗತ್ತು
C) ಕಡಲು, ಸಾಗರ
D) ನೆತ್ತರು, ರುಧಿರ
ಉತ್ತರ: C
ವಿವರಣೆ: ವಾರಿಧಿ ಎಂದರೆ ಸಮುದ್ರ. ಇದರ ಸಮಾನಾರ್ಥಕ ಪದಗಳು ಕಡಲು, ಸಾಗರ.
4. ‘ಲೋಚನ’ ಪದದ ಸಮಾನಾರ್ಥಕ ಪದ ಯಾವುದು?
A) ಕೇಶ
B) ನಯನ
C) ಶಿರ
D) ವದನ
ಉತ್ತರ: B
ವಿವರಣೆ: ಲೋಚನ ಎಂದರೆ ಕಣ್ಣು. ಇದರ ಸಮಾನಾರ್ಥಕ ಪದಗಳು: ನಯನ, ಅಕ್ಷಿ.
5. ‘ಮುನ್ನಡೆ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಪ್ರಗತಿ
B) ಮಲಿನ
C) ಅನಾಹುತ
D) ಹಿಂಸೆ
ಉತ್ತರ: A
ವಿವರಣೆ: ಮುನ್ನಡೆ ಎಂದರೆ ಏಳಿಗೆ. ಇದರ ಸಮಾನಾರ್ಥಕ ಪದ ಪ್ರಗತಿ.
6. ಕೆಳಗಿನವುಗಳಲ್ಲಿ ‘ಭೂಮಿ’ ಪದಕ್ಕೆ ಹೊಂದಿಕೆಯಾಗದ ಸಮಾನಾರ್ಥಕ ಪದ ಯಾವುದು?
A) ವಸುಧೆ
B) ಧರೆ
C) ಇಳೆ
D) ತರು
ಉತ್ತರ: D
ವಿವರಣೆ: ತರು ಎಂದರೆ ಮರ. ಭೂಮಿಯ ಸಮಾನಾರ್ಥಕಗಳಲ್ಲ.
7. ‘ಪತಾಕೆ’ ಪದಕ್ಕೆ ಸಮಾನಾರ್ಥಕ ಪದಗಳ ಗುಂಪು ಯಾವುದು?
A) ಶರ, ಅಂಬು
B) ಧ್ವಜ, ಬಾವುಟ
C) ಲೋಚನ, ಅಕ್ಷಿ
D) ತರು, ದ್ರುಮ
ಉತ್ತರ: B
ವಿವರಣೆ: ಪತಾಕೆ ಎಂದರೆ ಧ್ವಜ.
8. ‘ವಸನ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಉಡುಗೆ
B) ವಚನ
C) ವನಜ
D) ದವಸ
ಉತ್ತರ: B
ವಿವರಣೆ: ವಸನ ಎಂದರೆ ಬಟ್ಟೆ. ಇದರ ಸಮಾನಾರ್ಥಕ ಪದ ಉಡುಗೆ.
9. ‘ವಿಭೂತಿ’ ಪದಕ್ಕೆ ಸಮಾನಾರ್ಥಕ ಪದಗಳಾದ ‘ಭಸ್ಮ’ ಮತ್ತು __ ನ್ನು ಆರಿಸಿ.
A) ಕಂಟಕ
B) ಬೂದಿ
C) ತಳಮಳ
D) ಪ್ರಾಣ
ಉತ್ತರ: B
ವಿವರಣೆ: ವಿಭೂತಿ ಎಂದರೆ ಬೂದಿ. ಇದರ ಸಮಾನಾರ್ಥಕ ಪದ ಭಸ್ಮ.
10. ‘ಚರ್ಚೆ’ ಪದದ ಸಮಾನಾರ್ಥಕ ಪದವನ್ನು ಆರಿಸಿ.
A) ಮೌನ
B) ವಿಭೂತಿ
C) ತರ್ಕ
D) ವಂದನೆ
ಉತ್ತರ: C
ವಿವರಣೆ: ಚರ್ಚೆ ಎಂದರೆ ವಿಚಾರ ವಿನಿಮಯ. ಸಮಾನಾರ್ಥಕ ಪದಗಳು: ವಾಗ್ವಾದ, ತರ್ಕ.
11. ‘ಕವಿದಿರುವ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ತೆರವುಗೊಳಿಸಿರುವ
B) ಆವರಿಸಿರುವ
C) ಕಟು
D) ಪ್ರಗತಿ
ಉತ್ತರ: B
ವಿವರಣೆ: ಕವಿದಿರುವ ಎಂದರೆ ಸಂಪೂರ್ಣವಾಗಿ ಹರಡಿರುವುದು. ಸಮಾನಾರ್ಥಕ ಪದ ಆವರಿಸಿರುವ.
12. ‘ಆಕ್ರೋಶ’ ಪದಕ್ಕೆ ಹೊಂದಿಕೆಯಾಗುವ ಸಮಾನಾರ್ಥಕ ಪದ ಯಾವುದು?
A) ಸಂತೋಷ
B) ಗರ್ಜನೆ
C) ನಗು
D) ವಂದನೆ
ಉತ್ತರ: B
ವಿವರಣೆ: ಆಕ್ರೋಶ ಎಂದರೆ ಕೋಪ. ಸಮಾನಾರ್ಥಕ ಪದಗಳು: ಗರ್ಜನೆ, ಕೋಪಿಸುವಿಕೆ.
13. ‘ದೌರ್ಜನ್ಯ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ದಬ್ಬಾಳಿಕೆ
B) ಮಾಲಿನ್ಯ
C) ಅವಲೋಕನ
D) ಸಂಕುಲ
ಉತ್ತರ: A
ವಿವರಣೆ: ದೌರ್ಜನ್ಯ ಎಂದರೆ ಬಲವಂತದ ವರ್ತನೆ. ಸಮಾನಾರ್ಥಕ ಪದ ದಬ್ಬಾಳಿಕೆ.
14. ‘ಮಾಲಿನ್ಯ ರಹಿತ’ ಪದಕ್ಕೆ ಸರಿಯಾದ ಸಮಾನಾರ್ಥಕ ಪದ.
A) ಕಲುಷಿತ
B) ಮಲಿನತೆಯಿಲ್ಲದ
C) ಗಲೀಜು
D) ಕೊಳೆಯುಳ್ಳ
ಉತ್ತರ: B
ವಿವರಣೆ: ಮಾಲಿನ್ಯ ರಹಿತ ಎಂದರೆ ಕೊಳೆಯಿಲ್ಲದ.
15. ‘ಸಂಕುಲ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ದ್ವೇಷ
B) ಏಕತ್ವ
C) ಸಮೂಹ
D) ತಾಣ
ಉತ್ತರ: C
ವಿವರಣೆ: ಸಂಕುಲ ಎಂದರೆ ಒಂದು ಜನಾಂಗ ಅಥವಾ ಗುಂಪು. ಸಮಾನಾರ್ಥಕ ಪದ ಸಮೂಹ.
16. ‘ಸಿಡಿದುಹೋಗು’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಚಿಮ್ಮು
B) ಸಂಗ್ರಹಿಸು
C) ಕಾಪಾಡು
D) ಮುದ್ದಾಡು
ಉತ್ತರ: A
ವಿವರಣೆ: ಸಿಡಿದುಹೋಗು ಎಂದರೆ ಸ್ಫೋಟಗೊಳ್ಳು. ಸಮಾನಾರ್ಥಕ ಪದ ಚಿಮ್ಮು.
17. ‘ಉದಯಿಸು’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಅಳಿಗು
B) ಮೂಡು
C) ಮಲಗು
D) ನಿಲ್ಲಿಸು
ಉತ್ತರ: B
ವಿವರಣೆ: ಉದಯಿಸು ಎಂದರೆ ಹುಟ್ಟು. ಸಮಾನಾರ್ಥಕ ಪದ ಮೂಡು.
18. ‘ಪರಿಶೀಲಿಸು’ ಎನ್ನುವುದಕ್ಕೆ ಸರಿಯಾದ ಅರ್ಥ ನೀಡುವ ಪದ ಯಾವುದು?
A) ಮೇಲುನೋಟಕ್ಕೆ ನೋಡುವುದು
B) ಸೂಕ್ಷ್ಮವಾಗಿ ವಿಚಾರಿಸಿ ನೋಡುವುದು
C) ಅಲಕ್ಷ್ಯ ಮಾಡುವುದು
D) ಸಂಪಾದಿಸುವುದು
ಉತ್ತರ: B
ವಿವರಣೆ: ಪರಿಶೀಲಿಸು ಎಂದರೆ ಗಮನವಿಟ್ಟು ನೋಡುವುದು.
19. ‘ಫಲವತ್ತತೆ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಸಾರವತ್ತಾದ
B) ಬಂಜರು
C) ಮಲಿನ
D) ಶುಷ್ಕ
ಉತ್ತರ: A
ವಿವರಣೆ: ಫಲವತ್ತತೆ ಎಂದರೆ ಫಲವುಳ್ಳ. ಸಮಾನಾರ್ಥಕ ಪದ ಸಾರವತ್ತಾದ.
20. ‘ಖಾರ’ ಪದಕ್ಕೆ ಸಮಾನಾರ್ಥಕ ಪದವನ್ನು ಆರಿಸಿ.
A) ಸಿಹಿ
B) ತೀಕ್ಷ್ಣ
C) ಕಷಾಯ
D) ತೃಪ್ತಿ
ಉತ್ತರ: B
ವಿವರಣೆ: ಖಾರ ಎಂದರೆ ಕಟು. ಸಮಾನಾರ್ಥಕ ಪದ ತೀಕ್ಷ್ಣ.
21. ‘ಧುತ್ತನೆ’ ಪದಕ್ಕೆ ಸಮಾನಾರ್ಥಕ ಪದವನ್ನು ಗುರುತಿಸಿ.
A) ತಡವಾಗಿ
B) ಏಕಾಏಕಿ
C) ಕ್ರಮಬದ್ಧವಾಗಿ
D) ನಿಧಾನವಾಗಿ
ಉತ್ತರ: B
ವಿವರಣೆ: ಧುತ್ತನೆ ಎಂದರೆ ದಿಢೀರನೆ ಅಥವಾ ಏಕಾಏಕಿ.
22. ‘ಉಪೇಕ್ಷೆ’ ಪದಕ್ಕೆ ಸಮಾನಾರ್ಥಕ ಪದವನ್ನು ಆರಿಸಿ.
A) ಗಮನಿಸುವಿಕೆ
B) ಅಲಕ್ಷ್ಯ
C) ಸಮ್ಮತಿ
D) ಪರಿಶೀಲನೆ
ಉತ್ತರ: B
ವಿವರಣೆ: ಉಪೇಕ್ಷೆ ಎಂದರೆ ನಿರ್ಲಕ್ಷಿಸುವುದು. ಸಮಾನಾರ್ಥಕ ಪದ ಅಲಕ್ಷ್ಯ.
23. ‘ಹಿಕ್ಕೆ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಹಕ್ಕಿಗಳ ಮಲ
B) ಧಾನ್ಯದವಸ
C) ಮೇವು
D) ಕೊಳಕು
ಉತ್ತರ: A
ವಿವರಣೆ: ಹಿಕ್ಕೆ ಎಂದರೆ ಹಕ್ಕಿಗಳು ವಿಸರ್ಜಿಸುವ ಮಲ.
24. ‘ಪ್ರೋತ್ಸಾಹಿಸು’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ನಿರುತ್ಸಾಹಗೊಳಿಸು
B) ಉತ್ತೇಜನ
C) ದೂರು
D) ಹತ್ತಿಕ್ಕುವುದು
ಉತ್ತರ: B
ವಿವರಣೆ: ಪ್ರೋತ್ಸಾಹಿಸು ಎಂದರೆ ಹರಿದುಂಬಿಸು. ಸಮಾನಾರ್ಥಕ ಪದ ಉತ್ತೇಜನ.
25. ‘ಕಸುಬು’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಉದ್ಯೋಗ
B) ವಿಶ್ರಾಂತಿ
C) ಅಳತೆ
D) ಭುಜ
ಉತ್ತರ: A
ವಿವರಣೆ: ಕಸುಬು ಎಂದರೆ ಕೆಲಸ. ಸಮಾನಾರ್ಥಕ ಪದ ಉದ್ಯೋಗ.
26. ‘ಸೀಳು’ ಪದಕ್ಕೆ ಸಮಾನಾರ್ಥಕವಾದ ಮತ್ತೊಂದು ಪದ ಯಾವುದು?
A) ಇರಿಸು
B) ಕತ್ತರಿಸು
C) ಸಲಹು
D) ಬಿತ್ತು
ಉತ್ತರ: B
ವಿವರಣೆ: ಸೀಳು ಎಂದರೆ ಕೊಯ್ಯ. ಸಮಾನಾರ್ಥಕ ಪದ ಕತ್ತರಿಸು..
27. ‘ತವಕಿಸು’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಆತುರಪಡು
B) ಮೌನ
C) ಶಾಂತ
D) ತೀರ್ಮಾನ
ಉತ್ತರ: A
ವಿವರಣೆ: ತವಕಿಸು ಎಂದರೆ ತರಾತುರಿ ಮಾಡು. ಸಮಾನಾರ್ಥಕ ಪದ ಆತುರಪಡು.
28. ‘ಅರಿವು’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ನಿರ್ಲಕ್ಷ್ಯ
B) ತಿಳುವಳಿಕೆ
C) ಜಂಬ
D) ತಳಮಳ
ಉತ್ತರ: B
ವಿವರಣೆ: ಅರಿವು ಎಂದರೆ ಜ್ಞಾನ. ಸಮಾನಾರ್ಥಕ ಪದ ತಿಳುವಳಿಕೆ.
29. ‘ಸಲಕರಣೆ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ದಿನಿಸಿ
B) ಉಪಕರಣ
C) ಮೇವು
D) ಸದ್ದು
ಉತ್ತರ: B
ವಿವರಣೆ: ಸಲಕರಣೆ ಎಂದರೆ ಸಾಧನ. ಇದರ ಸಮಾನಾರ್ಥಕ ಪದ ಉಪಕರಣ.
30. ‘ಅನಿವಾರ್ಯ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ತಪ್ಪಿಸಲಾಗದ
B) ಸುಲಭ
C) ಐಚ್ಛಿಕ
D) ಅನವಶ್ಯಕ
ಉತ್ತರ: A
ವಿವರಣೆ: ಅನಿವಾರ್ಯ ಎಂದರೆ ಅಗತ್ಯ. ಸಮಾನಾರ್ಥಕ ಪದ ತಪ್ಪಿಸಲಾಗದ.
31. ‘ಇರಿಸು’ ಪದಕ್ಕೆ ಸಮಾನಾರ್ಥಕ ಪದ ಯಾವುದು
A) ಹೇರು
B) ಕೊಯ್ಯು
C) ಹುಡುಕು
D) ಕವಿದಿರುವ
ಉತ್ತರ: A
ವಿವರಣೆ: ಇರಿಸು ಎಂದರೆ ಇಡು. ಇದರ ಸಮಾನಾರ್ಥಕ ಪದ ಹೇರು.
32. ‘ಕಂಡಿ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ತೂತು
B) ಸಮೀಪ
C) ತೋಳು
D) ಮಗ
ಉತ್ತರ: A
ವಿವರಣೆ: ಕಂಡಿ ಎಂದರೆ ರಂಧ್ರ. ಇದರ ಸಮಾನಾರ್ಥಕ ಪದ ತೂತು.
33. ‘ವನಜ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ತಾವರೆ
B) ಬನ
C) ನರ
D) ನವ
ಉತ್ತರ: A
ವಿವರಣೆ: ವನಜ ಎಂದರೆ ಕಮಲ. ಇದರ ಸಮಾನಾರ್ಥಕ ಪದ ತಾವರೆ.
34. ‘ಪರಿಮಳ’ ಪದಕ್ಕೆ ಸಮಾನಾರ್ಥಕ ಪದವನ್ನು ಆರಿಸಿ.
A) ಕಟು
B) ಸುವಾಸನೆ
C) ಗಲೀಜು
D) ತೀಕ್ಷ್ಣ
ಉತ್ತರ: B
ವಿವರಣೆ: ಪರಿಮಳ ಎಂದರೆ ಒಳ್ಳೆಯ ವಾಸನೆ. ಇದರ ಸಮಾನಾರ್ಥಕ ಪದ ಸುವಾಸನೆ.
35. ‘ತಾಕೀತು’ ಪದದ ಸಮಾನಾರ್ಥಕ ಪದಗಳು ಯಾವುವು?
A) ಆತುರ, ತರಾತುರಿ
B) ಕಟ್ಟಪ್ಪಣೆ, ಎಚ್ಚರಿಕೆ
C) ತುಳಿತ, ಹಿಂಸೆ
D) ಪ್ರಜ್ಞೆತಪ್ಪು, ಎಚ್ಚರತಪ್ಪು
ಉತ್ತರ: B
ವಿವರಣೆ: ತಾಕೀತು ಎಂದರೆ ಕಟ್ಟುನಿಟ್ಟಿನ ಆಜ್ಞೆ.
36. ‘ಶೋಷಣೆ’ ಪದಕ್ಕೆ ಸೂಕ್ತವಾದ ಸಮಾನಾರ್ಥಕ ಪದಗಳನ್ನು ಆರಿಸಿ.
A) ದಬ್ಬಾಳಿಕೆ, ಹಿಂಸೆ
B) ತುಳಿತ, ಹಿಂಸೆ
C) ಆಲಿಂಗನ, ತಬ್ಬಿಕೊಂಡು
D) ಗರ್ವ, ಒಣ ಆಡಂಬರ
ಉತ್ತರ: B
ವಿವರಣೆ: ಶೋಷಣೆ ಎಂದರೆ ತುಳಿಯುವಿಕೆ.
37. ‘ಯುದ್ಧ’ ಪದದ ಸಮಾನಾರ್ಥಕ ಪದಗಳನ್ನು ಗುರುತಿಸಿ.
A) ಕದನ, ರಣ, ಸಮರ
B) ತರು, ವೃಕ್ಷ, ಪಾದಪ
C) ಗ್ರಹ, ಸದನ, ನಿವಾಸ
D) ಸುತ, ಕುಮಾರ, ಸೂನು
ಉತ್ತರ: A
ವಿವರಣೆ: ಯುದ್ಧ ಎಂದರೆ ಹೋರಾಟ.
38. ‘ಮೂರ್ಛೆ’ ಪದದ ಸಮಾನಾರ್ಥಕ ಪದ ಯಾವುದು?
A) ಎಚ್ಚರ
B) ಪ್ರಜ್ಞೆತಪ್ಪು
C) ಆತುರ
D) ಹಿಗ್ಗು
ಉತ್ತರ: B
ವಿವರಣೆ: ಮೂರ್ಛೆ ಎಂದರೆ ಎಚ್ಚರ ತಪ್ಪುವುದು.
39. ‘ಅಧಿಪತಿ’ ಪದಕ್ಕೆ ಸಂಬಂಧಿಸಿದ ಸಮಾನಾರ್ಥಕ ಪದವನ್ನು ಆರಿಸಿ.
A) ಸೇವೆಗಾರ
B) ನಾಯಕ
C) ಸಹಾಯಕ
D) ಅನುಯಾಯಿ
ಉತ್ತರ: B
ವಿವರಣೆ: ಅಧಿಪತಿ ಎಂದರೆ ಆಳುವವನು ಅಥವಾ ನಾಯಕ.
40. ‘ರಾಕ್ಷಸ’ ಪದದ ಸಮಾನಾರ್ಥಕ ಪದವನ್ನು ಆರಿಸಿ.
A) ದೇವತೆ
B) ನರ
C) ದಾನವ
D) ಅಧಿಪತಿ
ಉತ್ತರ: C
ವಿವರಣೆ: ರಾಕ್ಷಸ ಎಂದರೆ ದುಷ್ಟ ಶಕ್ತಿ. ಸಮಾನಾರ್ಥಕ ಪದ ದಾನವ.
41. ‘ವೀಕ್ಷಿಸು’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಮಾತನಾಡು
B) ಅವಲೋಕಿಸು
C) ಶೋಧಿಸು
D) ತವಕಿಸು
ಉತ್ತರ: B
ವಿವರಣೆ: ವೀಕ್ಷಿಸು ಎಂದರೆ ಸೂಕ್ಷ್ಮವಾಗಿ ನೋಡುವುದು. ಸಮಾನಾರ್ಥಕ ಪದ ಅವಲೋಕಿಸು.
42. ‘ತೀರ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಸಾಗರ
B) ದಡ
C) ಬಾನು
D) ಹಲಗೆ
ಉತ್ತರ: B
ವಿವರಣೆ: ತೀರ ಎಂದರೆ ಜಲಮೂಲದ ಪಕ್ಕದ ನೆಲ. ಇದರ ಸಮಾನಾರ್ಥಕ ಪದ ದಡ.
43. ‘ಸ್ಪರ್ದೆ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಒಮ್ಮತ
B) ತಿಳುವಳಿಕೆ
C) ಪೈಪೋಟಿ
D) ಸಂಕುಲ
ಉತ್ತರ: C
ವಿವರಣೆ: ಸ್ಪರ್ದೆ ಎಂದರೆ ಪೈಪೋಟಿ.
44. ‘ಶ್ರಮ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಖುಷಿ
B) ಅಳತೆ
C) ದಣಿವು
D) ಪಕ್ಕ
ಉತ್ತರ: C
ವಿವರಣೆ: ಶ್ರಮ ಎಂದರೆ ಆಯಾಸ. ಇದರ ಸಮಾನಾರ್ಥಕ ಪದ ದಣಿವು.
45. ‘ನರ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ದಾನವ
B) ಮನುಷ್ಯ
C) ಅರಸ
D) ಉರಗ
ಉತ್ತರ: B
ವಿವರಣೆ: ನರ ಎಂದರೆ ಮನುಷ್ಯ ಅಥವಾ ಮಾನವ.
46. ‘ಚಿಕಿತ್ಸೆ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಶುಶ್ರೂಷೆ
B) ರೋಗ
C) ಉಪೇಕ್ಷೆ
D) ನಿರ್ಲಕ್ಷ್ಯ
ಉತ್ತರ: A
ವಿವರಣೆ: ಚಿಕಿತ್ಸೆ ಎಂದರೆ ಆರೈಕೆ. ಸಮಾನಾರ್ಥಕ ಪದ ಶುಶ್ರೂಷೆ.
47. ‘ಬಾಣ’ ಪದದ ಸಮಾನಾರ್ಥಕ ಪದಗಳ ಗುಂಪಿನ ಒಂದು ಪದ ಯಾವುದು?
A) ಹೆಗಲು
B) ಶರ
C) ಮಗು
D) ವಚನ
ಉತ್ತರ: B
ವಿವರಣೆ: ಬಾಣ ಎಂದರೆ ಅಂಬು, ಕಣೆ, ಕೊಲು. ಇದರ ಸಮಾನಾರ್ಥಕ ಪದ ಶರ.
48. ‘ಉರಗ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಹಾವು
B) ವನಜ
C) ನರ
D) ನಗ
ಉತ್ತರ: A
ವಿವರಣೆ: ಉರಗ ಎಂದರೆ ಸರ್ಪ. ಇದರ ಸಮಾನಾರ್ಥಕ ಪದ ಹಾವು.
49. ‘ವಚನ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಮಾತು
B) ವಸನ
C) ವನಜ
D) ಉರ
ಉತ್ತರ: A
ವಿವರಣೆ: ವಚನ ಎಂದರೆ ನುಡಿ. ಇದರ ಸಮಾನಾರ್ಥಕ ಪದ ಮಾತು.
50. ‘ಮಾಸ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ತಿಂಗಳು
B) ವಂದನೆ
C) ವೇಳೆ
D) ನಿತ್ಯ
ಉತ್ತರ: A
ವಿವರಣೆ: ಮಾಸ ಎಂದರೆ ತಿಂಗಳ ಅವಧಿ. ಇದರ ಸಮಾನಾರ್ಥಕ ಪದ ತಿಂಗಳು.
51. ‘ಪೈರು’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಧಾನ್ಯದ ಬೆಳೆ
B) ಬೀಜ
C) ಕಾಳು
D) ಕಡ್ಡಿ
ಉತ್ತರ: A
ವಿವರಣೆ: ಪೈರು ಎಂದರೆ ಕೃಷಿಯಲ್ಲಿನ ಬೆಳವಣಿಗೆ.
52. ‘ಮಸ್ತಕ’ ಪದಕ್ಕೆ ಸಮಾನಾರ್ಥಕ ಪದ ಯಾವುದು?
A) ಶಿರ
B) ಮನೆ
C) ಮನ
D) ಮಗಳು
ಉತ್ತರ: A
ವಿವರಣೆ: ಮಸ್ತಕ ಎಂದರೆ ತಲೆ. ಇದರ ಸಮಾನಾರ್ಥಕ ಪದ ಶಿರ.
53. ತೋಚದೆ ಪದಕ್ಕೆ ಹತ್ತಿರದ ಅರ್ಥ ನೀಡುವ ಪದ ಯಾವುದು?
A) ಜ್ಞಾನದಿಂದ
B) ದಿಕ್ಕು ಕಾಣದೆ
C) ಸ್ಪಷ್ಟವಾಗಿ
D) ಬೇಗನೆ
ಉತ್ತರ: B
ವಿವರಣೆ: ತೋಚದೆ ಎಂದರೆ ದಾರಿ/ದಿಕ್ಕು ಕಾಣದೆ.
54. ನಿತ್ಯ ಪದದ ಸಮಾನಾರ್ಥಕ ಪದ ಯಾವುದು?
A) ಅಪರೂಪಕ್ಕೆ
B) ಯಾವಾಗಲೂ
C) ನಿನ್ನೆ
D) ನಾಳೆ
ಉತ್ತರ: B
ವಿವರಣೆ: ನಿತ್ಯ ಎಂದರೆ ಪ್ರತಿದಿನ, ಯಾವಾಗಲೂ.
55. ತಾರೆ ಪದದ ಸಮಾನಾರ್ಥಕ ಪದ ಯಾವುದು?
A) ಗ್ರಹ
B) ನಕ್ಷತ್ರ
C) ಸೂರ್ಯ
D) ಚಂದ್ರ
ಉತ್ತರ: B
ವಿವರಣೆ: ತಾರೆ ಎಂದರೆ ನಕ್ಷತ್ರ ಅಥವಾ ಚುಕ್ಕೆ.
56. ಗಗನ ಪದದ ಸಮಾನಾರ್ಥಕ ಪದ ಯಾವುದು?
A) ಭೂಮಿ
B) ಆಕಾಶ
C) ಭೂಮಿ
D) ಎಲ್ಲವೂ ಸರಿಯಾಗಿದೆ
ಉತ್ತರ: B
ವಿವರಣೆ: ಗಗನ ಎಂದರೆ ಆಕಾಶ.
57. ನಯನ ಪದದ ಸಮಾನಾರ್ಥಕ ಪದ ಯಾವುದು?
A) ಬಾಯಿ
B) ಕೈ
C) ಕಣ್ಣು
D) ಕಾಲು
ಉತ್ತರ: C
ವಿವರಣೆ: ನಯನ ಎಂದರೆ ಕಣು ಅಥವಾ ಕಣ್ಣು.
58. ಉದಯ ಪದದ ಸಮಾನಾರ್ಥಕ ಪದ ಯಾವುದು?
A) ಮುಳುಗು
B) ಬೆಳಗು
C) ಇರುಳು
D) ಮಧ್ಯಾಹ್ನ
ಉತ್ತರ: B
ವಿವರಣೆ: ಉದಯ ಎಂದರೆ ಸೂರ್ಯ ಮೂಡುವ ಸಮಯ, ಬೆಳಗು.
59. ಬನ ಪದದ ಸಮಾನಾರ್ಥಕ ಪದ ಯಾವುದು?
A) ನದಿ
B) ವನ
C) ಮನೆ
D) ರಸ್ತೆ
ಉತ್ತರ: B
ವಿವರಣೆ: ಬನ ಎಂದರೆ ವನ (ಕಾಡು).
60. ಧರೆ ಪದದ ಸಮಾನಾರ್ಥಕ ಪದ ಯಾವುದು?
A) ಆಕಾಶ
B) ಭೂಮಿ
C) ನೀರು
D) ಮರ
ಉತ್ತರ: B
ವಿವರಣೆ: ಧರೆ ಎಂದರೆ ಭೂಮಿ.
61. ಮಲೆ ಪದದ ಸಮಾನಾರ್ಥಕ ಪದ ಯಾವುದು?
A) ಕಣಿವೆ
B) ಪರ್ವತ
C) ಬಯಲು
D) ನದಿ
ಉತ್ತರ: B
ವಿವರಣೆ: ಮಲೆ ಎಂದರೆ ಪರ್ವತ, ಬೆಟ್ಟ, ಅಥವಾ ಶಿಖರ.
62. ಮಡಿ ಪದವು ಯಾವುದನ್ನು ಸೂಚಿಸುತ್ತದೆ?
A) ಸ್ವಚ್ಛ
B) ಸಾವು
C) ಹುಟ್ಟು
D) ಏಳು
ಉತ್ತರ: B
ವಿವರಣೆ: ಮಡಿ ಎಂದರೆ ಸಾವು.
63. ಪರಿಮಿತಿ ಪದದ ಸಮಾನಾರ್ಥಕ ಪದ ಯಾವುದು?
A) ಅಪರಿಮಿತ
B) ಅಳತೆ
C) ವಿಸ್ತಾರ
D) ದೊಡ್ಡದು
ಉತ್ತರ: B
ವಿವರಣೆ: ಪರಿಮಿತಿ ಎಂದರೆ ಅಳತೆ.
64. ಹರ್ಷ ಪದದ ಸಮಾನಾರ್ಥಕ ಪದ ಯಾವುದು?
A) ದುಃಖ
B) ಖುಷಿ
C) ಕೋಪ
D) ಆತಂಕ
ಉತ್ತರ: B
ವಿವರಣೆ: ಹರ್ಷ ಎಂದರೆ ಖುಷಿ.
65. ಇಳೆ ಪದದ ಸಮಾನಾರ್ಥಕ ಪದ ಯಾವುದು?
A) ಆಕಾಶ
B) ಭೂಮಿ
C) ಪರ್ವತ
D) ಕಡಲು
ಉತ್ತರ: B
ವಿವರಣೆ: ಇಳೆ ಎಂದರೆ ಭೂಮಿ.
66. ತಾವರೆ ಪದದ ಸಮಾನಾರ್ಥಕ ಪದ ಯಾವುದು?
A) ಗುಲಾಬಿ
B) ವನಜ
C) ಮಲ್ಲಿಗೆ
D) ಸಂಪಿಗೆ
ಉತ್ತರ: B
ವಿವರಣೆ: ತಾವರೆ ಎಂದರೆ ವನಜ.
67. ಹೊಸತು ಪದದ ಸಮಾನಾರ್ಥಕ ಪದ ಯಾವುದು?
A) ಹಳೆಯ
B) ನವ
C) ಪುರಾತನ
D) ಪ್ರಾಚೀನ
ಉತ್ತರ: B
ವಿವರಣೆ: ಹೊಸತು ಎಂದರೆ ನವ.
68. ವಸುಧೆ ಪದದ ಸಮಾನಾರ್ಥಕ ಪದ ಯಾವುದು?
A) ಆಕಾಶ
B) ಭೂಮಿ
C) ನೀರು
D) ಗಾಳಿ
ಉತ್ತರ: B
ವಿವರಣೆ: ವಸುಧೆ ಎಂದರೆ ಭೂಮಿ.
69. ಸುತ ಪದದ ಸಮಾನಾರ್ಥಕ ಪದ ಯಾವುದು?
A) ಮಗಳು
B) ಮಗ
C) ತಂದೆ
D) ತಾಯಿ
ಉತ್ತರ: B
ವಿವರಣೆ: ಸುತ ಎಂದರೆ ಮಗ.
70. ನೀರು ಪದದ ಸಮಾನಾರ್ಥಕ ಪದ ಯಾವುದು?
A) ಜಲಧಿ
B) ಮೇಘ
C) ಅಂಬು
D) ಶೈಲ
ಉತ್ತರ: C
ವಿವರಣೆ: ನೀರು ಎಂಬುದು ಜಲ, ಅಂಬು, ಪಯ, ಉದಕಕ್ಕೆ ಸಮಾನಾರ್ಥಕವಾಗಿದೆ. ಜಲಧಿ (ಸಮುದ್ರ), ಮೇಘ (ಮೋಡ), ಶೈಲ (ಪರ್ವತ) ಇದರ ಸಮಾನಾರ್ಥಕಗಳಲ್ಲ.
71. ಕಮಲ ಪದಕ್ಕೆ ಸಮನಾದ ಪದ.
A) ನೀರಜ
B) ಪಾಣಿ
C) ಅರಣ್ಯ
D) ಪಾಷಾಣ
ಉತ್ತರ: A
ವಿವರಣೆ: ಕಮಲ ಎಂದರೆ ನೀರಜ, ಅಂಬುಜ, ಪಂಕಜ, ತಾವರೆ. ಪಾಣಿ (ಕೈ), ಅರಣ್ಯ (ಕಾಡು), ಪಾಷಾಣ (ಕಲ್ಲು).
72. ಕೈ ಪದದ ಸಮಾನಾರ್ಥಕ ಪದ.
A) ಹಸ್ತಿ
B) ಕರ
C) ಅಕ್ಷಿ
D) ಲೋಚನ
ಉತ್ತರ: B
ವಿವರಣೆ: ಕೈ ಎಂದರೆ ಹಸ್ತ, ಕರ, ಪಾಣಿ. ಹಸ್ತಿ (ಆನೆ), ಅಕ್ಷಿ, ಲೋಚನ (ಕಣ್ಣು).
73. ದುಂಬಿ ಪದದ ಸಮಾನಾರ್ಥಕ ಪದ.
A) ಭ್ರಮರ
B) ಮಧುಕರ
C) ಭೃಂಗ
D) ಮೇಲಿನ ಎಲ್ಲವೂ
ಉತ್ತರ: D
ವಿವರಣೆ: ಮಿಲಿಂದ, ಭ್ರಮರ, ಮಧುಪ, ಮಧುಕರ, ಭೃಂಗ – ಇವೆಲ್ಲವೂ ದುಂಬಿಯ ಸಮಾನಾರ್ಥಕ ಪದಗಳು.
74. ಗೆಳೆಯ ಪದದ ಸಮಾನಾರ್ಥಕವಲ್ಲದ ಪದ.
A) ಮಿತ್ರ
B) ಸಖ
C) ಸಹಚರ
D) ವಲ್ಲಭ
ಉತ್ತರ: D
ವಿವರಣೆ: ವಲ್ಲಭ ಎಂದರೆ ಗಂಡ (ಪತಿ). ಮಿತ್ರ, ಸಖ, ಸಹಚರ ಗೆಳೆಯನ ಸಮಾನಾರ್ಥಕ.
75. ಸೂರ್ಯ ಪದದ ಮತ್ತೊಂದು ಹೆಸರು.
A) ನಿಶಾಕರ
B) ದಿನಕರ
C) ಚಂದಿರ
D) ಹಿಮಕರ
ಉತ್ತರ: B
ವಿವರಣೆ: ಸೂರ್ಯನ ಸಮಾನಾರ್ಥಕಗಳು: ರವಿ, ದಿನಕರ, ಭಾನು, ಭಾಸ್ಕರ. ನಿಶಾಕರ, ಚಂದಿರ, ಹಿಮಕರ (ಚಂದ್ರ).
76. ಗಣೇಶ ಪದದ ಸಮಾನಾರ್ಥಕವಲ್ಲದ ಪದ.
A) ಲಂಬೋದರ
B) ವಿನಾಯಕ
C) ತ್ರಿಪಥಗಾ
D) ಏಕದಂತ
ಉತ್ತರ: C
ವಿವರಣೆ: ತ್ರಿಪಥಗಾ ಎಂದರೆ ಗಂಗೆ. ಲಂಬೋದರ, ವಿನಾಯಕ, ಏಕದಂತ ಗಣೇಶನ ಸಮಾನಾರ್ಥಕಗಳು.
77. ಆಕಾಶ ಪದದ ಮತ್ತೊಂದು ಹೆಸರು.
A) ಭೂಮಿ
B) ನಭ
C) ಶರಧಿ
D) ಮೇಘ
ಉತ್ತರ: B
ವಿವರಣೆ: ಆಕಾಶ ಎಂದರೆ ಆಗಸ, ಗಗನ, ಬಾನು, ನಭ, ವ್ಯೋಮ.
78. ಭೂಮಿ ಪದಕ್ಕೆ ಸಮನಾದ ಪದ.
A) ಧರಿತ್ರಿ
B) ಅಗ್ನಿ
C) ಅರಣ್ಯ
D) ಅಂಬರ
ಉತ್ತರ: A
ವಿವರಣೆ: ಭೂಮಿ ಎಂದರೆ ಮಹಿ, ಪೃಥ್ವಿ, ಧರಣಿ, ಧರಿತ್ರಿ, ವಸುಂಧರೆ, ಇಳೆ.
79. ಚಂದ್ರ ಪದದ ಸಮಾನಾರ್ಥಕ.
A) ಭಾನು
B) ಹಿಮಾಂಶು
C) ರವಿ
D) ಅರ್ಕ
ಉತ್ತರ: B
ವಿವರಣೆ: ಚಂದ್ರ ಎಂದರೆ ಚಂದಿರ, ಹಿಮಕರ, ಶಶಿ, ಹಿಮಾಂಶು, ರಾಕೇಶ.
80. ರಾತ್ರಿ ಪದಕ್ಕೆ ಸಮನಾದ ಪದ.
A) ದಿನಕರ
B) ಶರ್ವರಿ
C) ಸೂರ್ಯ
D) ಚೇತನ
ಉತ್ತರ: B
ವಿವರಣೆ: ರಾತ್ರಿ ಎಂದರೆ ನಿಶಾ, ರಜನಿ, ಶರ್ವರಿ, ಯಾಮಿನಿ.
81. ಬೆಂಕಿ ಪದದ ಸಮಾನಾರ್ಥಕ.
A) ಪಾವಕ
B) ವಾಯು
C) ನೀರು
D) ಹಾಲು
ಉತ್ತರ: A
ವಿವರಣೆ: ಬೆಂಕಿ ಎಂದರೆ ಅಗ್ನಿ, ಅನಲ, ಜ್ವಾಲಾ, ಪಾವಕ.
82. ಕಲ್ಲು ಪದಕ್ಕೆ ಸಮನಾದ ಪದ.
A) ಗಜ
B) ವನ
C) ಪಾಷಾಣ
D) ತನು
ಉತ್ತರ: C
ವಿವರಣೆ: ಕಲ್ಲು ಎಂದರೆ ಶಿಲೆ, ಪಾಷಾಣ, ಶೈಲ, ಶಿಲ್ಪ.
83. ಹಾಲು ಪದಕ್ಕೆ ಸಮನಾದ ಪದ.
A) ಪಯ
B) ಜಲ
C) ಕಂಬನಿ
D) ಅಮೃತ
ಉತ್ತರ: A
ವಿವರಣೆ: ಹಾಲು ಎಂದರೆ ಕ್ಷೀರ, ಪಯ, ದುಗ್ಧ.
84. ಪಾರ್ವತಿ ಪದಕ್ಕೆ ಸಮನಾದ ಪದ.
A) ರಮಾ
B) ವೈದೇಹಿ
C) ಗಿರಿಜಾ
D) ಸರಸ್ವತಿ
ಉತ್ತರ: C
ವಿವರಣೆ: ಪಾರ್ವತಿ ಎಂದರೆ ಶೈಲಜಾ, ಗೌರಿ, ಗಿರಿಜಾ, ದಾಕ್ಷಾಯಿಣಿ.
85. ಅಮೃತ ಪದದ ಸಮಾನಾರ್ಥಕ.
A) ಪೀಯೂಷ
B) ವಿಷ
C) ಕಾಸು
D) ಮರಣ
ಉತ್ತರ: A
ವಿವರಣೆ: ಅಮೃತ ಎಂದರೆ ಅಮರ್ದು, ಸುಧೆ, ಪೀಯೂಷ, ಸೋಮ.
86. ಕತ್ತಲು ಪದದ ಸಮಾನಾರ್ಥಕ ಪದ.
A) ತಮ
B) ಜ್ಯೋತಿ
C) ಅಗ್ನಿ
D) ಚೆಂದ
ಉತ್ತರ: A
ವಿವರಣೆ: ಕತ್ತಲು ಎಂದರೆ ತಮ, ಅಂಧಕಾರ, ತಿಮಿರ, ತಮಸ್.
87. ಗಂಗೆ ಪದಕ್ಕೆ ಸಮಾನವಾದ ಪದ.
A) ಯಮುನೆ
B) ಕಾಲಿಂದಿನಿ
C) ಭಾಗೀರಥಿ
D) ಸರಸ್ವತಿ
ಉತ್ತರ: C
ವಿವರಣೆ: ಗಂಗೆ ಎಂದರೆ ಭಾಗೀರಥಿ, ಜಾಹ್ನವಿ, ಮಂದಾಕಿನಿ, ಸುರನದಿ.
88. ಯಮುನೆ ಪದದ ಸಮಾನಾರ್ಥಕ ಪದ.
A) ಸುರನದಿ
B) ಅರ್ಕಜಾ
C) ದೇವನದಿ
D) ತ್ರಿಪಥಗಾ
ಉತ್ತರ: B
ವಿವರಣೆ: ಯಮುನೆ ಎಂದರೆ ಕಾಲಿಂದಿನಿ, ಸೂರ್ಯಸುತೆ, ತರಣಿಜಾ, ಅರ್ಕಜಾ.
89. ಶಿವ ಪದಕ್ಕೆ ಸಮನಾದ ಪದ.
A) ಗಂಗಾಧರ
B) ರಾಮ
C) ಕೃಷ್ಣ
D) ವಿಧಾತಾ
ಉತ್ತರ: A
ವಿವರಣೆ: ಶಿವ ಎಂದರೆ ಶಂಕರ, ಹರ, ನೀಲಕಂಠ, ರುದ್ರ, ಗಂಗಾಧರ.
90. ಲಕ್ಷ್ಮೀ ಪದದ ಸಮಾನಾರ್ಥಕ ಪದ.
A) ಗೌರಿ
B) ಇಂದಿರಾ
C) ಸೀತೆ
D) ದ್ರೌಪದಿ
ಉತ್ತರ: B
ವಿವರಣೆ: ಲಕ್ಷ್ಮೀ ಎಂದರೆ ಶ್ರೀ, ಲಕುಮಿ, ರಮಾ, ಇಂದಿರಾ, ಹರಿಪ್ರಿಯಾ.
91. ವಿಷ್ಣು ಪದಕ್ಕೆ ಸಮನಾದ ಪದ.
A) ಬ್ರಹ್ಮ
B) ಮುಕುಂದ
C) ಈಶ್ವರ
D) ಗಣೇಶ
ಉತ್ತರ: B
ವಿವರಣೆ: ವಿಷ್ಣು ಎಂದರೆ ಹರಿ, ನಾರಾಯಣ, ಜನಾರ್ದನ, ಮುಕುಂದ.
92. ಹಕ್ಕಿ ಪದದ ಸಮಾನಾರ್ಥಕ.
A) ನಾಗ
B) ವಿಹಂಗ
C) ಭುಜಂಗ
D) ಕಪಿ
ಉತ್ತರ: B
ವಿವರಣೆ: ಹಕ್ಕಿ ಎಂದರೆ ಪಕ್ಷಿ, ಖಗ, ವಿಹಂಗ, ನಭಚರ.
93. ಕೃಷ್ಣ ಪದದ ಸಮಾನಾರ್ಥಕ ಪದ.
A) ಪಾರ್ಥಸಾರಥಿ
B) ರಾಘವ
C) ಅರ್ಕಜಾ
D) ಜಾನಕಿ
ಉತ್ತರ: A
ವಿವರಣೆ: ಕೃಷ್ಣ ಎಂದರೆ ಮುರಾರಿ, ಗೋವಿಂದ, ಪಾರ್ಥಸಾರಥಿ, ಮುರಳಿಧರ.
94. ರಾಮ ಪದಕ್ಕೆ ಸಮನಾದ ಪದ.
A) ಮುಕುಂದ
B) ರಘುನಾಥ
C) ಗಾಂಢೀವಿ
D) ಪುಲಿ
ಉತ್ತರ: B
ವಿವರಣೆ: ರಾಮ ಎಂದರೆ ಪುರುಷೋತ್ತಮ, ರಾಘವ, ಸೀತಾಪತಿ, ರಘುನಾಥ.
95. ಅರ್ಜುನ ಪದಕ್ಕೆ ಸಮನಾದ ಪದ.
A) ಕಿರೀಟಿ
B) ದುರ್ಯೋಧನ
C) ಭೀಮ
D) ದ್ರೋಣ
ಉತ್ತರ: A
ವಿವರಣೆ: ಅರ್ಜುನ ಎಂದರೆ ಪಾರ್ಥ, ಕಿರೀಟಿ, ಸವ್ಯಸಾಚಿ, ಗಾಂಢೀವಿ, ಧನಂಜಯ.
96. ಅಧ್ಯಾಪಕ ಪದದ ಸಮಾನಾರ್ಥಕ ಪದ.
A) ಶಿಕ್ಷಕ
B) ವಿದ್ಯಾರ್ಥಿ
C) ಸಹಪಾಠಿ
D) ಸೇವಕ
ಉತ್ತರ: A
ವಿವರಣೆ: ಅಧ್ಯಾಪಕ ಎಂದರೆ ಶಿಕ್ಷಕ, ಗುರು, ಆಚಾರ್ಯ, ಉಪಾಧ್ಯಾಯ.
97. ಬಾಯಾರಿಕೆ ಪದಕ್ಕೆ ಸಮನಾದ ಪದ.
A) ತೃಷೆ
B) ಸಂತೋಷ
C) ಯುದ್ಧ
D) ಬೆಂಕಿ
ಉತ್ತರ: A
ವಿವರಣೆ: ಬಾಯಾರಿಕೆ ಎಂದರೆ ತೃಷೆ, ತೃಷ್ಣಾ, ದಾಹ.
98. ಧನಿಕ ಪದಕ್ಕೆ ಸಮನಾದ ಪದ.
A) ಶ್ರೀಮಂತ
B) ಬಡವ
C) ರೈತ
D) ಶಿಕ್ಷಕ
ಉತ್ತರ: A
ವಿವರಣೆ: ಧನಿಕ ಎಂದರೆ ಶ್ರೀಮಂತ, ಬಲ್ಲಿದ, ಸಿರಿವಂತ.
99. ಸೀತೆ ಪದದ ಸಮಾನಾರ್ಥಕ ಪದ.
A) ಮೈಥಿಲಿ
B) ರುಕ್ಮಿಣಿ
C) ರಾಧೆ
D) ಶಚಿ
ಉತ್ತರ: A
ವಿವರಣೆ: ಸೀತೆ ಎಂದರೆ ವೈದೇಹಿ, ಜಾನಕಿ, ಮೈಥಿಲಿ.
100. ಅಕ್ಕ ಪದದ ಸಮಾನಾರ್ಥಕ.
A) ಅಗ್ರಜೆ
B) ತಂಗಿ
C) ಮಗಳು
D) ಗೆಳತಿ
ಉತ್ತರ: A
ವಿವರಣೆ: ಅಕ್ಕ ಎಂದರೆ ಅಗ್ರಜೆ, ಹಿರಿಯಕ್ಕ.
